News Kannada
Friday, December 09 2022

ಸಮುದಾಯ

ಮಡಿಕೇರಿ: ಸೆ.27 ರಂದು ಬೃಹತ್ ಈದ್ ಮಿಲಾದ್ ಘೋಷಣಾ ರ‍್ಯಾಲಿ

Madikeri: Massive Eid Milad rally to be held on Sept. 27
Photo Credit : By Author

ಮಡಿಕೇರಿ, ಸೆ.24: ಸುನ್ನಿ ಯುವಜನ ಸಂಗಂ ನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪ್ರವಾದಿ ಜನ್ಮದಿನದ ಅಂಗವಾಗಿ ಸೆ.27 ರಂದು ಬೃಹತ್ ಈದ್ ಮಿಲಾದ್ ಘೋಷಣಾ ರ‍್ಯಾಲಿ ಹಾಗೂ ಪ್ರವಾದಿ ಪ್ರೇಮದ ಬಗ್ಗೆ ಭಾಷಣ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಅಬೂಬಕರ್ ದಾರಿಮಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನ್ಯಾಯ ಕೈ ಜಾರುತ್ತಿರುವ ಲೋಕ, ನ್ಯಾಯ ತುಂಬಿದ ಪ್ರವಾದಿ” ಎಂಬ ಘೋಷವಾಕ್ಯದೊಂದಿಗೆ ಪ್ರವಾದಿವರ್ಯರ ಜೀವನದ ಸಂದೇಶವನ್ನು ಸಾರಿ ಹೇಳುವ ಮೂಲಕ ನ್ಯಾಯ, ನೀತಿ, ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸಹಬಾಳ್ವೆ ಬಗ್ಗೆ ಅರಿವು ಮೂಡಿಸಲಾಗುವುದು. ಸುಸಂಸ್ಕೃತ ಹಾಗೂ ಪ್ರಜ್ಞಾವಂತ ಯುವ ಪೀಳಿಗೆಯನ್ನು ಮರಳಿ ಪಡೆಯುವುದರ ಮೂಲಕ ಉತ್ತಮ ಸಮಾಜದ ನಿರ್ಮಾಣದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಸೆ.27 ರಂದು ಸಂಜೆ 4 ಗಂಟೆಗೆ ಸಿದ್ದಾಪುರದ ಜುಮಾ ಮಸೀದಿಯ ಆವರಣದಲ್ಲಿ ಬೃಹತ್ ರ‍್ಯಾಲಿ ಆರಂಭವಾಗಿ ಸಿದ್ದಾಪುರ ನಗರದ ಮೂಲಕ ಸಾಗಿ ನೆಲ್ಯಹುದಿಕೇರಿ ಶಾದಿ ಮಹಲ್ ಬಳಿ ಕೊನೆಗೊಳ್ಳಲಿದೆ. ನಂತರ ಮೌಲಿದ್ ಪಾರಾಯಣ ನಡೆಯಲಿದೆ ಎಂದು ತಿಳಿಸಿದರು.

ಮಗ್ರಿಬ್ ನಮಾಜಿನ ಬಳಿಕ ಸಮಸ್ತ ನೇತಾರರು, ಖ್ಯಾತ ವಕೀಲರು, ಉಲಮಾ ಶ್ರೇಷ್ಠರು ಹಾಗೂ ಅಡ್ವಕೇಟ್ ಓಣಂಬಿಳ್ಳಿ ಮುಹಮ್ಮದ್ ಫೈಝಿ ಕಾರ್ಯಕ್ರಮದಲ್ಲಿ ಪ್ರವಾದಿ ಸ್ನೇಹದ ಅನಿವಾರ್ಯತೆಯ ಬಗ್ಗೆ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಅಬೂಬಕರ್ ಹೇಳಿದರು.

ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ, ಕೊಡಗಿನ ಉಪ ಖಾಝಿ ಎಂ.ಎಂ.ಅಬ್ದುಲ್ಲಾ ಫೈಝಿ ಎಡಪಾಲ ಉದ್ಘಾಟಿಸಲಿದ್ದು, ಎಸ್‌ವೈಎಸ್ ಜಿಲ್ಲಾ ಸಮಿತಿಯ ಅಧ್ಯಕ್ಷ ಸಿ.ಪಿ.ಎಂ ಬಶೀರ್ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ.

ಎಸ್‌ಕೆಜೆಎಂಸಿಸಿ ರಾಜ್ಯ ಕಾರ್ಯದರ್ಶಿ ಎಂ.ಅಬ್ದುಲ್‌ರಹಮಾನ್ ಮುಸ್ಲಿಯಾರ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿಗಳಾದ ಎ.ಸಿ.ಉಸ್ಮಾನ್ ಫೈಝಿ ಮಾಪಿಳತ್ತೋಡು, ವೈ.ಎಂ.ಉಮರ್ ಫೈಝಿ ಸಿದ್ದಾಪುರ, ಅಶ್ರಫ್ ಫೈಝಿ ಕುಶಾಲನಗರ, ಜಿಲ್ಲೆಯ ಹಲವು ಉಲಮಾ ಉಮರಾ, ನೇತಾರರು, ಸಮಸ್ತ ಹಾಗೂ ಪೋಷಕ ಸಂಘಟನೆಗಳ ನಾಯಕರು, ಕಾರ್ಯಕರ್ತರು, ಕೊಡಗಿನ ಮುಸ್ಲಿಂ ಮೊಹಲ್ಲಾಗಳ ಪದಾಧಿಕಾರಿಗಳು ಹಾಗೂ ಮೊಹಲ್ಲಾ ನಿವಾಸಿಗಳು ಭಾಗವಹಿಸಲಿದ್ದಾರೆ ಎಂದರು.

ಕೊಡಗಿನ ಎಲ್ಲಾ ಮುಸಲ್ಮಾನ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಬೂಬಕರ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ, ನಿರ್ವಾಹಕ ಕಾರ್ಯದರ್ಶಿಗಳಾದ ಇಕ್ಬಾಲ್ ಮುಸ್ಲಿಯರ್, ಹನೀಫ್ ಮುಸ್ಲಿಯಾರ್, ಉಪಾಧ್ಯಕ್ಷರಾದ ಮುಹಮ್ಮದ್ ಆಲಿ ಹಾಗೂ ರಫೀಕ್ ಹಾಜಿ ಉಪಸ್ಥಿತರಿದ್ದರು.

See also  ಕೊಡಗು: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ ಅರೆಭಾಷೆ ಪದಕೋಶ ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1620
Coovercolly Indresh

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು