News Kannada
Thursday, December 08 2022

ಸಮುದಾಯ

ಮಂಗಳೂರು: ಅಖಿಲ ಭಾರತ ಬ್ಯಾರಿ ಪರಿಷತ್‌ನಿಂದ ಬ್ಯಾರಿ ಭಾಷಾ ದಿನಾಚರಣೆ

Mangaluru: All India Bari Parishad celebrates Bari Language Day
Photo Credit : R Bhat

ಮಂಗಳೂರು, ಅ.3: ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆಯು ನಗರದ ಖಾಸಗಿ ಹೊಟೇಲ್ ಸಭಾಂಗಣದ ಸಂಶೋಧಕ ಮರ್ಹೂಂ ಪ್ರೊ. ಬಿ.ಎಂ. ಇಚ್ಲಂಗೋಡು ವೇದಿಕೆಯಲ್ಲಿ ಸೋಮವಾರ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಕರಾವಳಿಗರು ಹೊರ ಜಿಲ್ಲೆ, ರಾಜ್ಯ, ದೇಶ, ವಿದೇಶಕ್ಕೆ ಹೋದರೂ ನಮ್ಮತನ ಉಳಿಸಿಕೊಳ್ಳುತ್ತಿರುವುದು ಕರಾವಳಿಯ ವೈಶಿಷ್ಟ್ಯವಾಗಿದೆ. ಅನೇಕತೆಯೇ ದೇಶದ, ಭಾಷೆಯ ಜೀವಾಳವಾಗಿದೆ. ಸಾಮಾಜಿಕ ಜಾಲತಾಣಗಳ ಸುಳಿಯ ಮಧ್ಯೆ ಭಾಷೆಗಳು ಸಿಲುಕಿ ಚಲಾವಣೆಯಲ್ಲಿಲ್ಲದ ನಾಣ್ಯದಂತಿವೆ. ಹಾಗಾಗಿ ಭಾಷೆಯ ಅಸ್ಮಿತೆಗೆ ಭಾಷಾ ದಿನಾಚರಣೆ ಮುಖ್ಯವಾಗಿದೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಬ್ಯಾರಿ ಭಾಷೆಯ ಉಚ್ಛಾರಣೆಯಲ್ಲಿ ಸೂಕ್ಷ್ಮತೆ ಮುಖ್ಯವಾಗಿದೆ. ಆ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಭಾಷೆಯನ್ನು ಬಳಸಬೇಕಿದೆ‌. ಅಳಿಯುವ ಭಾಷೆಗಳ ಪಟ್ಟಿಯಲ್ಲಿದ್ದ ಬ್ಯಾರಿ ಭಾಷೆಯನ್ನು ಉಳಿಸಲು ಬ್ಯಾರಿ ಅಕಾಡಮಿಯಲ್ಲದೆ ಬೇರೆ ಬೇರೆ ಬ್ಯಾರಿ ಸಂಘಟನೆಗಳು ಶಕ್ತಿಮೀರಿ ಪ್ರಯತ್ನಿಸುತ್ತಿರುವುದು ಶ್ಲಾಘನಾರ್ಹ. ಇಂದು ಹಲವು ಕಡೆಗಳಲ್ಲಿ ಬ್ಯಾರಿ ಭಾಷಾ ದಿನ ಆಚರಿಸಿರುವುದು ಸಂತಸದ ವಿಚಾರವಾಗಿದೆ ಎಂದರು‌.

ಪತ್ರಕರ್ತ ಹಂಝ ಮಲಾರ್ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಜಿ.ಎಂ. ಶಾಹುಲ್ ಹಮೀದ್ ಮೆಟ್ರೋ ಅಧ್ತಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತೆರಿಗೆ ಸಲಹೆಗಾರ ಪುಂಡಲೀಕಾಕ್ಷ, ಬ್ಯಾರಿ ವಾರ್ತೆಯ ಸಂಪಾದಕ ಬಶೀರ್ ಬೈಕಂಪಾಡಿ, ಉಪನ್ಯಾಸಕಿ ಸಿಹಾನಾ ಬಿ.ಎಂ., ಸಮಾಜದ ಮುಖಂಡರಾದ ನಝೀರ್ ಉಳ್ಳಾಲ್, ಅಝೀಝ್ ಕುದ್ರೋಳಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭ ಭಾಷಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಸನಬ್ಬ ಮೂಡುಬಿದಿರೆ ಬ್ಯಾರಿ ಹಾಡುಗಳನ್ನಾಡಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಗೌರವಾಧ್ಯಕ್ಷ ಯೂಸುಫ್ ವಕ್ತಾರ್ ಸ್ವಾಗತಿಸಿದರು. ಅಬ್ದುಲ್ ಖಾದರ್ ಇಡ್ಮ ವಂದಿಸಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಮಾಜಿ ಅಧ್ಯಕ್ಷ ಜೆ‌. ಹುಸೈನ್ ಮತ್ತು ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.

See also  ಮಂಗಳೂರು: ನೆಹರೂ ಮೈದಾನದಲ್ಲಿ ಆ.15ರಂದು ಸ್ವಾತಂತ್ರ್ಯ ದಿನಾಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

186

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು