ಚಿಕ್ಕಮಗಳೂರು: ಕಿಸಾಲ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ಕದ್ರಿಮಿದ್ರಿ ವೃದ್ದಾಶ್ರಮದಲ್ಲಿ ಅಕ್ಮಲ್ ಅಭಿಮಾನಿಗಳ ಬಳಗದವರು ವೃದ್ದರಿಗೆ ಹಣ್ಣು ಹಂಪಲು ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಕೆಂಪನಹಳ್ಳಿ ರಸೂಲ್‌ಖಾನ್ ಸಾಮಾಜಿಕ ಕಾರ್ಯಗಳ ಮೂಲಕ ಜನಪರ ಕಾಳಜಿ ಹೊಂದಿ ನೊಂದವರಿಗೆ ಉಚಿತ ಆರೋಗ್ಯ, ಅಂಬುಲೆನ್ಸ್ ಸೇರಿದಂತೆ ಸಹಾಯಹಸ್ತ ಚಾಚಿದವರು ಸಿ.ಎನ್.ಅಕ್ಮಲ್. ಇಂತಹ ವ್ಯಕ್ತಿಯ ಹುಟ್ಟುಹಬ್ಬವನ್ನು ವೃದ್ದಾಶ್ರಮದಲ್ಲಿ ಆಚರಿಸುತ್ತಿರುವುದು ಸಂತಸ ವಿಷಯ ಎಂದರು.
ವೈಯಕ್ತಿಕವಾಗಿ ಉದ್ಯಮಿಯಾಗಿರುವ ಅಕ್ಮಲ್ ಅವರು ಸಾರ್ವಜನಿಕ ಸೇವೆಯಲ್ಲಿ ಅಪಾರ ಕೊಡುಗೆ ನೀಡಿ ದ್ದಾರೆ. ಕೊರೋನಾ ಸಂದರ್ಭದಲ್ಲಿ ಸಾವಿರಾರು ಮಂದಿಗೆ ಆಹಾರ ಕಿಟ್, ಉಚಿತ ಮಾಸ್ಕ್‌ಗಳನ್ನು ವಿತರಿಸಿ ಕಾಪಾಡುವ ಜೊತೆಗೆ ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಸಾರ್ವ ಜನಿಕ ಸೇವೆಗೆ ಅವಕಾಶ ಕಲ್ಪಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಪೈಲ್ವಾನ್ ಜೋಹರ್, ಜಬೀ, ರಿಜ್ವಾನ್, ವಿನಾಯಕ, ಸಾದಿಕ್, ಅಜ್ಮಲ್, ಆದಿಲ್, ಸರ್ವರ್, ಶಂಶೀರ್, ಮುಭಾರಕ್, ಇರ್ಪಾನ್ ಮತ್ತಿತರರು ಹಾಜರಿದ್ದರು.