ಮಂಗಳೂರು: ಮಂಗಳೂರಿನ ಬಜಾಲ್ ಜಲ್ಲಿಗುಡ್ಡೆಯಲ್ಲಿ ಶ್ರೀ ಅಂಬಾ ಭವಾನಿ ಭಜನಾ ಮಂಡಳಿಯ 42ನೇ ವಾರ್ಷಿಕ ಅರ್ಧ ಏಕಾಹ ಭಜನೋತ್ಸವ ಮಾರ್ಚ್ 4ರ ಶನಿವಾರದಂದು ನಡೆಯಲಿದೆ. ಶನಿವಾರದಂದು ಬೆಳಗ್ಗೆ ಗಣಹೋಮ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಮಧ್ಯಾಹ್ನ 12ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ.
ಸಂಧ್ಯಾ ಕಾಲ 6.39ಕ್ಕೆ ದೀಪ ಬೆಳಗುವುದರೊಂದಿಗೆ ಭಜನಾ ಕಾರ್ಯ ಆರಂಭವಾಗಲಿದ್ದು ರಾತ್ರಿ 12 ಗಂಟೆಗೆ ಮಹಾಪೂಜೆ ನಡೆಯಲಿದೆ. ಮಾರ್ಚ್ 5 ರವಿವಾರದಂದು ಬೆಳಗ್ಗೆ ಮಂಗಳಾರತಿಯೊಂದಿಗೆ ಭಜನಾ ಮಂಗಲೋತ್ಸವ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸುವಂತೆ ಕ್ಷೇತ್ರದ ಅಧ್ಯಕ್ಷರು ಮನವಿ ಮಾಡಿದ್ದಾರೆ.