News Kannada
Thursday, March 23 2023

ಸಮುದಾಯ

ಕುಂದಾಪುರ: ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ

Spectacles distribution programme
Photo Credit : News Kannada

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ,ಹಿಂದೂ ಅಭ್ಯುದಯ ಸಂಘ ನಾವುಂದ ಮತ್ತು ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ, ಮುದ್ದುಮನೆ-ಶಿರೂರು ವತಿಯಿಂದ ಜಂಟಿ ಆಶ್ರಯದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ 123 ಜನರಿಗೆ ಉಚಿತವಾಗಿ ಕನ್ನಡಕವನ್ನು ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಶ್ರೀ ಕೆ.ಆರ್. ನಾಯ್ಕ,ಸೂಪರ್ ಗ್ರೇಡ್ ಇಲೆಕ್ನಿಕಲ್ ಕಂಟ್ರಾಕ್ಟರ್, ಹಂಗಳೂರು-ಕುಂದಾಪುರ ಅರ್ಹ ಫಲಾನುಭವಿಗಳಿಗೆ ಕನ್ನಡಕಗಳನ್ನು ವಿತರಿಸಿದರು.

ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ವೆಂಕಟೇಶ ನಾವುಂದ ಅಧ್ಯಕ್ಷತೆಯನ್ನು ವಹಿಸಿದ್ದರು.

ಶಿರೂರು-ಮುದ್ದುಮನೆ ಕಣ್ಣಿನ ಆಸ್ಪತ್ರೆ ಪ್ರತಿನಿಧಿ ಶಂಕರ ಶೆಟ್ಟಿ ಕುಂದಾಪುರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಾವುಂದ ಹಿಂದೂ ಅಭ್ಯುದಯ ಸಂಘದ ಅಧ್ಯಕ್ಷರಾದ ಶಶಿಧರ ಎಂ. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಎ.ಶಿವರಾಮ ಮಧ್ಯಸ್ಥ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಸದಸ್ಯರಾದ ಸುದರ್ಶನ ಗಾಣಿಗ, ಮನೋಹರ ಎನ್.ಕೆ, ಗುರುರಾಜ ಶೇಟ್,ಜಿತೇಶ್ ಕೆ.ಪೂಜಾರಿ,ವಿಘ್ನೇಶ್ವರ ಕೆ. ನಿರ್ವಹಿಸಿದರು.

See also  ಅಥೆನ್ಸ್: ರೈಲುಗಳ ನಡುವೆ ಡಿಕ್ಕಿ, ಸಾವಿನ ಸಂಖ್ಯೆ 38ಕ್ಕೆ ಏರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು