News Kannada
Saturday, March 02 2024
ಸಮುದಾಯ

ರಸ್ತೆ ಬದಿಯ ಹುಲ್ಲು ಕೊಯ್ದು ಗೋಶಾಲೆಗೆ ನೀಡಿ: ವಿಶ್ವಪ್ರಸನ್ನ ಶ್ರೀಪಾದರು

Cut the roadside grass and give it to the gaushala: Vishwaprasanna Sripada
Photo Credit : By Author

ಮೈಸೂರು: ಬಹುತೇಕ ನಾಡಿನೆಲ್ಲೆಡೆ ಒಳ್ಳೆಯ ಮಳೆಯಾಗಿ ಪ್ರಕೃತಿ ಹಸಿರಿನಿಂದ ಮೈದುಂಬಿಕೊಂಡಿದೆ ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಹುಲ್ಲುಗಳನ್ನು ಗೋವುಗಳಿಗೆ ನೀಡುವ ಕೆಲಸ ಮಾಡುವಂತೆ ನೀಲಾವರ ಗೋಶಾಲೆಯ ರೂವಾರಿ ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಜನತೆಯಲ್ಲಿ ಮನವಿ ಮಾಡಿದ್ದಾರೆ.

ಈಗಾಗಲೇ ಮಳೆಯಿಂದಾಗಿ ಶಾಲೆ ಕಚೇರಿಗಳ ಆವರಣ, ತೋಟಗಳು, ರಸ್ತೆ ಬದಿಗಳಲ್ಲೂ ಸಮೃದ್ಧ ಹಸಿರು ಹುಲ್ಲು ಬೆಳೆದಿದೆ. ಈ ಹುಲ್ಲನ್ನು ಊರಿನ ಸಂಘಟನೆಗಳು, ಯುವಕ ಮಂಡಲಗಳು, ಸ್ವಯಂಸೇವಾ ಸಂಸ್ಥೆ, ಭಜನಾ ಮಂಡಳಿಗಳ ಸದಸ್ಯರು ವಾರಕ್ಕೊಂದು ದಿನ ಕನಿಷ್ಠ ಒಂದು ಘಂಟೆ ಶ್ರಮದಾನದ ಮೂಲಕ ಕಟಾವು ಮಾಡಿ ಸಮೀಪದ ಗೋಶಾಲೆಗಳು, ಮಠ, ದೇವಸ್ಥಾನಗಳಲ್ಲಿರುವ ಹಸುಗಳಿಗೆ ನೀಡುವಂತಾಗಬೇಕು ಎಂದು ಹೇಳಿದ್ದಾರೆ.

ಹುಲ್ಲನ್ನು ರವಾನಿಸಲು ಊರಿನ ಯಾರಾದರೂ ಸಹೃದಯ ದಾನಿಗಳ ನೆರವು ಪಡೆಯಬಹುದು, ಇದರಿಂದಾಗಿ ರಸ್ತೆಬದಿಯ ಅಥವಾ ತೋಟ ಇತ್ಯಾದಿಗಳ ಸ್ವಚ್ಛತೆಯೂ ಆಗುತ್ತದೆ ಜೊತೆಗೆ ಗೋಶಾಲೆಗಳ ಗೋವುಗಳಿಗೆ ಸಮೃದ್ಧ ಹಸಿರು ಹುಲ್ಲು ಒದಗಿಸಿದ ಪುಣ್ಯವೂ ನಮ್ಮದಾಗುತ್ತದೆ ಎಂದ ಶ್ರೀಗಳು, ಕೆಲವು ಕಡೆಗಳಲ್ಲಿ ಗೋವಿಗಾಗಿ ಮೇವು ಅಭಿಯಾನ ನಡೆಯುತ್ತಿವೆ. ಗೋರಕ್ಷಣೆಯ ಕಾರ್ಯದಲ್ಲಿ ಈ ಮೂಲಕವೂ ಎಲ್ಲರೂ ತೊಡಗಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು