ವಿಷ್ಣುವಿನ ಎಂಟನೇ ಅವತಾರವಾದ ಶ್ರೀ ಕೃಷ್ಣನ ಜನನವನ್ನು ಆಚರಿಸುವ ದಿನಚನ್ನು ಕೃಷ್ಣ ಜನ್ಮಾಷ್ಟಮಿ ಎಂದು ಕರೆಯುತ್ತಾರೆ. ಹಿಂದೂ ಪಂಚಾಗದ ಪ್ರಕಾರ ಭಾದ್ರಪ ಮಾಸದ ಕೃಷ್ಣ ಪಕ್ಷದ ಎಂಟನೇ ತಿಥಿಯಂದು ಆಚರಿಸಲಾಗುತ್ತೆ. ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣಾಷ್ಟಮಿ, ಕೃಷ್ಣ ಜಯಂತಿ, ಗೋಕುಲಾಷ್ಟಮಿ, ಯದುಕುಲಾಷ್ಟಮಿ ಎಂದು ಕರೆಯುತ್ತಾರೆ.
ಹಿಂದೂ ಹಬ್ಬಗಳ ಪ್ರಮುಖ ಹಬ್ಬಗಳಲ್ಲಿ ಇದೂ ಒಂದಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಇಡೀ ದಿನ ಉಪವಾಸ ಕೈಗೊಂಡು ಶ್ರೀ ಕೃಷ್ಣನ ನಾಮಸ್ಮರಣೆ ಮಾಡುತ್ತಾ ಭಜನೆ ಹಾಡು, ಜಾಗರಣೆ ಮಾಡುತ್ತಾ ಕಳೆಯುತ್ತಾರೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ಮಹತ್ವ
ಶ್ರೀ ಕೃಷ್ಣ ಹುಟ್ಟಿದ ದಿನವನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುವುದು ಮೊದಲಿನಿಂದಲೂ ಬಂದ ರೂಢಿ.
ಶ್ರೀಕೃಷ್ಣನು ಕಂಸನ ಸೋದರಿ ದೇವಕಿ ಹಾಗೂ ವಾಸುದೇವನ ಮಗನಾಗಿ ಕಂಸನ ರಾಜ್ಯವಾದ ಮಥುರಾದ ಕಾರಾಗೃಹದಲ್ಲಿ ಭಾದ್ರಪದ ಮಾಸದ ಎಂಟನೇ ದಿನದ ಮಧ್ಯರಾತ್ರಿ ಶ್ರೀ ಕೃಷ್ಣನು ಜನಿಸಿದನು. ಇದೇ ಕಾರಣದಿಂದಲೋ ಏನೋ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಜಾಗರಣೆಯ ಮೂಲಕ ಆಚರಿಸುತ್ತಾರೆ.
ವಾಸುದೇವ ಹಾಗೂ ದೇವಕಿಯ ಮದುವೆಯ ದಿನದಂದು ಕಂಸನಿಗೆ ಅಶರೀರ ವಾಣಿಯ ಮೂಲಕ ದೇವಕೀಯ ಎಂಟನೇ ಗರ್ಭದಲ್ಲಿ ಹುಟ್ಟಿದ ಮಗುವಿನಿಂದ ಕಂಸನ ಸಾವು ಎಂದು ತಿಳಿದು ದೇವಕಿ ಹಾಗೂ ವಾಸುದೇವನನ್ನು ಕಾರಾಗೃಹದಲ್ಲಿಟ್ಟನು. ದೇವಕಿಗೆ ಹುಟ್ಟಿದ ಏಳು ಮಕ್ಕಳನ್ನು ಕೊಂದ ಕಂಸನು ಕೃಷ್ಣನನ್ನು ಕೊಲ್ಲಲು ತಯಾರಾಗಿದ್ದನು. ಅಷ್ಟರಲ್ಲಿ ವಾಸುದೇವನು ತನ್ನ ಕೊನೆ ಮಗನಾದರೂ ಬದುಕಲಿ ಎಂದು ಆ ಮಗುವನ್ನು ಬುಟ್ಟಿಯಲ್ಲಟ್ಟು ತಲೆ ಮೇಲೆ ಹೊತ್ತು ಗೋಕುಲಕ್ಕೆ ಹೊರಡುವುದು ಎಂದು ನಿರ್ಧರಿಸಿ ಹೊರಟನು ದಾರಿ ಮಧ್ಯೆ ವಾಸುದೇವನಿಗೆ ಯಮುನಾ ನದಿಯು ಎದುರಾಗಿ ಮನಸ್ಸಿನಲ್ಲೇ ದೇವರನ್ನು ನೆನೆಸಿಕೊಂಡು ನದಿ ದಾಟತೊಡಗಿದನು. ಮಳೆ ಒಂದೇ ಸಮನೆ ಸುರಿಯುತ್ತಿತ್ತು ಶ್ರೀಕೃಷ್ಣನಿಗೆ ಮಳೆನೀರು ಬೀಳದಂತೆ ಶೇಷನು ತನ್ನ ತಮ್ಮನನ್ನು ರಕ್ಷಣೆ ಮಾಡುತ್ತಾ ಗೋಕುಲವನ್ನು ತಲುಪಿ ಅಲ್ಲಿ ದೇವಕಿ ಹಾಗೂ ನಂದನ ಮಗುವಿನೊಂದಿಗೆ ಶ್ರೀಕೃಷ್ಣನನ್ನು ಬದಲಿಸಿ ಮತ್ತೆ ಮಥುರಾಕ್ಕೆ ಬಂದನು. ಶ್ರೀಕೃಷ್ಣ ಜೊತೆಯಾಗಿ ಬಂದ ಶೇಷ ಸರ್ಪ ನಂದನ ಮೊದಲನೇ ಪತ್ನಿ ರೋಹಿಣಿಯ ಮಗ ಬಲರಾಮನಾಗಿ ಜನಿಸಿದನು.
ಅಂದಿನಿಂದ ಶ್ರೀಕೃಷ್ಣ ಜನ್ಮದಿನವನ್ನು ಶ್ರೀಕೃಷ್ಣ ಜನ್ಮಾಷ್ಟಮಿಯನ್ನಾಗಿ ಆಚರಿಸುತ್ತಾ ಬಂದಿದ್ದೇವೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ದಹಿ ಹಂಡಿ ಅಥವಾ ಮಡಿಕೆ ಒಡೆಯುವ ಸ್ಫರ್ಧೆ ಏರ್ಪಡಿಸುತ್ತಾರೆ. ಇಲ್ಲಿ ಮಣ್ಣಿನ ಮಡಿಕಡಯಲ್ಲಿ ಮೊಸರು, ಬೆಣ್ಣೆ ಅಥವಾ ಹಾಲನ್ನು ತುಂಬಿಸಿ ಎತ್ತರದ ಸ್ಥಳದಲ್ಲಿ ಕಟ್ಟುತ್ತಾರೆ. ಯುವಕರು ಹಾಗೂ ಯುವತಿಯರ ಗುಂಪು ರಚಿಸಿ ಮಾನವ ಪಿರಾಮಿಡ್‍ಗಳನ್ನು ರಚಿಸಿ ಮಡಿಕೆ ಒಡೆಯಲು ಪ್ರಯತ್ನಿಸುತ್ತಾರೆ. ಅವರು ಆ ಮಡಿಕೆಯನ್ನು ತಲುಪದಂತೆ ಮಾಡಲು ಆ ಗುಂಪಿನ ಮೇಲೆ ನೀರನ್ನು ಎರಚುತ್ತಾರೆ.
ಈ ದಹಿ ಹಂಡಿ ಆಚಸುವುದಕ್ಕೂ ಒಂದು ಕಥೆ ಇದೆ. ಶ್ರೀಕೃಷ್ಣನು ತನ್ನ ಸ್ನೇಹಿತರೊಂದಿಗೆ ಗೋಕುಲದಲ್ಲಿ ಅಕ್ಕ ಪಕ್ಕದ ಮನೆಗಳಿಂದ ತನ್ನ ಗೆಳೆಯರ ಜೊತೆಗೂಡಿ ಮಾನವ ಪಿರಮಿಡ್ ತಯಾರಿಸಿ ಬೆಣ್ಣೆ ಹಾಗೂ ಮೊಸರನ್ನು ಕದಿಯುತ್ತಿದ್ದನು. ಹೀಗಾಗಿ ಶ್ರೀಕೃಷ್ಣನನ್ನು ಬೆಣ್ಣೆ ಕಳ್ಳ ಎಂದು ಕರೆಯುವುದನ್ನು ನಾವು ಕೇಳಿರುತ್ತೇವೆ.