ಉತ್ತರಾಯಣ, ಮಕರ, ಅಥವಾ ಸಂಕ್ರಾಂತಿ ಎಂದು ಕರೆಯಲ್ಪಡುವ ಮಕರ ಸಂಕ್ರಾಂತಿ ಹಿಂದೂಗಳ ಒಂದು ಪ್ರಮುಖ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸೂರ್ಯನು ಪರಿವರ್ತನೆಗೊಳ್ಳುತ್ತಾನೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಸೂರ್ಯನು ದಕ್ಷಿಣ ಗೋಳಾರ್ಧದಿಂದ ಉತ್ತರ ಗೋಳಾರ್ಧದ ಕಡೆಗೆ ತಿರುಗುತ್ತಾನೆ ಇದನ್ನೇ ಉತ್ತರಾಯಣ ಎಂದು ಕರೆಯುತ್ತಾರೆ. ಈ ಹಬ್ಬವನ್ನು ಸೂರ್ಯ ದೇವರಿಗೆ ಸಮರ್ಪಿಸಲಾಗುತ್ತದೆ. ಈ ದಿ ಭಾರತದಾದ್ಯಂತ ಅನೇಕ ರೀತಿಯ ಹಬ್ಬಗಳನ್ನು ಆಚರಿಸಲಾಗುತ್ತದೆ.
ಕೇರಳದಲ್ಲಿ ಮಕರ ಸಂಕ್ರಾಂತಿ, ಅಸ್ಸಾಂನಲ್ಲಿ ಮಾಘ ಬಿಹು, ಹಿಮಾಚಲ ಪ್ರದೇಶದಲ್ಲಿ ಮಾಘಿ ಸಾಜಿ, ಜಮ್ಮುವಿನ ಉತ್ತರೈನ, ಹರಿಯಾಣ ರಾಜಸ್ಥಾನದಲ್ಲಿ ಸಕ್ರತ್, ಬಿಹಾರದಲ್ಲಿ ದಹಿಚುರಾ, ಒಡಿಸ್ಸಾ, ಕರ್ನಾಟಕ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳದಲ್ಲಿ ಮಕರ ಸಂಕ್ರಾಂತಿ ಹೀಗೆ ಹಲವರು ರಾಜ್ಯಗಳಲ್ಲಿ ಹಲವಾರು ಹೆಸರುಗಳಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಈ ದಿನದಂದು ಮೇಳಗಳು, ಜಾತ್ರೆ, ಗಾಳಿಪಟ ಹಾರಿಸುವುದು, ದೀಪೂತ್ಸವಗಳನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ಆಧ್ಯಾತ್ಮಿಕ ಆಚರಣೆಗಳಿಗೆ ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಮತ್ತು ಅದರ ಪ್ರಕಾರ ಗಂಗಾ, ಯಮುನ, ಗೋದಾವರಿ, ಕೃಷ್ಣ ಮತ್ತು ಕಾವೇರಿ ನದಿಗಳಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಸ್ನಾನದ ಹಿಂದಿನ ಕಾರಣ ಮಾಡಿದ ಪಾಪ ಕರ್ಮಗಳೆಲ್ಲವೂ ವಿಮೋಚನೆಯಾಗಲಿ ಎನ್ನುವುದು.
ಎಳ್ಳು ಬೆಲ್ಲವನ್ನು ತಿನ್ನುವುದು ಮಕರ ಸಂಕ್ರಾತಿಯಂದು ವಿಶೇಷವಾಗಿದೆ. ಈ ಸಿಹಿಯು ವ್ಯಕ್ತಿಗಳ ನಡುವಿನ ಅನನ್ಯತೆ ವ್ಯತ್ಯಾಸಗಳ ಹೊರತಾಗಿ ಶಾಂತಿ ಮತ್ತು ಸಂತೋಷದಿಂದ ಒಟ್ಟಿಗೆ ಇರುವುದಕ್ಕೆ ಸಂಕೇತವಾಗಿದೆ.