ಚಿತ್ರದರ್ಗ ಪ್ರವಾಸಿಗರಿಗೆ ಇತಿಹಾಸ, ದಂತಕಥೆಗಳು ಮತ್ತು ಆಧ್ಯಾತ್ಮಕತೆಯ ಮಿಶ್ರಣವನ್ನು ನೀಡುತ್ತದೆ. ಚಿತ್ರದುರ್ಗದ ಪ್ರವಾಸಿಗರಿಗೆ ಅದ್ಭುತವಾದ ಬಂಡೆಗಳಿಂದ-ಕೂಡಿದ ದೃಶ್ಯವನ್ನು ನೀಡುತ್ತದೆ, ಇದು ಬೆರಗುಗೊಳಿಸುವ ಕಾವಲು, ಪ್ರಾಚೀನ ದೇವಾಲಯಗಳು ಮತ್ತು ಪರಾಕ್ರಮ ಮತ್ತು ಶೌರ‍್ಯದಿಂದ ತುಂಬಿದ ಇತಿಹಾಸವನ್ನು ಹೊಂದಿರುವ ಅಜೇಯ ಕೋಟೆಯನ್ನು ಹೊಂದಿದೆ.
ಚಿತ್ರದುರ್ಗ:
ಚಿನ್ಮೂಲಾದ್ರಿಯೆಂದು ಖ್ಯಾತವಾಗಿರುವ ಜಿಲ್ಲೆಯ ಕೇಂದ್ರ ಪಟ್ಟಣವಾಗಿರುವ ಚಿತ್ರದುರ್ಗ ವಿಶಾಲವೂ ರುದ್ರರಮಣೀಯವೂ ಆದ ಪರ್ವತಸ್ತೋಮದ ನಡುವೆಯೇ ಮೇಲೆದ್ದ ಕ್ಷೇತ್ರವಾಗಿದೆ. ನಗರೀಕರಣದ ದೆಸೆಯಿಂದಾಗಿ ಅದರ ತೀರ್ಥ ಮಹಿಮೆಯು ಮಸುಕಾಗಿಬಿಟ್ಟಿದೆ. ಪಾಳೆಯಪಟ್ಟುಗಳು ಆಳಿದುದೇ ಕಾರಣವಾಗಿ ಬೆಟ್ಟದ ಮೇಲೆಯೇ ೪ ಸುತ್ತು ಬೆಟ್ಟದ ಕೆಳಗೆ ೩ ಸುತ್ತು ಎಂಬಂತೆ ೭ ಸುತ್ತಿನ ಕೋಟೆಯಿದೆ. ಅದು ಮಹಾಭಾರತದ ಹಿಡಿಂ ಬಾಸುರನ ಪಟ್ಟಣವೆಂದೂ ಅಲ್ಲಿ ಭೀಮನು ಹಿಡಿಂಬನನ್ನು ಕೊಂದು ಅವನ ತಂಗಿ ಹಿಡಿಂಬೆಯನ್ನು ವರಿಸಿದ್ದನೆಂದು ಸ್ಥಳಕತೆಯಿದೆ, ಅದರ ಕುರುಹಾಗಿ ಪರ್ವತದಮೇಲೆ ಹಿಡಂಬೇಶ್ವರನೆಂಬ ಶಿವನ ಗುಹಾ ದೇಗುಲವಿದೆ. ಅಲ್ಲಿಯೇ ಏಕನಾಥೇಶ್ವರಿಯೆಂಬ ಪಾರ್ವತಿಯ, ಸಂಪಿಗೆ ಸಿದ್ದೇಶ್ವರ, ಫಲ್ಲುಣೇಶ್ವರ ಎಂಬ ಶಿವನ ಗುಡಿಗಳಿದ್ದು ಎಲ್ಲವೂ ಗುಹಾಲಯಗಳೇ ಆಗಿವ, ಕಳಕೋಟೆಯಲ್ಲಿ ರಾಜಪೂಜಿತವಾದ ಉಚ್ಚಂಗಿಯಮ್ಮನ ಆಲಯವಿದೆ. ದೇವಾಲಯಗಳಿಗೆ ಹೊಂದಿ ಕೊಂಡಂತೆ ಪರ್ವತದ ವಿವಿಧ ಶಿಬಿರಗಳಿಂದ ಹರಿದು ಬರುವ ಅಂತ ರ್ಜಲವು ಪುಣ್ಯ ತೀರ್ಥಗಳನ್ನುಂಟುಮಾಡಿದೆ. ಅಂಕಲಿಮಠ, ಮುರುಗಿ ಮಠ, ಮೊದಲಾದ ಮಠಗಳಿವೆ. ಚಿತ್ರದುರ್ಗದ ಅಲ್ಪವಾದ ಅರಿವು ಮೂಡಬೇಕಾದರೂ ಅಲ್ಲಿನ ಗಿರಿಗಹರಗಳ ಒಡಲಲ್ಲಿ ಒಂದು ವಾರ ಕಾಲದ ಸಾಹಸಯಾತ್ರೆಯನ್ನಾದರೂ ಮಾಡಲೇಬೇಕು.
ನಾಯಕನಹಟ್ಟಿ:
ಚಳ್ಳಕೆರೆ ತಾಲ್ಲೂಕಿಗೆ ಸೇರುವ ನಾಯಕನ ಪಟ್ಟಿಯು ಅಲ್ಲಿಂದ ೨೨ ಕಿ.ಮೀ. ದೂರದಲ್ಲಿದೆ. ಕರ್ಮ ಯೋಗಿ ಯೂ, ಸಮಾಜಸುಧಾರಕನೂ, ಪವಾಡ ಪುರುಷನೂ ಆಗಿದ್ದ ತಿಪ್ಪೇರುದ್ರಸ್ವಾಮಿಯೆಂಬ (೧೬೫೦) ವಿಭೂತಿ ಪುರುಷನ ಲೀಲಾಭೂಮಿಯಾಗಿ ಅದು ಪರಮಪಾವನ ಕ್ಷೇತ್ರವಾಗಿ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರವಾಗಿದೆ. ಅಲ್ಲಿ ಅವನನ್ನು ಆರಾಧಿ ಸುವ ಒಳಮಠ ಮತ್ತು ಹೊರಮಠ ಎಂಬ ಎರಡು ಸ್ಥಾನಗಳಿವೆ. ಒಳಮಠವೊಂದು ದೇವಾಲಯವಾಗಿದ್ದು ಅಲ್ಲಿ ತಿಪ್ಪೇರುದ್ರ ಸ್ವಾಮಿಯ ಗದ್ದುಗೆ ಗುಡಿಯಿದೆ. ಆ ಗುಡಿಯ ಗೋಪುರದಲ್ಲಿ ಕೆಲವು ಆಕರ್ಷಕ ಪೌರಾಣಿಕ ಶಿಲ್ಪಗಳಿವೆ. ಊರ ಹೊರಗೆ ಚಿಕ್ಕಕರೆಯೆಂಬ ರಮಣೀಯ ತಟಾಕದ ತೀರದಲ್ಲಿ ಹೊರಮಠವಿದ್ದು ಅವನು ಜೀವಂತ ಸಮಾಧಿಯನ್ನು ಪಡೆದುಕೊಂಡ ಸಮಾಧಿಮಂದಿರವಿದೆ. ಗುಮ್ಮಟಾ ಕಾರದ ಆಕರ್ಷಕ ಗೋಪುರದಿಂದೊಡಗೂಡಿದ ಆ ಗುಡಿಯಲ್ಲಿ ಅವನ ಮೂರ್ತಿಸಹಿತವಾದ ಗದ್ದುಗೆಯಿದೆ. ರಥೋತ್ಸವ ಸಹಿತ ವಾದ ಏಳು ದಿನಗಳ ಜಾತ್ರೆಯು ಲಕ್ಷಾಂತರ ಭಕ್ತರನ್ನು ಸೆಳೆದು ಕೊಳ್ಳುತ್ತದೆ.
ಜಟಿಂಗರಾಮೇಶ್ವರ:
ಮೊಳಕಾಲ್ಲೂರು ತಾಲ್ಲೂಕಿನ ರಾಮಸಾಗರ ವೆಂಬ ಗ್ರಾಮಕ್ಕೆ ಸೇರಿದ ಜಟಿಂಗರಾಮೇಶ್ವರವು ಜಟಾಯು ಮತ್ತು ಶ್ರೀರಾಮನ ಪುಣ್ಯನಾಮಗಳಿಂದ ಪರಿಷ್ಕೃತವಾಗಿದೆ. ರಾವಣನು ಸೀತೆಯನ್ನು ಕದ್ದೊಯ್ಯುತ್ತಿರುವಾಗ ಜಟಾಯುವು ಅವನೊಡನೆ ಹೋರಾಟ ಮಾಡಿದ ತಾಣವ ಅದಾಗಿದೆ. ದುಃಖಿತನಾದ ಶ್ರೀ ರಾಮನು ಜಟಾಯುವಿಗೆ ಅಲ್ಲಿಯೇ ಅಂತ್ಯ ಸಂಸ್ಕಾರಮಾಡಿ, ಅವನ ನೆನಪಿಗಾಗಿ ಶಿವಲಿಂಗವೊಂದನ್ನು ಸ್ಥಾಪಿಸಿದುದೇ ಜಟಿಂಗರಾಮೇ ಶ್ವರವೆಂದು ಖ್ಯಾತವಾಯಿತು. ಮಹಿಷಾಸುರಮರ್ದಿನಿ, ಪಂಪಾ ಪತಿ, ಜಂಬುಕೇಶ್ವರ, ಸಪ್ತಮಾತೃಕೆಯರು, ಭೈರವ, ತಪೋಲಿಂಗ ಮುಂತಾದ ಚಿಕ್ಕಚಿಕ್ಕ ಗುಡಿಗಳೂ ಅಲ್ಲಿಯೇ ಇವೆ. ಅಲ್ಲಿ ‘ಏಕಾಂತ ತೀರ್ಥ’ವೆಂಬ ಪುಣ್ಯತೀರ್ಥವಿದೆ.
ದಾವಣಗೆರೆ
ಕರ್ನಾಟಕ ರಾಜ್ಯದ ಮಧ್ಯ ಮತ್ತು ಪ್ರಮುಖ ಜಿಲ್ಲೆ. ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು. ಈಗ ಈ ಊರು ಶರವೇಗದಿಂದ ಬೆಳೆಯುತ್ತಿದೆ. ದಾವಣಗೆರೆಯ ಮೊದಲಿನ ಹೆಸರು “ದವನಗರಿ” ಅದು ಕಾಲ ಕ್ರಮೇಣ ದಾವಣಗೆರೆ ಆಯಿತು. ತುಂಗಭದ್ರಾ ತೀರದಲ್ಲಿ ಪುಣ್ಯತಮ ತೀರ್ಥವಿದ್ದು ಒಂದು ತೀರ್ಥಕ್ಷೇತ್ರವಿದೆ.
ಹರಿಹರ:
ತಾಲ್ಲೂಕು ಕೇಂದ್ರವಾಗಿರುವ ಹರಿಹರವು ಗುಹಾರಣ್ಯ ಕ್ಷೇತ್ರವೆನಿಸಿ ತುಂಗಭದ್ರಾ ತೀರದಲ್ಲಿರುವ ಪುಣ್ಯತಮ ತೀರ್ಥವಾಗಿದೆ. ಹರಿಹರ ದೇವಾಲಯವೇ ಅಲ್ಲಿ ಪ್ರಮುಖವಾದುದು. ಪುರಾಣಕಾಲ ದಲ್ಲಿ ಗುಹಾಸುರನೆಂಬ ರಾಕ್ಷಸನು ಬ್ರಹ್ಮನನ್ನು ಒಲಿಸಿಕೊಂಡು ಹಾ ಯಿಂದಾಗಲೀ ಹರನಿಂದಾಗಲೀ ತನಗೆ ಮರಣವುಂಟಾಗದಂತೆ ವರ ವನ್ನು ಪಡೆದುಕೊಂಡು ಕೊಬ್ಬಿ ಮೆರೆಯುತ್ತಿದ್ದನು. ಆಗ ಹರಿ ಮತ್ತು ಹರರು ಮತ್ತು ತೇಜೋರೂಪಗಳನ್ನು ಒಗ್ಗೂಡಿಸಿ ಹರಿಹರವೆಂಬ ಏಕರೂಪವಾಗಿ ಆ ರಕ್ಕಸನನ್ನು ನಿಗ್ರಹಿಸಿದನು. ದೇವತೆಗಳ ಕೋರಿಕೆ ಯಂತೆ ಅದೇ ರೂಪದಲ್ಲಿ ಅದೇ ನಾಮದಲ್ಲಿ ಹರಿಹರದಲ್ಲಿ ನೆಲೆಸಿ ದರು. ವಿಶಾಲವಾದ ಆ ದೇವಾಲಯದ ಗರ್ಭಗುಡಿಯ ಹರಿ ಹರ ಮೂರ್ತಿಯ ಬಲಭಾಗವು ಶಿವನಾದರೆ, ಎಡಭಾಗವು ಎಷ್ಟು ರೂಪ ವಾಗಿದೆ. ಓಂಕಾರೇಶ್ವರ ಮಠ, ಶ್ರೀಶೈಲಮಠ ಮುಂತಾದ ಆರು ಮಠ ಗಳಿವೆ. ಶಿವನೊಳಗೆ ವಿಷ್ಣು, ವಿಷ್ಣುವಿನೊಳಗೆ ಶಿವ, ಅವರ ನಡುವೆ ಭೇದವೆಣಿಸುವುದು ಸಲ್ಲದೆಂಬುದೇ ಆ ಕ್ಷೇತ್ರದ ಸಂದೇಶವಾಗಿದೆ.
-ಮಣಿಕಂಠ ತ್ರಿಶಂಕರ್, ಮೈಸೂರು