ಚಾಮರಾಜನಗರವು ಕರ್ನಾಟಕ ರಾಜ್ಯದ ದಕ್ಷಿಣದ ಜಿಲ್ಲೆಯಾಗಿದೆ. ೧೯೯೭ ರಲ್ಲಿ ದೊಡ್ಡ ಮೈಸೂರು ಜಿಲ್ಲೆಯಿಂದ ಇದನ್ನು ಬೇರ್ಪಡಿಸಲಾಗಿದೆ. ಈ ಜಿಲ್ಲೆಯ ಜಿಲ್ಲಾ ಕೇಂದ್ರವು ಚಾಮರಾಜನಗರ ಪಟ್ಟಣ. ಚಾಮರಾಜನಗರವನ್ನು ಮೊದಲು ಶ್ರೀ ಅರಿಕೊಟ್ಟಾರ ಎಂದು ಕರೆಯಲಾಗುತ್ತಿತ್ತು. ಮೈಸೂರಿನ ಒಡೆಯರ್ ಚಾಮರಾಜ ಒಡೆಯರ್ ಇಲ್ಲಿ ಜನಿಸಿದರು ಮತ್ತು ಆದ್ದರಿಂದ ಈ ಸ್ಥಳವನ್ನು ಅವನ ನಂತರ ಮರುನಾಮಕರಣ ಮಾಡಲಾಯಿತು. ವಿಜಯ ಪರ್ಶ್ವನಾಥ ಬಸದಿ, ಪವಿತ್ರ ಜೈನ ದೇವಾಲಯವನ್ನು ಹೊಯ್ಸಳ ಅರಸ ಗಂಗರಾಜ ಕಮಾಂಡರ್ ಪುನೈಸಂಡನಾಯಕ ೧೧೧೭ ರಲ್ಲಿ ನಿರ್ಮಿಸಿದನು.
ಮಾದೇಶ್ವರಬೆಟ್ಟ:
ಕೊಳ್ಳೇಗಾಲ ತಾಲ್ಲೂಕಿನ ಈ ಪುಣ್ಯಕ್ಷೇತ್ರವು ಅಲ್ಲಿಂದ ೮೦ ಕಿ.ಮೀ.ಗಳ ದೂರದಲ್ಲಿದೆ. ಅನುಮಲೆ, ಜೇನುಮಲೆ, ಕಾನುಮಲೆ, ಪಚ್ಚೆಮಲೆ, ಎಂಬಂತೆ ೭೭ ಶಿಖರಗಳಿಂದಲೂ ಅರಣ್ಯಗಳಿಂದಲೂ, ಅಲ್ಲಲ್ಲಿ ತೀರ್ಥಗಳಿಂದಲೂ ಕೂಡಿದ ಪರ್ವತ ಶ್ರೇಣಿಯ ‘ನಡುಮಲೆಯ’ಯಲ್ಲಿ ಮಾದೇಶ್ವರನೆಂಬ ವಿಭೂತಿಪುರುಷನ ಶಿವಲಿಂಗಸಹಿತವಾದ ವಿಶಾಲವಾದ ಗದ್ದುಗೆಯ ಗುಡಿಯಿದೆ. ಸು. ೧೬ನೆಯ ಶತಮಾನದಲ್ಲಿ ಶ್ರೀಶೈಲದತ್ತಣಿಂದ ಆ ಮಹಾತ್ಮನು, ಕಣ್ಣುಕೋರೈಸುವ ಪವಾಡಗಳನ್ನು ಮೆರೆದು ತನ್ನ ಭಕ್ತರನ್ನು ಕಾಪಾಡಿದನು. ಅವನನ್ನು ಕುರಿತ ಜನಪದಮಹಾಕಾವ್ಯವೊಂದು ಪ್ರಕಟವಾಗಿದೆ. ಮಾದೇಶ್ವರನು ಮಾದಿಗ ಕುಲಕ್ಕೆ ಸೇರಿದವನಾಗಿದ್ದು, ಆ ಸಮುದಾಯದ ಮತ್ತು ಇನ್ನಿತರ ಹಿಂದುಳಿದ ವರ್ಗಗಳ ಭಕ್ತರು ಪಾದಯಾತ್ರೆಯಲ್ಲಿ ಹೋಗಿ ಅವನಿಗೆ ಮುಡಿಕೊಟ್ಟು ಪೂಜಿಸಿ ಬರುತ್ತಾರೆ. ಬೇಡಗಂಪಣ ಎಂಬ ಜನಾಂಗಕ್ಕೆ ಸೇರಿದ ‘ತಮ್ಮಡಿ’ಗಳು ಎಂಬ ಸಾತ್ವಿಕರು ಅಲ್ಲಿಗೆ ಆರ್ಚಕರು, ಪ್ರತಿ ಅಮಾವಾಸ್ಯೆಯ ‘ಎಣ್ಣೆ ಮಜ್ಜನ’ಕ್ಕೆ ಅಲ್ಲಿ ಸಾವಿರಾರು ಭಕ್ತರು ನೆರೆಯುತ್ತಾರೆ. ಶಿವರಾತ್ರಿ, ಯುಗಾದಿ, ನವರಾತ್ರಿ, ದೀವಾವಳಿ ಪರ್ವಗಳು ಲಕ್ಷಾಂತರ ಭಕ್ತ ರನ್ನು ಸೆಳೆಯುತ್ತವೆ. ಬೆಟ್ಟದಲ್ಲಿಯೇ ಇರುವ
‘ಸಾಲೂರು ಮಠ’ದ ಗುರುಗಳು ಅಲ್ಲಿನ ಉತ್ಸವಾದಿಗಳನ್ನು ನಿರ್ದೇಶಿಸುತ್ತಾರೆ. ಮಾದೇ ಶ್ವರನ ಶಿಷ್ಯನಾದ ಶೇಷಗ್ಗೂಡೆಯ ಎಂಬಾತನ ಜಾತ್ರೆಯು ಮಹೋನ್ನತವಾಗಿದ್ದು, ಅದು ೧೨ ವರ್ಷಗಳಿಗೊಮ್ಮೆ ಜರುಗುತ್ತದೆ. ನಾಡಿನ ನೂರಾರು ಗ್ರಾಮಗಳಲ್ಲಿ ಮಾದೇಶ್ವರನ ಗುಡಿಗಳಿವೆ. ಅಲ್ಲಿ ಅವ ನನ್ನು ತ್ರಿಶೂಲವನ್ನು ಹಿಡಿದು ಹುಲಿಯ ಮೇಲೆ ಕುಳಿತಿರುವ ಶೈಲಿ ಯಲ್ಲಿರುವ ಫೋಟೋವನ್ನಿಟ್ಟು ಪೂಜಿಸುತ್ತಾರೆ.
ಮಾದೇಶ್ವರನ ಶಿಷ್ಯರಾಗಿ ದೀಕ್ಷೆ ಸ್ವೀಕರಿಸಿದವರು ‘ಕಂಸಾಳೆ ಗುಡ್ಡರು’, ಎಂದೆನಿಸಿ ಅವನ ಲೀಲಾವಿಲಾಸಗಳನ್ನು ಕಂಸಾಳೆ ನುಡಿ ಸುತ್ತಾ ಉಚ್ಚಕಂಠದಲ್ಲಿ ಗಾಯನ ಮಾಡುತ್ತಾರೆ. ಅವರು ಮಾಡುವ ಗಾಯನ-ನರ್ತನ-ವಾದನಸಹಿತವಾದ ಕಂಸಾಳೆ ಕುಣಿತವು ರೋಮಾಂ ಚನವನ್ನುಂಟು ಮಾಡುತ್ತದೆ. ಆ ಕ್ಷೇತ್ರವು ಮುಜರಾಯಿಗೆ ಸೇರಿದ್ದು ಕೋಟಿಗಟ್ಟಲೆ ದ್ರವ್ಯವನ್ನು ರಾಜ್ಯದ ಬೊಕ್ಕಸಕ್ಕೆ ತುಂಬಿಸುವಲ್ಲಿ ಆಗ್ರ ಸ್ಥಾನದಲ್ಲಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟ:
ಪುರಾಣಗಳಲ್ಲಿ ಕಮಲಾ ಚಲವೆಂಬ ಕೀರ್ತಿತವಾಗಿರುವ ಗೋಪಾಲಸ್ವಾಮಿ ಬೆಟ್ಟವು ಸದಾ ಕಾಲ ಹಿಮದಿಂದ ಆವೃತವಾಗಿರುವುದರಿಂದ ಆ ಹೆಸರಿಗೆ ಅನ್ವರ್ಥ ವಾಗಿದೆ. ತಾಲ್ಲೂಕು ಕೇಂದ್ರವಾಗಿರುವ ಗುಂಡ್ಲುಪೇಟೆಯಿಂದ ೧೫ ಕಿ.ಮೀ. ದೂರದಲ್ಲಿದೆ. ಅಲ್ಲಿರುವ ದೇವಾಲಯದಲ್ಲಿ ವೇಣು ಗೋಪಾಲ ಸ್ವಾಮಿಯು ರುಕ್ಕಿಣಿ ಮತ್ತು ಸತ್ಯಭಾಮಾಸಹಿತನಾಗಿ ನೆಲೆಸಿದ್ದಾನೆ. ಅಗಸ್ಯ ಮುನಿಗಳು ಆ ಕ್ಷೇತ್ರದಲ್ಲಿ ತಪಸ್ಸು ಮಾಡಿ ಆ ದೇವರುಗಳನ್ನು ಒಲಿಸಿಕೊಂಡು, ಅಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದ ರೆಂದು ‘ಭವಿಷ್ಯತ್ತರಪುರಾಣ’ದಲ್ಲಿ ವರ್ಣಿಸಲಾಗಿದೆ. ಕೌಂಡಿಣ್ಯ ಅಥವಾ ಗುಂಡ್ಲುಹೊಳೆ ಎಂಬ ತೊರೆಯು ಈ ಬೆಟ್ಟದಲ್ಲಿ ಹುಟ್ಟಿ ಗುಂಡ್ಲುಪೇಟೆಯತ್ತ ಸಾಗುತ್ತದೆ. ಹಂಸತೀರ್ಥವೇ ಮೊದಲಾದ ಅಷ್ಟ ತೀರ್ಥಗಳು ಬೆಟ್ಟದ ಸುತ್ತಲೂ ಇವೆ. ಬೆಟ್ಟದಮೇಲೆ ಗ್ರಾಮ ವಿಲ್ಲ. ಅತ್ಯಂತ ನಯನ ಮನೋಹರವಾದ ದೃಶ್ಯಾವಳಿಗಳನ್ನು ಬೆಟ್ಟದ ಮೇಲಿಂದ ಕಾಣಬಹುದು. ಪಾಂಚರಾತ್ರಾಗಮಾನುಸಾರಿ ಯಾಗಿ ನಿತ್ಯಪೂಜಾದಿಗಳು ಮತ್ತು ವಾರ್ಷಿಕ ರಥೋತ್ಸವಾದಿಗಳು ಸಂಪನ್ನಗೊಳ್ಳುತ್ತವೆ. ‘ಭವಿಷ್ಯತ್ತರಪುರಾಣ’ವನ್ನು ಅನುಸರಿಸಿ ಚಿಕ್ಕು (೧೭೫೦) ಕವಿಯು ‘ಕಮಲಾಚಲ ಮಹಾತ್ಮ’ ಎಂಬ ಚಂಪೂಗ್ರಂಥವೊಂದನ್ನು ಚಾಮರಾಜನಗರ ಜಿಲ್ಲೆಯ ಈ ಪ್ರಸಿದ್ಧ ತೀರ್ಥಕ್ಷೇತ್ರಗಳೆಲ್ಲವೂ ಪರ್ವತಾಗ್ರದಲ್ಲಿಯೇ ನೆಲೆಸಿರುವುದು ಒಂದು ವಿಶೇಷವೆಂದು ಪರಿಗಣಿಸಬಹುದು.
ಬಿಳಿಗಿರಿರಂಗನ ಬೆಟ್ಟ:
ಯಳಂದೂರು ತಾಲ್ಲೂಕಿಗೆ ಸೇರುವ ಬಿಳಿಗಿರಿರಂಗನಬೆಟ್ಟವು ತಾಲ್ಲೂಕು ಕೇಂದ್ರದಿಂದ ೨೪ ಕಿ.ಮೀ.ಗಳ ದೂರದಲ್ಲಿರುವ ಪುರಾಣಪ್ರಸಿದ್ಧವಾದ ಕ್ಷೇತ್ರವಾಗಿದೆ. ‘ಬ್ರಹ್ಮಾಂಡ ಪುರಾಣ’ದಲ್ಲಿ ಶ್ವೇತಾದ್ರಿಯೆಂದು ವರ್ಣಿತವಾಗಿರುವ ಪವಿತ್ರತಾಣ ವಾಗಿದೆ. ಬೆಟ್ಟದ ಮೇಲೆಯೇ ಗ್ರಾಮವಿದ್ದು ಅಲ್ಲಿ ವಸಿದ್ಧಮುನಿ ಗಳಿಂದ ಸ್ಥಾಪನೆಗೊಂಡ ಮಹಾವಿಷ್ಣುವು, ರಂಗನಾಥಸ್ವಾಮಿಯೆಂದು ಪ್ರಸಿದ್ಧನಾಗಿದ್ದಾನೆ. ಬೆಟ್ಟದ ತಪ್ಪಲಿನಲ್ಲಿ ಹೊನ್ನುಹೊಳೆ ಅಥವಾ ತೊರೆಯು ಹರಿದುಹೋಗಿದ್ದು, ಆ ಕ್ಷೇತ್ರ ವೊಂದು ತೀರ್ಥಕ್ಷೇತ್ರವಾಗಿದೆ. ರಂಗನಾಥಸ್ವಾಮಿಯ ದೇವಾಲಯ ದಲ್ಲಿ ವೈಖಾನಸಾಗಮ ರೀತಿಯಲ್ಲಿ ಪೂಜೆಗಳೂ, ಜಾತ್ರೆಗಳೂ ಜರಗುತ್ತವೆ. ಗುಡಿಯೊಳಗೆ ಅಲರ್ಮೇಲ್ಮಂಗೈ ಅಥವಾ ಅಲ ಮೇಲಮ್ಮ ಎಂದು ಕರೆಯಲಾಗುವ ಅಮ್ಮನವರ ಸನ್ನಿಧಿಯಿದೆ. ವಾರ್ಷಿಕವಾಗಿ ಚಿಕ್ಕಜಾತ್ರೆ ಮತ್ತು ದೊಡ್ಡಜಾತ್ರೆ ಎಂಬ ಎರಡು ಜಾತ್ರೆ ಗಳು ವಿಧ್ಯುಕ್ತವಾಗಿ ಸಂಪನ್ನಗೊಳ್ಳುತ್ತವೆ.
ಬೆಟ್ಟದ ಸುತ್ತಮುತ್ತ ‘ಸೋಲಿಗರು’ ಎಂಬ ಬುಡಕಟ್ಟು ಜನಾಂಗ ದವರಿದ್ದಾರೆ. ಜಾನಪದ ಐತಿಹ್ಯಗಳ ಪ್ರಕಾರ ರಂಗನಾಥಸ್ವಾಮಿಯು ಆ ಜನಾಂಗಕ್ಕೆ ಸೇರಿದ ಕುಸುಮಾಲೆ ಎಂಬ ಚೆಲುವೆಯನ್ನು ಪ್ರೀತಿಸಿ ವಿವಾಹವಾದನು. ಅದೇ ಕಾರಣವಾಗಿ ಸೋಲಿಗರು ಆ ಸ್ವಾಮಿ ಯನ್ನು ‘ರಂಗಭಾವ’ನೆಂಬ ಆತ್ಮೀಯತೆಯಿಂದ ಅವನ ಸೇವೆ ಮಾಡುತ್ತಾರೆ. ““ನಮ್ಮ ಸ್ವಾಮಿಯು ಮೆಟ್ಟಿಕೊಂಡು ಅಡ್ಡಾಡಲಿ” ಎಂಬ ಭಕ್ತಿಭಾವದಿಂದ ೨ ವರ್ಷಗಳಿಗೊಮ್ಮೆ ಸಹದ ಬೂದಿತಿಟ್ಟು ಎಂಬ ಗ್ರಾಮದ ಮಾದಿಗಭಕ್ತರು ಸುಮಾರು ೨ ಅಡಿ ಉದ್ದದ ಚರ್ಮದ ಪಾದರಕ್ಷೆಗಳನ್ನು ದೇವಾಲಯಕ್ಕೆ ತಂದೊಪ್ಪಿಸುತ್ತಾರೆ. ಅದೊಂದು ಪೂಜ್ಯ ವಸ್ತುವಾಗಿದ್ದು, ಬಯಸಿದ ಭಕ್ತರ ತಲೆಗೆ ಅರ್ಚ ಕರು ಅದರಿಂದ ಮೃದುವಾಗಿ ಒಂದು ಏಟುಕೊಟ್ಟು, ಅವರ ಪಾಪ ಗಳನ್ನೆಲ್ಲಾ ಪರಿಹರಿಸುತ್ತಾರೆ. ಬೆಟ್ಟದ ಮೇಲೆಯೇ ಗಂಗಾಧರೇಶ್ವರ ಎಂಬ ಶಿವ ಗುಡಿಯೂ ಇದೆ.
ಬೆಟ್ಟದ ಮೇಲೆಯೇ ಇರುವ ‘ದೊಡ್ಡಸಂಪಿಗೆ’ ಎಂಬಲ್ಲಿ ಅತ್ಯಂತ ಪುರಾತನವಾದ ಸಂಪಿಗೆ ಮರವೊಂದಿದೆ. ಕಾಂಡದಿಂದ ಮೇಲಕ್ಕೆ ಅದು ಭಾರಿಯಾದ ಮೂರು ಕೊಂಬೆಗಳಾಗಿ ವಿಭಕ್ತ ಗೊಂಡು, ಭಕ್ತರು ಅದು ತ್ರಿಮೂರ್ತಿಗಳ ನೆಲೆಯೆಂದು ಪೂಜಿಸು ತ್ತಾರೆ. ಅಲ್ಲಿಯೇ ಭಾರ್ಗವಿಯೆಂಬ ತೊರೆಯು ನಯನಮನೋ ಹರವಾದ ಕಣಿವೆಯಲ್ಲಿ ಹರಿದು ಕಾವೇರಿಯನ್ನು ಸೇರುತ್ತದೆ. ಅಂತಾಗಿ ಅದೂ ಅಲ್ಲಿನ ಒಂದು ಉಪತೀರ್ಥವಾಗಿದೆ.
-ಮಣಿಕಂಠ ತ್ರಿಶಂಕರ್, ಮೈಸೂರು