ಯಾವುದೇ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಪ್ರಧಾನಿ ಮೋದಿ ಮೂರನೇ ಅವಧಿಯ ಕಡೆ ಹೋಗುವ ಸನ್ನಾಹದಲ್ಲಿದ್ದಾರೆ. ಇತಿಹಾಸ ಸೃಷ್ಟಿಸಬೇಕು ಎಂದು ಹೇಳುತ್ತಿದ್ದಾರೆ. ಅದು ಯಾವ ಇತಿಹಾಸದ ಕುರಿತು ಎಂಬ ಪ್ರಶ್ನೆಯೊಂದು ಮೂಡಿದೆ.
ಪ್ರತೀ ಬಾರಿ ಚುನಾವಣೆ ಸಮೀಪಿಸಿದಾಗ, ನಮ್ಮಲ್ಲಿ ಹಲವರು ಅದನ್ನು ವಿವರಿಸಲು ಐತಿಹಾಸಿಕ ಪದಗಳನ್ನು ಆಯ್ಕೆ ಮಾಡುತ್ತಾರೆ. ಅಂತಹ ವಿವರಣೆಯಲ್ಲಿ ಹೆಚ್ಚು ತಪ್ಪಿಲ್ಲ, ಏಕೆಂದರೆ ಫಲಿತಾಂಶಗಳು ಏನೇ ಇದ್ದರೂ, ಚುನಾವಣೆಗಳು ಅವುಗಳ ಸ್ವಭಾವದಿಂದ ಇತಿಹಾಸವನ್ನು ಬದಲಾಯಿಸುತ್ತವೆ.
ಯಾವುದೇ ರಾಷ್ಟ್ರೀಯ ಸಮೀಕ್ಷೆಯಲ್ಲಿ ಪಕ್ಷದ ಗೆಲುವು ಅಥವಾ ಸೋಲು, ಇಡೀ ದೇಶದ ಆಕಾಂಕ್ಷೆಗಳು ಅಥವಾ ಆತಂಕಗಳನ್ನು ಸಂಪೂರ್ಣವಾಗಿ ಪ್ರತಿನಿಧಿಸುವುದಿಲ್ಲ ವಾದರೂ, ಅವು ಕೆಲವು ರಾಜಕೀಯ ತತ್ವಗಳ ನಿರಾಕರಣೆ ಅಥವಾ ಅನುಮೋದನೆಯನ್ನು ಪ್ರತಿಬಿಂಬಿಸುತ್ತವೆ ಎಂಬುದು ನಿಜ.
ಚುನಾವಣಾ ಪ್ರಕ್ರಿಯೆಯ ಮೂಲಕ ನಮ್ಮ ನಂಬಿಕೆಗಳು ಗಾಢವಾಗುತ್ತವೆ ಅಥವಾ ಪ್ರಶ್ನಿಸಲ್ಪಡುತ್ತವೆ. ಅವು ರಾಷ್ಟ್ರದ ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸುತ್ತವೆ ಮತ್ತು ಸಹಜವಾಗಿಯೇ ಜನರ ಬದುಕು, ಭವಿಷ್ಯವನ್ನು ಕೂಡ.
ಲೋಕಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿಯಿರುವಾಗ ಪ್ರಧಾನಿ ಮೋದಿ “ನಾವು ಇತಿಹಾಸ ಸೃಷ್ಟಿಸಬೇಕಾಗಿದೆ’ ಎಂದು ಬಿಜೆಪಿ ಕಾರ್ಯಕರ್ತರಿಗೆ ಹೇಳತೊಡಗಿದ್ದಾರೆ, ಪ್ರಶ್ನೆಯಿರುವುದು, ಅದು ಯಾವ ಇತಿಹಾಸದ ಕುರಿತು ಎಂಬುದು.
ನರೇಂದ್ರ ಮೋದಿ 2014 ಮತ್ತು 2019ರಲ್ಲಿ ಎರಡು ರಾಷ್ಟ್ರೀಯ ಚುನಾವಣೆಗಳನ್ನು ಗೆದ್ದಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿಯೂ ಗೆದ್ದರ ಅದೊಂದು ಮಹತ್ವದ ವಿದ್ಯಮಾನವಾಗಲಿದೆ.
1947ರಲ್ಲಿ ಭಾರತ ಸ್ವತಂತ್ರವಾದಾಗ ಜವಾಹರಲಾಲ್ ನೆಹರೂ ಮೊದಲ ಪ್ರಧಾನಿಯಾದರು, ಆದರೆ ಅವರು 1947ರಲ್ಲಿ ಚುನಾಯಿತ ಪ್ರಧಾನಿಯಾಗಿರಲಿಲ್ಲ. ಬ್ರಿಟಿಷರು ಕಾಂಗ್ರೆಸ್ಗೆ ಅಧಿಕಾರ ಹಸ್ತಾಂತರಿಸಿದರು. ದೇಶದ ನೇತೃತ್ವ ವಲ್ಲಭಭಾಯಿ ಪಟೇಲ್ ಮತ್ತು ಮಹಾತ್ಮಾ ಗಾಂಧಿಯವರಿಗೆ ಹೋಗದೆ, ನೆಹರೂ ಅವರು ಉನ್ನತ ಹುದ್ದೆಗೆ ಆಯ್ಕೆಯಾಗಿದ್ದರು.
ದೇಶವು ತನ್ನ ಮೊದಲ ಲೋಕಸಭಾ ಚುನಾವಣೆಗೆ ಇನ್ನೂ ಐದು ವರ್ಷಗಳ ದೂರದಲ್ಲಿದ್ದಾಗ ನೆಹರೂ ಭಾರತದ ಸಂವಿಧಾನವನ್ನು ರೂಪಿಸಲು ರಚಿಸಲಾದ ಸಂವಿಧಾನ ಸಭೆಯ ಸದಸ್ಯರಾಗಿದ್ದರು.
ಆನಂತರ ನೆಹರೂ -1952, 1957 ಮತ್ತು 1962ರಲ್ಲಿ ಸತತ ಮೂರು ಲೋಕಸಭೆ ಚುನಾವಣೆಗಳನ್ನು ಗೆದ್ದರು. 1964ರಲ್ಲಿ, ಅಧಿಕಾರದಲ್ಲಿದ್ದಾಗಲೇ ನಿಧನರಾದರು. ಪ್ರಧಾನಿಯಾಗಿ ಅವರು ಜನರಿಂದ ಆಯ್ಕೆಯಾದದ್ದು ಮೂರು ಬಾರಿ, ಹಾಗೆಯೇ ಅವರ ಮಗಳು ಇಂದಿರಾ ಗಾಂಧಿ ಕೂಡ. ಅವರು 1967 ಮತ್ತು 1971ರಲ್ಲಿ ಗೆದ್ದರು. 1975-77ರ ಅವಧಿಯಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದರು ಮತ್ತು 1977ರ ಚುನಾವಣೆಯಲ್ಲಿ ಸೋತರು. ಬಳಿಕ 1980ರಲ್ಲಿ ಮತ್ತೆ ಪ್ರಧಾನಿ ಹುದ್ದೆ ಅವರದಾಯಿತು. ಪ್ರಧಾನಿಯಾಗಿದ್ದಾಗಲೇ 1984ರಲ್ಲಿ ಅವರನ್ನು ಹತ್ಯೆ ಮಾಡಲಾಯಿತು.
ಕಳೆದ ಎರಡು ರಾಷ್ಟ್ರೀಯ ಚುನಾವಣೆಗಳಲ್ಲಿ ಛಿದ್ರ ಛಿದ್ರ ಸೋಲುಗಳ ಮೂಲಕ ಕಾಂಗ್ರೆಸ್ ತೀರಾ ಕೆಟ್ಟ ಸ್ಥಿತಿ ಮುಟ್ಟಿದೆ. ದೇಶದ ಅತ್ಯಂತ ಹಳೆಯ ಪಕ್ಷವೆಂಬ ಹೆಗ್ಗಳಿಕೆಯುಳ್ಳ ಕಾಂಗ್ರೆಸ್ ಈ ಅವಧಿಯಲ್ಲಿ ಹಲವಾರು ರಾಜ್ಯಗಳಲ್ಲಿನ ಅಧಿಕಾರವನ್ನು ಕಳೆದುಕೊಂಡಿದೆ. ಹಾಗಾದರೆ 2024 ಅದರ ಪಾಲಿಗೆ ಐತಿಹಾಸಿಕವಾಗಲಿದೆಯೆ?
ಮೋದಿ ಸತತ ಎರಡು ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ರಾಜೀವ್ ಗಾಂಧಿ ಒಂದೇ ಅವಧಿಗೆ (1984-89) ಪ್ರಧಾನಿಯಾಗಿದ್ದರು. ಗುಲ್ಜಾರಿಲಾಲ್ ನಂದಾ ಅವರು ಎರಡು ಬಾರಿ ಪ್ರಧಾನಿಯಾದರು. ಆದರೆ ಅದು ಹುದ್ದೆಯಲ್ಲಿದ್ದ ಇಬ್ಬರು ಪ್ರಧಾನ ಮಂತ್ರಿಗಳ ಆಗಲಿಕೆ ಹೊತ್ತಿನಲ್ಲಾಗಿತ್ತು. ಮೊದಲು ನೆಹರೂ ಹಾಗೂ ಆನಂತರ ಲಾಲ್ ಬಹದ್ದೂರ್ ಶಾಸ್ತ್ರಿ ನಿಧನರಾದಾಗ ಅವರು ಆ ಹುದ್ದೆಗೇರಿದ್ದರು.
ನೆಹರೂ-ಇಂದಿರಾ ಪರಂಪರೆಯ ಬಗೆಗೆ ಅದೆಂಥದೋ ಆತಂಕವಿರುವ ಬಿಜೆಪಿ ನೆಪ ಮಾಡಿಕೊಡು ತಕರಾರೆತ್ತುವುದು, ತೆಗಳುವುದು ನಡೆದೇ ಇದೆ. ಇವತ್ತಿಗೂ ಜಮ್ಮು-ಕಾಶ್ಮೀರ ವಿಚಾರದಲ್ಲಿ ಮತ್ತು 1962ರ ಚೀನಾದೆದುರಿನ ಸೋಲಿನ ವಿಚಾರದಲ್ಲಿ ನೆಹರೂರನ್ನು ದೂಷಿಸುತ್ತದೆ. ಇಂದಿರಾ ಅವರನ್ನು ತುರ್ತು ಪರಿಸ್ಥಿತಿಯ ಜೊತೆಗೆ ನೆನಪಿಸಿಕೊಳ್ಳುತ್ತದೆ.
ಅದೇನೇ ಇದ್ದರೂ, ನೆಹರೂ ಮತ್ತು ಇಂದಿರಾ ಅವರ ಹೆಸರಿನಲ್ಲಿ ಉಳಿದಿರುವ ಹೆಚ್ಚುಗಾರಿಕೆಯನ್ನು ತನ್ನದಾಗಿಸಿಕೊಳ್ಳಲು ಬಿಜೆಪಿ 2024ರ ಗೆಲುವನ್ನು ಎದುರು ನೋಡುತ್ತಿದೆ.
ಬಿಜೆಪಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಮೂರು ಬಾರಿ ಪ್ರಧಾನಿಯಾದರು. ಆದರೆ ಅವರ ಮೂರು ಅವಧಿಗಳ ಒಟ್ಟು ಮೊತ್ತವು ಕೇವಲ ಆರು ವರ್ಷಗಳಿಂತ ಸ್ವಲ್ಪ ಹೆಚ್ಚು. 1996ರಲ್ಲಿ ಅವರು ಬಹುದುತ ಸಾಬೀತುಪಡಿಸಲಾಗದ 13 ದಿನಗಳಲ್ಲಿ ಅಧಿಕಾರ ತ್ಯಜಿಸಬೇಕಾಯಿತು. 1999ರಲ್ಲಿ, ಎಐಎಡಿಎಂಕೆ 13 ತಿಂಗಳ ನಂತರ ಅವರ ಸರಕಾರಕ್ಕೆ ಬೆಂಬಲ ಹಿಂದೆಗೆದುಕೊಂಡಿತ್ತು. ಅವರು ಒಮ್ಮೆ ಮಾತ್ರವೇ ಪೂರ್ಣ ಐದು ವರ್ಷಗಳ (1999-2004) ಅಧಿಕಾರವಧಿಯನ್ನು ಹೊಂದಿದ್ದರು.
2024ರಲ್ಲಿ ಮೋದಿ ಗೆಲ್ಲುತ್ತಾರಾ? ದೇಶದ ಜನತೆ ಮಾತ್ರ ಇದಕ್ಕೆ ಉತ್ತರ ನೀಡಬಲ್ಲರು. ಆದರೆ ಬಿಜೆಪಿ ಪರವಾಗಿಯೇ ಗುಸುಗುಸು ಇದೆಯಂತೆ, ಇದು ಅಪರೀತವಲ್ಲ, ಆಡಳಿತ ಪಕ್ಷ ಇಂತಹ ಗುಸುಗುಸುವಿನ ಲಾಭ ಪಡೆಯುವುದು ಕೂಡ ಹೊಸತಲ್ಲ. ಹೆಚ್ಚಿನದು ಮಾಧ್ಯಮದಲ್ಲಿನ ಪ್ರಚಾರದಿಂದಾಗಿ ಸಾಧ್ಯವಾಗುತ್ತದೆ. ಮಾಧ್ಯಮಗಳಲ್ಲಿ ಪ್ರಾಮುಖ್ಯತೆ ಸಿಗುವುದು ಆಡಳಿತದಲ್ಲಿರುವವರು ಏನು ಹೇಳುತ್ತಾರೆ ಎಂಬುದಕ್ಕೆ.
ಆದರೆ ನಾವು ಈ ಪ್ರಶ್ನೆಯನ್ನು ವಿಭಿನ್ನವಾಗಿ ನೋಡಬಹುದು. ಭಾರತದ ಚುನಾವಣಾ ಇತಿಹಾಸದಲ್ಲಿ ಕೆಲವು ಮಹತ್ವದ ಗುರುತುಗಳಿವೆ. ಆರಂಭದಲ್ಲಿ, ಭಾರತದ ಸ್ಥಾತಂತ್ರ್ಯಕ್ಕಾಗಿ ಹೋರಾಡಿದ್ದ ಹೆಗ್ಗಳಿಕೆ ಹೊಂದಿದ್ದ ಕಾಂಗ್ರೆಸ್, ಕೇಂದ್ರ ಮತ್ತು ರಾಜ್ಯಗಳಲ್ಲಿ ವರ್ಷಗಳ ಕಾಲ ಆಳ್ವಿಕೆ ನಡೆಸಿತು. ಅದರ ಪ್ರಮುಖ ಮತ ಬ್ಯಾಂಕ್ ಮೇಲ್ದಾತಿಗಳು, ಮುಸ್ಲಿಮರು ಮತ್ತು ದಲಿತರನ್ನು ಒಳಗೊಂಡಿತ್ತು. ಬಳಿಕ ಹಿಂದುಳಿದ ಜಾತಿಗಳ, ಸಮಾಜವಾದಿಗಳು, ಕಾಂಗ್ರೆಸ್ ಹಿನ್ನೆಲೆಯುಳ್ಳವರು, ಕಾಂಗ್ರೆಸ್ ವಿರೋಧಿಗಳೊಂದಿಗೆ ಹೋದರು. 1960 ಮತ್ತು 1970ರ ದಶಕದಲ್ಲಿ ಹಾಗೂ ಮತ್ತೆ ಒಂದು ದಶಕದ ನಂತರ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಮತ್ತು ಕೆಲವು ರಾಜ್ಯಗಳಲ್ಲಿ, ಪ್ರಾಥಮಿಕವಾಗಿ ಉತ್ತರ ಭಾರತದಲ್ಲಿ ಅಧಿಕಾರವನ್ನು ಕಳೆದುಕೊಂಡಿತು.
ಆನಂತರ ಬಿಜೆಪಿ ವಾಜಪೇಯಿ ಯುಗ ಮುನ್ನೆಲೆಗೆ ಬಂತು. ಆದರೂ ಬಿಜೆಪಿ ಸಾಕಷ್ಟು ಪ್ರಬಲವಾಗಿರಲಿಲ್ಲ ಮತ್ತು ದೊಡ್ಡ ಒಕ್ಕೂಟದ ಕಾರಣದಿಂದಾಗಿ ಸರಕಾರ ಉಳಿದುಕೊಂಡಿತು. ಅಂತಿಮವಾಗಿ, ಕಾಂಗ್ರೆಸ್ ಸತತ ಎರಡು ಅವಧಿಗೆ ಅಧಿಕಾರ ನಡೆಸಿತು.
2014 ಮೂರನೇ ಮಹತ್ವದ ಗುರುತನ್ನು ದಾಖಲಿಸಿತು. ಹಿಂದುತ್ವ ಮತ್ತು ಮೋದಿ, ವಾಂಡಲ್ ರಾಜಕೀಯವು ಮಂಕಾಗಿ, ಮೇಲ್ವಾತಿ ರಾಜಕೀಯವು ಮುಖ್ಯವಾಯಿತು, ನಂತರದ ವರ್ಷಗಳಲ್ಲಿ ಅಭಿವೃದ್ಧಿ ಯೋಜನೆಗಳು ಮುಖ್ಯವಾಗಬೇಕಿತ್ತು, ಎದ್ದುಕಾಣುವ ಸಂಗತಿಯೆಂದರೆ, ಆಡಳಿತಾರೂಢ ವ್ಯವಸ್ಥೆಯ ವಿರುದ್ಧ ಚಂಟಿರಂಗವನ್ನು ರೂಪಿಸುವಲ್ಲಿನ ಪ್ರತಿಪಕ್ಷಗಳ ಅಸಮರ್ಥತೆ. ಈ ಹಿಂದೆ ಹಲವು ಸರಕಾರಗಳ ಮತನದ ಹಿಂದೆ ಇದ್ದರು ಸಾಮೂಹಿಕ ಸವಾಲುಗಳು.
ಭವಿಷ್ಯ, ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ, ಆದರೆ ಇದೀಗ ಮೋದಿಗೆ ಸವಾಲಾಗಬಲ್ಲ ಇಬ್ಬರು – ಕಾಂಗ್ರೆಸ್ನ ರಾಹುಲ್ ಗಾಂಧಿ ಮತ್ತು ಎಎಪಿಯ ಅರವಿಂದ್ ಕೇಜಿವಾಲ್ ಪರಸ್ಪರ ಜೊತೆಯಾಗಲಾರರು, ಟಿಎಂಸಿಯ ಮಮತಾ ಬ್ಯಾನರ್ಜಿ, ಮೋದಿಗೆ ಸವಾಲೆಸೆಯುವ ಹಸಿವನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಂಡಂತೆ ತೋರುತ್ತಿದೆ. ಅವರಿಗೆ ರಾಹುಲ್ ಅಥವಾ ಕೇದ್ರವಾಲ್ ಜೊತೆಗೂ ಅಂತಹ ಹೊಂದಾಣಿಕೆಯಿಲ್ಲ.
ಹಾಗಾದರೆ, ಪ್ರಧಾನಿ ಮೋದಿ ಸೋಲಲಾರರೆ? ಮತ್ತೆ ಅದನ್ನು ಜನರೇ ನಿರ್ಧರಿಸುತ್ತಾರೆ. ಆದರೆ ಕೆಲವರು ಗೆಲ್ಲುತ್ತೇವೆಂದುಕೊಂಡಾಗ ಸೋತಿದ್ದಿದೆ. 2004 ಒಂದು ಉತ್ತಮ ಉದಾಹರಣೆ. ವಾಜಪೇಯ ಆಜೇಯರಂತೆ ಕಂಡಾಗ ಮನಮೋಹನ ಸಿಂಗ್ 10 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದರು.
ಆದರೆ ಪ್ರಧಾನಿ ಮೋದಿ ಸೋತರೂ ಒಂದಷ್ಟು ಇತಿಹಾಸ ನಿರ್ಮಾಣವಾಗುತ್ತದೆ. ಅವರು ಯಾವತ್ತೂ ಚುನಾವಣೆಯಲ್ಲಿ ಸೋತಿಲ್ಲ. 2001 ರಲ್ಲಿ ಬಿಜೆಪಿ ಅವರನ್ನು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಳ್ಳಲು ದೆಹಲಿಯಿಂದ ಗುಜರಾತಿಗೆ ಕಳುಹಿಸಿತು. ಅನಂತರ ಅವರು 201 4ರಲ್ಲಿ ದೆಹಲಿ ದರ್ಬಾರಿಗೆ ಬರುವ ಮೊದಲು ತಮ್ಮ ತವರು ರಾಜ್ಯದಲ್ಲಿ ಸತತ ಮೂರು ಚುನಾವಣೆಗಳನ್ನು ಗೆದ್ದರು. ಪ್ರತಿಯೊಬ್ಬರ ಮನಸ್ಸಿನಲ್ಲಿರುವ ಪ್ರಶ್ನೆ, 2024 ರ ಮತ್ತೊಂದು ಚುನಾವಣಾ ದಾಖಲೆಯನ್ನು ಬರೆಯುವುದೇ ಎಂಬುದು.
ನೆಹರೂ – ಇಂದಿರಾ ಪರಂಪರೆಯ ಬಗೆಗೆ ಅದೆಂಥದೋ ಆತಂಕವಿರುವ ಬಿಜೆಪಿ ನಪ ಮಾಡಿಕೊಡು ತಂರಾಗುವುದು, ತೆಗಳುವುದು ನಡೆದೇ ಇದೆ. ಇವತ್ತಿಗೂ ಜಮ್ಮು-ಕಾಶ್ಮೀರ ವಿಚಾರದಲ್ಲಿ ಮತ್ತು 1962ರ ಚೀನಾದೆದುರಿನ ಸೋಲಿನ ವಿಚಾರದಲ್ಲಿ ನೆಹರೂರನ್ನು ದೂಷಿಸುತ್ತದೆ. ಇಂದಿರಾ ಅವರನ್ನು ತುರ್ತು ಪರಿಸ್ಥಿತಿಯ ಜೊತೆಗೆ ನೆನಪಿಸಿಕೊಳ್ಳುತ್ತದೆ. ಅದೇನೇ ಇದ್ದರೂ, ನೆಹರೂ ಮತ್ತು ಇಂದಿರಾ ಅವರ ಹೆಸರಿನಲ್ಲಿ ಉಳಿದಿರುವ ಹೆಚ್ಚುಗಾರಿಕೆಯನ್ನು ತನ್ನದಾಗಿಸಿಕೊಳ್ಳಲು ಬಿಜೆಪಿ 2024ರ ಗೆಲುವನ್ನು ಎದುರು ನೋಡುತ್ತಿದೆ.