ವಿದ್ಯಾರ್ಥಿ ಜೀವನ ಪ್ರಮುಖ ಘಟ್ಟವಾಗಿರುವ ದ್ವಿತೀಯ ಪರೀಕ್ಷೆಗಳು ಮಾ.9ರಿಂದ ಆರಂಭಗೊಳ್ಳಲಿದೆ. ಕಳೆದೊಂದು ವರ್ಷದಿಂದ ಅಭ್ಯಸಿಸಿ ಪರೀಕ್ಷೆಗೆ ತಯಾರಾಗಿರುವ ವಿದ್ಯಾರ್ಥಿಗಳು ಕೊನೆಗಳಿಗೆಯಲ್ಲಿ ಮಾಡಿಕೊಳ್ಳಬೇಕಾದ ಕೆಲವೊಂದು ತಯಾರಿಗಳಿದ್ದು ಅದನ್ನು ಚಾಚೂ ತಪ್ಪದೆ ಮಾಡುವುದು ಬಹು ಮುಖ್ಯವಾಗಿದೆ.
ಅದು ಏನೆಂದರೆ
1) ವೇಳಾಪಟ್ಟಿಯನ್ನು ನೀವು ಗಮನಿಸುವ ಜಾಗದಲ್ಲಿ ಎದ್ದು ಕಾಣುವ ರೀತಿ ಅಂಟಿಸಿಡಿ.
2) ಪರೀಕ್ಷೆ ಹೋಗುವ ಮುನ್ನ ದಿನ ಪರೀಕ್ಷೆ ಬರೆಯುವ ವಿಷಯದ ಬಗ್ಗೆ ಗಮನಹರಿಸಿ, ಎಲ್ಲಾ ವಿಷಯಗಳನ್ನು ಮತ್ತೊಂದು ಬಾರಿ ಓದಿ ಅರ್ಥವಾಗದ ವಿಷಯವನ್ನು ಸ್ನೇಹಿತರು ಅಥವಾ ಉಪನ್ಯಾಸಕರುಗಳಿಂದ ತಿಳಿದುಕೊಳ್ಳಿ
3) ಯಾವುದೇ ಆತಂಕ ಬೇಡಿ,
4) ಪರೀಕ್ಷೆ ಸಮಯದಲ್ಲಿ ಉತ್ತಮ ಆಹಾರ, ಶುದ್ಧನೀರು ಮತ್ತು ಕನಿಷ್ಟ ಆರು ಗಂಟೆ ನಿದ್ದೆ ಮಾಡಿ
5) ಪರೀಕ್ಷೆಯ ದಿವಸ ಕನಿಷ್ಟ ಅರ್ಧ ಗಂಟೆ ಮಿಂಚಿತವಾಗಿ ನಿಮ್ಮ ಪರೀಕ್ಷಾ ಕೇಂದ್ರ ತಲುಪಿ ಮತ್ತು ಪ್ರವೇಶ ಪತ್ರ ID ಮತ್ತು ಒಂದು ಬಾಟಲ್ ನೀರು ತೆಗೆದು ಕೊಂಡು ಹೋಗಿ.
6) ಪರೀಕ್ಷಾ ಕೇಂದ್ರದ ನೋಟೀಸ್ ಬೋರ್ಡ್ ನಲ್ಲಿ ನಿಮ್ಮ ರಿಜಿಸ್ಟರ್ ನಂ ಯಾವ ರೂಂನಲ್ಲಿ ಇದೆ ಎಂದು ತಿಳಿದು ಕೊಂಡು 10 ಗಂಟೆಯೊಳಗೆ ಬೆಲ್ ಆದಾಗ ಆ ರೂಂಗೆ ಹೋಗಿ ನಿಮ್ಮ ನಂಬರ್ ನಲ್ಲಿ ಕುಳಿತುಕೊಳ್ಳಿ 7) ಪರೀಕ್ಷಾ ಸಮಯ 10.15 ರಿಂದ 1.30 PM. ಮೊದಲ 15 ನಿಮಿಷ ಪ್ರಶ್ನೆ ಪತ್ರಿಕೆ ಓದಿ, ಉತ್ತಮವಾಗಿ ಬರೆಯಲು ಸಿದ್ದರಾಗಿ.
8) 10.30ಕ್ಕೆ ಉತ್ತರ ಪತ್ರಿಕೆ ನೀಡಿದಾಗ ಅದರಲ್ಲಿ ನಿಮ್ಮ ರಿಜಿಸ್ಟರ್ ನಂ ಮತ್ತು subject code ಬರೆದು ನಂತರ ಉತ್ತರ ಬರೆಯಲು ಪ್ರಾರಂಭಿಸಿ.
9) ಬಹು ಆಯ್ಕೆ ಪ್ರೆಶ್ನೆ ಮತ್ತು Fill in the blanks or match the following ಗೆ ಉತ್ತರವನ್ನು ಮೊದಲ ಎರಡು ಪುಟದಲ್ಲೇ ಬರೆಯಿರಿ.
10)Short answer ಪ್ರೆಶ್ನೆ ಗಳನ್ನು ಉತ್ತರಿಸುವಾಗ 8 ರಲ್ಲಿ 4 ಉತ್ತರಿಸಿ ಎಂದು ಕೇಳಿದ್ದರೆ ಚೆನ್ನಾಗಿ ಉತ್ತರ ಗೊತ್ತಿರುವ ಕನಿಷ್ಠ ಆರನ್ನು ಉತ್ತರಿಸಿ ಅಂದರೆ ಯಾವುದರಲ್ಲಿಯಾದರೂ ಸರಿಯೇ ಎರಡು ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿ ಮತ್ತು ಎರಡು ಉಪಯೋಗಗಳು, ವ್ಯತ್ಯಾಸಗಳು ಮತ್ತು ಊಹೆಗಳು ಮತ್ತು ಅನಾನುಕೂಲತೆಯನ್ನು ಕೇಳಿದ್ದರೆ ಕನಿಷ್ಟ ನಾಲ್ಕು ಬರೆಯರಿ
11) long answer ಪ್ರಶ್ನೆಗಳಿಗೆ ಎಷ್ಟನ್ನು ಕೇಳಿರುತ್ತಾರೋ ಅಷ್ಟು ಚೆನ್ನಾಗಿ ಉತ್ತರ ಬರುವ ಅಷ್ಟು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ , ಕೊನೆಗೆ ನೀವು ಬರೆದಿರುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ನಂಬರ್ ಹಾಕಿದ್ದೀರಾ, ಉತ್ತರ ಸರಿಯಿದೆಯಾ ಎ೦ದು ಪರಿಶೀಲಿಸಿ ನಂತರ ಸಮಯವಿದ್ದರೆ long answer ಪ್ರಶ್ನೆಗಳಲ್ಲಿ ಎಲ್ಲಾ ವಿಭಾಗದಲ್ಲೂ ಒಂದೊಂದಾಗಿ ಚೆನ್ನಾಗಿ ಉತ್ತರ ಗೊತ್ತಿರುವ ಪ್ರಶ್ನೆಯನ್ನು ಉತ್ತರಿಸಿ ಪರಿಶೀಲಿಸಿ
12 )practical ಇರುವ ವಿಷಯಗಳಲ್ಲಿ ತುಂಬಾ ಸಮಯವಿರುವುದರಿಂದ ಚೆನ್ನಾಗಿ ಓದುವವರು ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ ಮತ್ತು ಪರಿಶೀಲಿಸಿ
13)ಕೊನೆಯಲ್ಲಿ ನಿಮ್ಮ ಉತ್ತರ ಪತ್ರಿಕೆಗೆ ಹಾಕಿರುವ ನಿಮ್ಮ ರಿಜಿಸ್ಟರ್ ನಂ ಸರಿಯಿದೆಯಾ ಪರಿಶೀಲಿಸಿ ಉತ್ತರ ಪತ್ರಿಕೆಯನ್ನು ಕೊಠಡಿ ಮೇಲ್ವಿಚಾರಕರಿಗೆ ನೀಡಿ. ತುಂಬಾ ಸಮಯವಿರುವದರಿಂದ ಗಡಿಬಿಡಿ ಮಾಡಿಕೊಳ್ಳದೆ ಯೋಚಿಸಿ ಸರಿಯಾದ ಉತ್ತರ ಬರೆಯರಿ. ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ಶುಭವಾಗಲಿ.