News Kannada
Thursday, December 08 2022

ಅಂಕಣ

ಭಾವನೆಗಳನ್ನು ನಿಯಂತ್ರಿಸುವುದು ಹೇಗೆ?

Photo Credit :

ಭಾವನೆಗಳನ್ನು ನಿಯಂತ್ರಿಸುವುದು ಹೇಗೆ?

ಭಾವನೆಗಳು ಆನುಭಾವಿಕ ಸಂಕೀರ್ಣ ಸ್ಥಿತಿ. ಅವುಗಳು ಆಲೋಚನೆ ಮತ್ತು ನಡವಳಿಕೆಗಳ ಮೇಲೂ ಪ್ರಭಾವ ಬೀರುತ್ತವೆ.

ನಮ್ಮನ್ನು ಮನುಷ್ಯರನ್ನಾಗಿ ಮಾಡುವಲ್ಲಿ ಭಾವನೆಗಳಿಗೆ ಮಹತ್ವದ ಪಾತ್ರವಿದೆ. ನಾವೆಲ್ಲರೂ ಭಾವನಾತ್ಮಕ ಜೀವಿಗಳು. ಕೆಲವು ಜನರು ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಇನ್ನು ಕೆಲವು ಜನರು ಅದನ್ನು ಇತರರಿಗೆ ತೋರ್ಪಡಿಸದೆ ಅನುಭವಿಸುತ್ತಾರೆ. ಇನ್ನೊಂದಷ್ಟು ಜನ ತಮ್ಮ ಭಾವನೆಗಳ ಕುರಿತು ಅರಿವೇ ಇಲ್ಲದಿರುತ್ತಾರೆ. 

ಕೆಲವರು ಭಾವನಾತ್ಮಕವಾಗಿರುವುದು ಎಂದರೆ ತಮ್ಮ ದೌರ್ಬಲ್ಯ ಎಂದು ಅಂದುಕೊಳ್ಳುತ್ತಾರೆ. ತುಂಬಾ ಸುಲಭವಾಗಿ ಅಳು ಬರುವಂತಹವರು ತಮ್ಮನ್ನು ತಾವು ಭಾವನಾತ್ಮಕ ಜೀವಿಗಳೆಂದು ಪರಿಗಣಿಸುತ್ತಾರೆ. 

ಆದರೆ ಭಾವನೆಗಳು ವಿಭಿನ್ನ ರೀತಿಯವು. ಸಂತೋಷ, ದುಃಖ, ಅಸಹ್ಯ, ಕೋಪ, ಭಯ, ಆಶ್ಚರ್ಯ, ಮತ್ತು ಮುಂತಾದ ವಿವಿಧ ರೀತಿಯ ಭಾವನೆಗಳನ್ನು ನಾವು ಅನುಭವಿಸುತ್ತೇವೆ. ಈ ವಿಶಾಲವಾದ ಭಾವನೆಗಳನ್ನು ಇನ್ನೂ ಅನೇಕ ಭಾವನೆಗಳಾಗಿ ವರ್ಗೀಕರಿಸಲಾಗಿದೆ. ಆದ್ದರಿಂದ, ಈ ಯಾವುದೇ ಭಾವನೆಗಳನ್ನು ಅನುಭವಿಸುವ ವ್ಯಕ್ತಿಯು ಭಾವನಾತ್ಮಕ ವ್ಯಕ್ತಿಯೇ ಆಗಿರುತ್ತಾನೆ.

ಭಾವನೆಗಳನ್ನು ನಿಯಂತ್ರಿಸುವ ಪ್ರಶ್ನೆಗೆ ಬಂದಾಗ, ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾದುದು ಏನೆಂದರೆ, ಭಾವನೆಗಳನ್ನು ನಿಯಂತ್ರಿಸುವುದು ಎಂದರೆ ಭಾವನೆಗಳನ್ನು ನಿರಾಕರಿಸುವುದೋ ಅಥವಾ ತಮ್ಮ ಭಾವನೆಗಳನ್ನು ಆರೋಗ್ಯಕರ ರೀತಿಯಲ್ಲಿ ಇತರರಿಗೆ ವ್ಯಕ್ತಪಡಿಸುವುದೋ ಎಂಬುವುದು.

ಪ್ರಮುಖವಾಗಿ ನಾವು ನಮ್ಮ ಭಾವನೆಗಳನ್ನು ಇತರರಿಗೆ ಅರ್ಥವಾಗುವ ರೀತಿಯಲ್ಲಿ, ಅಹಿಂಸಾತ್ಮಕ ರೀತಿಯಲ್ಲಿ ವ್ಯಕ್ತಪಡಿಸುವುದನ್ನು  ಭಾವನಾತ್ಮಕ ನಿಯಂತ್ರಣ ಎನ್ನಬಹುದು. ಉದಾಹರಣೆಗೆ, ಒಬ್ಬ ವ್ಯಕ್ತಿಯು ಯಾವುದರ ಬಗ್ಗೆ ಕೋಪಗೊಂಡಿದ್ದರೆ, ಅವನು / ಅವಳು  ಆ ಕೋಪವನ್ನು ಹಿಂಸಾತ್ಮಕವಾಗಿ ವ್ಯಕ್ತಪಡಿಸದಿರಬಹುದು. ಬದಲಾಗಿ, ಒಬ್ಬನು ಕೋಪವನ್ನು ಸಮಾಧಾನವಾಗಿಯೇ ತಿಳಿಸಬಹುದು. ಆವಾಗ ವ್ಯಕ್ತಿಯು ಕೋಪಕ್ಕೆ ಕಾರಣವಾಗುವ ಅಂಶವನ್ನು ಅರ್ಥಮಾಡಿಕೊಳ್ಳುತ್ತಾನೆ.

ಆದ್ದರಿಂದ, ಭಾವನೆಗಳನ್ನು ನಿರಾಕರಿಸಬಾರದು; ಆದರೆ ಅವುಗಳನ್ನು ಸಂಪೂರ್ಣವಾಗಿ ಅನುಭವಕ್ಕೆ ತರಬೇಕು. ಮತ್ತು ಅವುಗಳನ್ನು ಆರೋಗ್ಯಕರ ರೀತಿಯಲ್ಲಿ ವ್ಯಕ್ತಪಡಿಸಬೇಕು. ಆವಾಗ ವ್ಯಕ್ತಿಗಳ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ.

See also  ಮಾನಸಿಕ ಸವಾಲುಗಳನ್ನು ಎದುರಿಸುವಾಗ ಸ್ವಯಂ ನಿರ್ವಹಿಸುವ ಸಾಮರ್ಥ್ಯ ಇರಬೇಕು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

201
Akshara Damle

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು