ಪ್ರತಿ ಬಾರಿ ವಿಪತ್ತು ಸಂಭವಿಸಿದಾಗ ನಮ್ಮಲ್ಲಿರುವ ದೈರ್ಯವನ್ನು ನಾವು ಕಂಡುಕೊಳ್ಳಬೇಕಾಗಿದೆ. ಏಕೆಂದರೆ ಭಯ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಹೊಂದಿರುತ್ತದೆ.
ಕೋವಿಡ್ ಸಾಂಕ್ರಮಿಕ ರೋಗದ ವಿಚಾರದಲ್ಲೂ ಭಯವು ಬಿನ್ನವಾಗಿಲ್ಲ ಕೋವಿಡ್ ಕಾರಣದಿಂದಾಗಿ ನಮ್ಮ ಮಾನವ ಸಂವಹನದಲ್ಲಿ ಮೊದಲ ಬಾರಿಗೆ ಪ್ರಾಥಮಿಕ ಭಾವನಾತ್ಮಕ ಪ್ರತಿಕ್ರಿಯೆ ಭಯವಾಗಿದ್ದರೂ ಸಹ ಬಹಳಷ್ಟು ಬದಲಾವಣೆಗಳಾಗಿವೆ. ಭಯದ ತೀವ್ರತೆಯು ಕಡಿಮೆಯಾಗಿದ್ದರೂ ಇಂದು ಹೊಸ ರೂಪದ ವೈರಸ್ಗಳು ಮತ್ತೆ ಕಾಣಿಸಿಕೊಳ್ಳತ್ತಿದೆ ಎಂದಾಗ ಆವು ಭಯ ಪ್ರತಿಸೆ ಹೊಂದಿಲ್ಲ.
ಆರೋಗ್ಯ ಸಮಸ್ಯೆಗಳ ಬಗ್ಗೆ ಜನರು ಹೆದರುವುದಿಲ್ಲ ಆದರೆ ಅದು ಅವರ ಜೀವನದಲ್ಲಿ ತರುವ ಸಾಮಾಜಿಕ ಆರ್ಥಿಕ ಬಿಕ್ಕಟ್ಟಿನ ವಿಷಯದಲ್ಲಿ ಭಯಗೊಂಡಿದ್ದಾರೆ. ಬಹಳಷ್ಟು ಜನರು ಈಗಾಗಲೇ ತಮ್ಮ ಉದ್ಯೋಗವನನು ಕಳೆದುಕೊಂಡಿದ್ದಾರೆ. ವ್ಯಾಪಾರ ವಹಿವಾಟು ನಿದಾನವಾಗಿದೆ. ಆದ್ದರಿಂದ ಜನರಿಗೆ ಈಗಾಗಲೇ ಎರಡು ಒತ್ತಡಗಳಿಂದ ಜರ್ಜರಿತರಾಗಿದ್ದು, ಮೂರನೆಯ ಒತ್ತಡ, ಸಮಾಜದಲ್ಲಿ ಹರಡಲು ಪ್ರಾರಂಭಿಸಿದರೆ ಏನಾಗಬಹುದು ಎಂಬ ಭಯ ಹೆಚ್ಚಾಗಿರುತ್ತದೆ.
ಇನ್ನೊಂದು ಬದಿಯಲ್ಲಿ ನಾವು ಅರ್ಥಮಾಡಿಕೊಳ್ಳುವುದು, ಕೊರೊನಾ ಕಠಿಣ ಹಂತವನ್ನು ದಾಟಿದೆ, ಈಗ ಮತ್ತೊಂದು ಕಷ್ಟಕರ ಹಂತದ ಮೂಲಕ ಹಾದುಹೋಗುವುದು ಕಠಿಣವಲ್ಲ. ಹೊಸದಾಗಿ ಬರುವಂತಹ ವೈರಸ್ನಿಂದ ಬರುವ ಅಪಾಯವನ್ನು ತಡೆಕಟ್ಟಲು ಮುಂದಾಗಬೇಕಾಗಿದೆ.
ಆದುದ್ದರಿಂದ ಜೀವನದಲ್ಲಿ ಯಾವುದೇ ಸಮಸ್ಯೆಗಳು ಬಂದರೂ ದೈರ್ಯವನ್ನು ಕೆಡದೆ ಎದುರಿಸಲು ಪ್ರತಿ ಬಾರಿ ಸಿದ್ಧರಾಗಿರಬೇಕು. ಕೋವಿಡ್ ವಿಷಯದಲ್ಲಿಯೂ ಅದೇ ನಿಯಮ ಅನ್ವಯಿಸುತ್ತದೆ.