NewsKarnataka
Saturday, January 22 2022

ಅಂಕಣ

ಉತ್ತಮ ಆಹಾರ ಸೇವಿಸಿ ಅಸಿಡಿಟಿ ಸಮಸ್ಯೆಯಿಂದ ದೂರವಿರಿ

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ಆರೋಗ್ಯ ಸಮಸ್ಯೆಯೆಂದರೆ ಅಸಿಡಿಟಿ‌ ಇಲ್ಲವೆ ಗ್ಯಾಸ್ಟ್ರಿಕ್. ಎಲ್ಲಾ ವಯಸ್ಸಿನ ಜನರು ಗ್ಯಾಸ್ಟ್ರಿಕ್ ಸಮಸ್ಯೆಗೆ ತುತ್ತಾಗುವುದು ಕಾಣುತ್ತಿದ್ದೇವೆ ಇದಕ್ಕೆ ಮುಖ್ಯ ಕಾರಣವೇ ನಮ್ಮ ಬದಲಾದ ಆಹಾರ ಪದ್ಧತಿ ಹಾಗೂ ಒತ್ತಡ ಯುತ ಬದುಕು ಎಂದು ಹೇಳುತ್ತಾರೆ ಕಾಕುಂಜೆ ವೆಲ್ ನೆಸ್ ಕ್ಲಿನಿಕ್ ವೈದ್ಯೆ ಡಾ. ಅನುರಾಧ.

ಸಾಮಾನ್ಯವಾಗಿ ಗ್ಯಾಸ್ಟಿಕ್ ಸಮಸ್ಯೆ 20ರಿಂದ 30ನೇ ವಯಸ್ಸಿನವರೆಗಿನ ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಮ್ಮ ಆಹಾರ ಪದ್ಧತಿಯು ಇತ್ತೀಚಿನ ದಿನಗಳಲ್ಲಿ ಪೂರ್ತಿಯಾಗಿ ಬದಲಾಗಿದೆ. ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳದೇ ಇರುವುದು, ನಿದ್ರಾಹೀನತೆ, ಫಾಸ್ಟ್ ಫುಡ್, ರಾಸಾಯನಿಕ ವಸ್ತುಗಳ ಸಿಂಪಡಣೆಯ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಇಂತಹ ಸಮಸ್ಯೆಗಳು ಸಾಮಾನ್ಯವಾಗಿ ನಮ್ಮನ್ನು ಕಾಡುತ್ತವೆ.
ಗ್ಯಾಸ್ಟ್ರಿಕ್ ಸಮಸ್ಯೆಯ ಮುಖ್ಯ ಲಕ್ಷಣಗಳೆಂದರೆ ಹುಳಿತೇಗು ,ಹೊಟ್ಟೆ ಉಬ್ಬರ, ಹೊಟ್ಟೆ ಉರಿ, ಸ್ವಲ್ಪವೇ ಸ್ವಲ್ಪ ಆಹಾರ ತೆಗೆದುಕೊಂಡಾಗ ಹೊಟ್ಟೆ ತುಂಬಿದಂತೆ ಭಾಸವಾಗುವುದು ಹಾಗೂ ಇತರ ಸಮಸ್ಯೆಗಳು ಆಗಿವೆ.
ದೇಹದಲ್ಲಿರುವ ವಾತ ಪಿತ್ತ ಕಫ ಎಂಬ ಮೂರು ದೇಹ ಪ್ರಕೃತಿಗಳಲ್ಲಿ ಪಿತ್ತದ ಪ್ರಮಾಣ ಹೆಚ್ಚಿರುವ ದೇಹ‌ ಪ್ರಕೃತಿ ಇರುವವರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಿ ಕಾಡುತ್ತವೆ.

ದಿನದಲ್ಲಿ ಮೂರು ಬಾರಿ ಆಹಾರ ಸೇವಿಸುವುದು ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದು. ಒಂದು ಬಾರಿ ಆಹಾರ ತೆಗೆದುಕೊಂಡರೆ ಬಳಿಕ ಸುಮಾರು ನಾಲ್ಕು ಗಂಟೆಗಳ ಕಾಲ ಅಂತರ ನೀಡಿ ಆಹಾರ ಸೇವಿಸಬೇಕು. ನಾವು ಸೇವಿಸಿದ ಆಹಾರವು ಒಳ್ಳೆಯ ರೀತಿಯಲ್ಲಿ ಕೊಳ್ಳಬೇಕಾದರೆ ಶರೀರಕ್ಕೆ ಅಷ್ಟೇ ವ್ಯಾಯಾಮ ಕೂಡ ಬೇಕಾಗುತ್ತದೆ. ತೀರ ಎನ್ನುವಷ್ಟು ಆಹಾರವನ್ನು ಸೇವಿಸುವಾಗ ಅಷ್ಟೇ ನಮ್ಮ ದೇಹಕ್ಕೆ ಕೆಲಸವನ್ನು ನೀಡಬೇಕು. ಸಾಮಾನ್ಯವಾಗಿ ದೇಹಕ್ಕೆ ದಣಿವಾಗುವ ಅಂತಹ ಕೆಲಸಗಳನ್ನು ಮಾಡಿದರೆ ಅಷ್ಟೇ ನಮ್ಮ ಜೀರ್ಣಕ್ರಿಯೆ ಉತ್ತಮ ರೀತಿಯಲ್ಲಿ ಇರುತ್ತದೆ.

ಇತ್ತೀಚೆಗೆ ನಾವು ಸೇವಿಸುವಂತಹ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಮದ್ದುಗಳ ಸಿಂಪಡನೆ ಆಗಿರುತ್ತವೆ, ಆಹಾರವು ಕೆಟ್ಟು ಹೋಗದಂತೆ ರಾಸಾಯನಿಕ ವಸ್ತುಗಳ ಸಿಂಪಡಣೆಯನ್ನು ನಾವು ಸೇವಿಸುವ ಎಲ್ಲಾ ಆಹಾರ ಪದಾರ್ಥಗಳಿಗೆ ಇಂದು ಮಾಡಿರುತ್ತಾರೆ. ಆದ್ದರಿಂದ ನಾವು ಸೇವಿಸುವ ಆಹಾರ ಪದಾರ್ಥಗಳು ಆದಷ್ಟು ಮಟ್ಟಿಗೆ ಸಾವಯವ ಆಗಿದ್ದಲ್ಲಿ ಆರೋಗ್ಯವನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳಬಹುದು.
ಗ್ಯಾಸ್ಟ್ರಿಕ್ ಸಮಸ್ಯೆ ಎದುರಾದಾಗ ಎಂದು ಎಲ್ಲರೂ ತಕ್ಷಣಕ್ಕೆ ಸಮಸ್ಯೆ ಪರಿಹಾರವಾಗಬೇಕು ಎಂದು ಸೋಡಾ ಹಾಕಿದಂತಹ ಪಾನೀಯಗಳನ್ನು ಸೇವಿಸುತ್ತಾರೆ, ಈ ಪಾನೀಯಗಳು ತಕ್ಷಣಕ್ಕೆ ಪರಿಹಾರ ನೀಡಬಹುದು ಹೊರತು ದೀರ್ಘಾವಧಿಗಲ್ಲ.
ಅದೇ ರೀತಿ ನಾವು ಸೇವಿಸುವ ಹುಳಿ ಗುಣ ಇರುವಂತಹ ಆಹಾರಗಳು ಹಾಗೂ ತೀರ ಎನ್ನುವಷ್ಟು ಖಾರ ಯುಕ್ತ ಪದಾರ್ಥಗಳನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಿ ಎದುರಾಗುತ್ತವೆ, ಆದ್ದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಆದಷ್ಟು ಅಂತಹ ಆಹಾರಗಳಿಂದ ದೂರವಿರುವುದು ಉತ್ತಮ ಎನ್ನುತ್ತಾರೆ ವೈದ್ಯ ಡಾ.ಅನುರಾಧ.

ಇತ್ತೀಚೆಗೆ ನಮ್ಮ ಜೀವನ ಪದ್ಧತಿ ಬಹಳ ಬದಲಾಗಿದೆ. ನಿದ್ರಿಸುವ ಸಮಯದಲ್ಲಿ ಪ್ರತಿದಿನ ವ್ಯತ್ಯಯವಾಗುವುದು ಕಾಣುತ್ತಿದ್ದೇವೆ, ಸುಮಾರು 12 ಗಂಟೆ ರಾತ್ರಿಗೆ ಹಸಿವಾಗುವ ಸಂದರ್ಭದಲ್ಲಿ ಸ್ನಾಕ್ಸ್ ಫಾಸ್ಟ್ ಫುಡ್ ಗಳನ್ನು ಸೇವಿಸುವುದರಿಂದ ಗ್ಯಾಸ್ಟಿಕ್ ಸಮಸ್ಯೆ ಹೆಚ್ಚಾಗುತ್ತದೆ.
ಮನುಷ್ಯನ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುವುದು ನಿದ್ರೆ, ಸುಖ ನಿದ್ರೆಯಿಂದ ವಂಚಿತರಾದವರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಎದುರಾಗುತ್ತದೆ. ಆದ್ದರಿಂದ ಆದಷ್ಟು ಮಟ್ಟಿಗೆ ಉತ್ತಮ ಆಹಾರ ಸೇವಿಸಿ ನಿದ್ರಿಸುವುದರಿಂದ ಈ ಸಮಸ್ಯೆಯಿಂದ ದೂರವಿರಬಹುದು.
ಇನ್ನು ಡಯಟ್ ನಿಮ್ಮ ಹೆಸರಲ್ಲಿ ಸಾಮಾನ್ಯವಾಗಿ ಆಹಾರವನ್ನು ತೆಗೆದುಕೊಳ್ಳದೆ ಇರುವುದರಿಂದ ಗ್ಯಾಸ್ಟಿಕ್ ಸಮಸ್ಯೆ ಎದುರಾಗುತ್ತದೆ. ಬೆಳಗಿನ ಉಪಹಾರ ಮಧ್ಯಾಹ್ನದ ಊಟ ಅದೇ ರೀತಿ ರಾತ್ರಿ ಆಹಾರವನ್ನು ಪ್ರತಿದಿನ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕು. ನಿದ್ರಿಸುವ ಸುಮಾರು ಎರಡು ಗಂಟೆಗಳ ಮೊದಲು ರಾತ್ರಿ ಹೊತ್ತಿನ ಆಹಾರವನ್ನು ಸೇವಿಸಬೇಕು ಈ ರೀತಿ ಮಾಡುವುದರಿಂದ ಜೀರ್ಣಕ್ರಿಯೆಗೂ ಉತ್ತಮ ರೀತಿಯಲ್ಲಿ ನಡೆಯುತ್ತವೆ ಎನ್ನುತ್ತಾರೆ ವೈದ್ಯೆ ಡಾ. ಅನುರಾಧ.

Photo credit;Rita E

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

4283
Swathi M G

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.