ಇಂದು ಮಹಿಳೆಯರ ಅಂಧ ಚಂದವನ್ನು ಹೆಚ್ಚಿಸಲೆಂದೇ ಹೊಸ ಹೊಸ ವಿನ್ಯಾಸದ ಕಿವಿಓಲೆಗಳು ಮಾರುಕಟ್ಟೆಗೆ ಬಂದು ಇಳಿದಿವೆ. ಸಣ್ಣ ಸಣ್ಣ ಕಿವಿ ಓಲೆಯಿಂದ ಹಿಡಿದು ದೊಡ್ಡ ದೊಡ್ಡ ಗಾತ್ರದ ಓಲೆಗಳು ಇವೆ. ಮಹಿಳೆಯರು ಧರಿಸುವ ಬಟ್ಟೆಗಳಿಗೆ ಮಾಚ್ ಆಗುವಂತ ಇಯರಿಂಗ್ಗಳು ಮಾರ್ಕೆಟ್ಗೆ ಬಂದಿವೆ. ಇನ್ನು ಸಿಂಪಲ್ ಡ್ರೆಸ್ಗಳಿಗೆ ಸ್ಟಟ್ಸ್ಗಳನ್ನು ಹಾಕಿದರೆ ಸಾರಿ, ಲೆಹೆಂಗ ಇಂತಹ ಗ್ರಾಂಡ್ ಧಿರಿಸುಗಳಿಗೆ ಜುಮ್ಕ ದಂತಹ ಕಿವಿಓಲೆಗಳು ಮಾಚ್ ಆಗುತ್ತವೆ.
ಈಗಿನ ಫ್ಯಾಷನ್ ಜಗತ್ತಿನ ಪ್ರಸ್ತುತ ದಿನಮಾನಗಳಲ್ಲಿ ಥ್ರೆಡ್ ಕಿವಿ ಓಲೆಗಳು ಸೌಂದರ್ಯಕ್ಕೆ ಮೆಚ್ಚುಸುವಂತದಾಗಿದೆ. ತಾವೇ ತಯಾರಿಸಿ ಧರಿಸುವಂತಹ ಕಿವಿ ಓಲೆಗಳನ್ನು ನಾವು ನೋಡಬಹುದು. ಸೀರೆ ಹಾಗೂ ಗ್ರಾಂಡ್ ಡ್ರೆಸ್ಗಳಿಗೆ ಹೊಂದಿಕೊಳ್ಳುವಂತಹ ಕಿವಿ ಓಲೆಗಳನ್ನು ಕೇವಲ ಕಡಿಮೆ ನಿಮಿಷಗಳಲ್ಲಿ ತಯಾರಿಸಬಹುದು ಮತ್ತು ಇಂತಹ ಥ್ರೆಡ್ ಇಯರಿಂಗ್ಗಳ ದರವೂ ಕಡಿಮೆ ಇರುತ್ತದೆ.
ಎಲ್ಲಾ ರೀತಿಯ ಹಬ್ಬಕ್ಕೂ ಸಮಾರಂಭಕ್ಕೂ ಭರ್ಜರಿ ಉಡುಪುಗಳಾದ ಸೀರೆ, ಚುಡಿದಾರ್, ಲಂಗದಾವಣಿ ಹೀಗೆ ಹಲವಾರು ಡ್ರೆಸ್ಗಳಿಗೆ ಥ್ರೆಡ್ ಇಯರಿಂಗ್ಗಳು ಹೆಣ್ಣಿನ ಅಂದಕ್ಕೆ ಇನ್ನೂ ಹೆಚ್ಚಿನ ಮೆರಗು ನೀಡುತ್ತದೆ. ಹೆಣ್ಮಕ್ಕಳು ಹಿಂದಿನ ಕಾಲದಲ್ಲಿ ಚಿನ್ನ ಬೆಳ್ಳಿಯಂತಹ ಆಭರಣಗಳಿಗೆ ಹೊಂದಿಕೊಳ್ಳುತಿದ್ದರು ಆದರೆ ಇಂದು ಕಾಲ ಬದಲಾಗಿದೆ, ಅದಕ್ಕೆ ತಕ್ಕಂತೆ ಜನರು ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಕಂಡುಕೊಳ್ಳುತ್ತಿದ್ದಾರೆ. ಯಾವುದೇ ಕಾರ್ಯಕ್ರಮಗಳಲ್ಲಿ ಹೆಣ್ಮಕ್ಕಳು ಇಂದು ಫ್ಯಾಷನೇಬಲ್ ಇಯರಿಂಗ್ಗಳನ್ನೇ ಧರಿಸುತ್ತಾರೆ. ಕಾರಣ ಇಂದು ಕೃತಕ ಒಡವೆಗಳು ಅಷ್ಟರ ಮಟ್ಟಿಗೆ ಜನರನ್ನು ಆಕರ್ಷಿತರನ್ನಾಗಿ ಮಾಡಿದೆ.
ಇತ್ತೀಚಿನ ಫ್ಯಾಷನ್ ಜಗತ್ತಿನಲ್ಲಿ ಮಹಿಳೆಯರು ಚಿನ್ನಾಭರಣಗಳಿಗಿಂತ ವಿಧವಿಧವಾದ ಆಕರ್ಷಕ ಓಲೆ, ಬಳೆಗಳನ್ನು ಇಷ್ಟ ಪಡುತ್ತಾರೆ. ಮಹಿಳೆಯರು ಧರಿಸುವ ಕಿವಿಯೋಲೆ ಅವರನ್ನು ಸುಂದರವಾಗಿಸುದಷ್ಟೆ ಅಲ್ಲ ಅವರ ಸ್ವಂತ ಕ್ರೀಯೆಯಿಂದ ಸಿದ್ದಪಡಿಸಿ ಧರಿಸುವಂತಹ ಕಲೆಯನ್ನು ಬೆಳೆಸಿಕೊಂಡಿದ್ದಾರೆ. ಕೇವಲ ರೇಷ್ಮೆದಾರ, ಮುತ್ತು, ಮಣಿಗಳಿಂದ ಒಂದು ಓಲೆಯನ್ನು ಸಿದ್ಧಪಡಿಸಿ ಅಂಧವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸ್ತ್ರೀಯರು ಥ್ರೆಡ್ಗಳಿಂದ ಕಿವಿ ಓಲೆ, ಕೈಬಳೆಗಳನ್ನು ತಯಾರು ಮಾಡುವ ವೃತ್ತಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಕಾಲೇಜು ಹುಡುಗಿಯರು, ಮಹಿಳೆಯರು ಇಂತಹ ಕಿವಿ ಓಲೆ , ಕೈಬಳೆಗಳಿಗೆ ಮಾರುಹೋಗಿರುವುದು ಮಾತ್ರವಲ್ಲದೇ, ಡ್ರೆಸ್ಗಳಿಗೆ ಮಾಚಿಂಗ್ ಮಾಡಲು ಇಂತಹ ಕಿವಿ ಓಲೆ , ಕೈಬಳೆಗಳು ಸಹಕಾರಿ ಯಾಗುತ್ತಿದೆ.