News Kannada
Saturday, April 01 2023

ಅಂಕಣ

ಭಾವ ಪರವಶದಿಂದ ಕೂಡಿದ ಪ್ರೇಮ ಕಾದಂಬರಿ “ಹೇಳಿ ಹೋಗು ಕಾರಣ”

Photo Credit : News Kannada

ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ಬರಹಗಳು ಬಹಳ ನಿಖರ. ನಾವೇ ಆ ಭಾವಗಳನ್ನು ವ್ಯಕ್ತಪಡಿಸುತ್ತಿದ್ದೇವೆ ಏನೋ ಅಂತೇನಿಸಬೇಕು ಹಾಗಿರುತ್ತದೆ. ಹೇಳಿ ಹೋಗು ಕಾರಣ ಪುಸ್ತಕವೂ ಹಾಗೆಯೇ. ತನ್ನ ಪ್ರೀತಿ, ಕನಸ್ಸು ಮತ್ತು ಜೀವನವನ್ನು ಧಾರೆ ಎರೆದ ಒಬ್ಬ ಪ್ರೇಮಿಗೆ ಆ ಪ್ರೀತಿಯ ಹುಡುಗಿ ಬೆರೆಯೊಬ್ಬನ ಜೊತೆಗೆ ಮದುವೆಯಾದಗ ಅವನ ಜೀವನದಲ್ಲಿಯಾಗುವ ಮಾರ್ಪಾಡುಗಳು ಈ ಪುಸ್ತಕದಲ್ಲಿ ಅತ್ಯಂತ ಹೃದಯಕ್ಕೆ ನಾಟುವಂತೆ ಬರೆದಿದ್ದಾರೆ ಬೆಳಗೆರೆಯವರು.

“ಪ್ರೀತಿ ಹುಟ್ಟೋಕೆ ಕಾರಣ ಬೇಕಾಗಲ್ಲಾ, ಆದರೆ ಪ್ರೀತಿಸಿದವರಿಂದ ದೂರ ಹೋಗಬೇಕಾದರೆ ಕಾರಣಗಳಿಗೆ ಮೀತಿಯೇ ಇರೋದಿಲ್ಲ”. “ಹೇಳಿ ಹೋಗು ಕಾರಣ” ಇದೊಂದು ಭಾವ ಪರವಶದಿಂದ ಕೂಡಿದ ಪ್ರೇಮ ಕಾದಂಬರಿ. ಬೇಷರತ್ತಾಗಿ, ನಿರಂತರವಾಗಿ, ದೈವೀ ಭಾವವಾಗಿ ಪ್ರೀತಿಸಿದ್ದು ಹಿಮವಂತ, ತಾನು ಮಾಡುವ ಕೆಲಸಗಳಿಗೆ ಕಾರಣವಿಲ್ಲದೆ ದ್ವಂದ್ವದ ಬದುಕನ್ನು ಕಟ್ಟಿಕೊಳ್ಳಲು ಹೊರಟವಳು ಆ ನಿರ್ದಯಿ ಹುಡುಗಿ ಪ್ರಾರ್ಥನಾ.

ಇವರುಗಳ ಮಧ್ಯೆ ನಿಷ್ಠೆಯಂತೆ ಕಂಡದ್ದು ಉರ್ಮಿಳಾವಾದರೆ, ಶ್ರೀಮಂತ ಬದುಕಿನ ಮಧ್ಯೆದಲ್ಲಿ ಪ್ರೀತಿಯ ಬಲೆಯನ್ನು ಕಟ್ಟಿದವನು ದೇಬೂ. ಗೆಳೆಯನಾಗಿ ಹಿಮವಂತನ ಶ್ರಮಕ್ಕೆ ರಸೂಲ್ ನಿಂತರೆ, ಹಿಮವಂತನನ್ನು ದೈವತ್ವದಂತೆ ಕಾಣುವವಳು ಕಸೂತಿ ಕಾವೇರಮ್ಮ.

ಶಾಂತಪ್ಪ, ನಂದಕ್ಕ, ಕಸೂತಿ ಕಾವೇರಮ್ಮ, ಡಾ.ಊರ್ಮಿಳ, ರಸೂಲ ಜಮಾದಾರ್ ಪಾತ್ರಗಳು ಇಲ್ಲಿ ಪರಿಚಯಿಸಲ್ಪಡುತ್ತವೆ ಮತ್ತು ಎಲ್ಲರು ಹಿಮವಂತನೆಡೆಗೆ ಗೌರವ,ಪ್ರೀತಿ,ಭಯ,ಸಮರ್ಪಣಾ ಭಾವವನ್ನು ಹೊಂದಿರುತ್ತವೆ. ಪ್ರೀತಿಯೆಂಬ ಗಜ ಬಲದೊಂದಿಗೆ ಮಿಠಾಯಿ ಮಾರುವ ಹುಡುಗ ರಿಯಲ್ ಎಸ್ಟೇಟ್ ವ್ಯಾಪಾರಕ್ಕಿಳಿದು ಪ್ರಾರ್ಥನಾಳನ್ನುದಾವಣಗೆರೆಯಲ್ಲಿ ಮೆಡಿಕಲ್ ಕಾಲೇಜುಗೆ ಸೇರಿಸುತ್ತಾನೆ. ವೈರಿಗಳು ಹಿಮವಂತನ ಮೇಲೆ ಹಲ್ಲೆ ಮಾಡಿದಾಗ ತಲೆಗೆ ಬಿದ್ದ ಪೆಟ್ಟಿನಿಂದ ಕತೆಯು ಬೇರೆಯೇ ತಿರುವನ್ನು ಪಡೆಯುತ್ತದೆ ಮತ್ತು ಮಾಟಗಾರ ಹಿರಣಪ್ಪ, ಗವೀಮಟದ ಅಜ್ಜಪ್ಪನ ಪಾತ್ರಗಳು ಬಹಳ ಮಹತ್ವವನ್ನು ಕೊಡುತ್ತ ಕಥೆಯೊಂದಿಗೆ ತಮ್ಮ ಪ್ರವೇಶವನ್ನು ಘೋಷಿಸುತ್ತವೆ. ಕೂತುಹಲ  ಇಲ್ಲಿಂದ ಹುಟ್ಟಿ ಕ್ಷಣಕ್ಷಣಕ್ಕೂ ಬೆಳೆಯುತ್ತ ಹೋಗುತ್ತದೆ.

ಹಿಮವಂತನನ್ನು ಪೂಜಿಸುತ್ತ ಹಾಗೆಯೇ ಮೊಸಮಾಡುತ್ತ ಸಾಗುವ ಪ್ರಾರ್ಥನಾಳ ಬಗ್ಗೆ ಲೇಖಕ ಅದ್ಭುತವಾಗಿ ವಿಮರ್ಶಿಸುತ್ತಾನೆ. “ಹೆಂಗಸಿಗೆ ದೈವಿಕವಾದದ್ದು ಬೇಡ. ಮನುಷ್ಯ ಸಹಜವಾದದ್ದು ಬೇಕು. ಪ್ರೀತಿ, ವಾಂಛೆ, ದೇಹ, ಅದರ ಸುಖ, ಅದರ ಫಲ … ಹೌದು! ಹೆಂಗಸು ದೈವವನ್ನು ಪೋಜಿಸಬಲ್ಲಳು, ಪ್ರೀತಿಸಲಾರಳು”. ವಂಚನೆಯನ್ನು ಶುರುಮಾಡಿದಾಗ ಆಗುವ ನೋವು ಕ್ರಮೇಣ ಅಭ್ಯಾಸವಾಗಿ ಕೊನೆಗೆ ಹಿತವನ್ನು ಕೊಡುತ್ತದೆ.

ಒಬ್ಬನೇ ಮನುಷ್ಯ ಒಬ್ಬರಲ್ಲಿ ಪ್ರೀತಿ ಹುಟ್ಟಿಸಿ ತಿದ್ದಿದರೆ (ಊರ್ಮಿಳ), ಇನ್ನೋಬ್ಬರಲ್ಲಿ ಭಯಭಕ್ತಿಯನ್ನು ಮೂಡಿಸಿದರೆ (ಕಾವೇರಮ್ಮ) ಮತ್ತೊಬ್ಬರಿಗೆ ದೇವರಾಗುತ್ತಾನೆ ಮತ್ತು ದುರಂತವೆಂದರೆ ದೂರವಾಗುತ್ತಾನೆ. ವಂಚಿಸಿದವಳು ಬಂದು ವಂಚನೆಯನ್ನು ಖುದ್ದಾಗಿ ಹೇಳಿದಾಗ ನಾಯಕನಲ್ಲಾಗುವ ಪರಿವರ್ತನೆಗಳನ್ನು ಮನ ಮುಟ್ಟುವಂತೆ ವರ್ಣಿಸಿದ್ದಾನೆ “ಅಲ್ಲೊಂದು ಕನಸು ಕೊಲೆಯಾಗಿತ್ತು, ದೇವರು ಹತ್ಯೆಯಾಗಿದ್ದ”.

ವಂಚನೆಗೊಳಗಾದ ಹಿಮವಂತ ಊರ್ಮಿಳೆಯೊಂದಿಗೆ “ಪ್ರಾರ್ಥನಂಗೆ ಕನಸು ಕಾಣೋದು ಗೊತ್ತಿತ್ತೇ ಹೊರತು ಕನಸು ಹಂಚಿಕೊಳ್ಳೋದು ಗೊತ್ತಿರಲಿಲ್ಲ. ಎರಡಕ್ಕೂ ತುಂಬಾ ವ್ಯತ್ಯಾಸವಿದೆ. ಒಬ್ಬ ಮನುಷ್ಯ ಇನ್ನೊಂದು ಜೀವಕ್ಕೆ ಯಾವುದೇ ಪ್ರತಿಫಲ ನಿರೀಕ್ಷಿಸದೆ ಕೊಡಬಲ್ಲಂಥದ್ದು – ಕಂಫರ್ಟ್.

See also  ಹೆಣ್ಣಿನ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುವ ಕಿವಿಓಲೆ

ಅಂತಹ ಕಂಫರ್ಟ್ ಕೊಡೋಕೆ ದೇವರೇ ಆಗಬೇಕಾ? ಒಬ್ಬ ಆರ್ಡಿನರಿ ಮನುಷ್ಯನಿಗೆ ದೇವರೂಂತ ಹೆಸರಿಟ್ಟು ವಂಚನೆ ಮಾಡಿದರೆ ಅದು ಕ್ಷಮೆಗೆ ಅರ್ಹವಾಗುತ್ತಾ?” ಎಂದು ವಿಶ್ಲೇಷಿಸುತ್ತ ಪ್ರಾರ್ಥನಾಳ ಸರ್ವನಾಶಕ್ಕೆ ಯಾರಿಗೂ ತಿಳಿಯದಂತೆ ಕೈಹಾಕುತ್ತಾನೆ. ಮುಂದೆ ನಡೆಯುವ ಭೀಭತ್ಸ ಘಟನೆಗಳು ಮಾಟ ಕಲೆಯ ಬಗ್ಗೆ ಸ್ವಲ್ಪವಾದರೂ ಹಿನ್ನಲೆ ಇದ್ದವರಿಗೆ ರೋಚಕವೆನಿಸುತ್ತದೆ. ತಾನು ಕೊಟ್ಟ ಕಷ್ಟಗಳನ್ನು ತನ್ನಿಂದಲೇ ನೋಡಲಾಗದ ಹಿಮವಂತ ಅದನ್ನು ಹೇಗೆ ಸರಿಪಡಿಸುತ್ತಾನೆ, ಕಥೆಯ ಅಂತ್ಯ ಹೇಗೆ ಆಗುತ್ತದೆ ಎಂಬುದನ್ನು ಓದುಗ ದೊರೆಗಳು ತಾವೇ ಓದಿ ತಿಳಿದುಕೊಂಡರೆ ಹೆಚ್ಚು ಚೆಂದ.

ಎಷ್ಟೇ ಸರಿ ಓದಿದರೂ ಪ್ರತಿ ಸರಿ ಕಣ್ಣೀರಿಡಿಸುವ ಈ ಕಥೆಯಲ್ಲಿ ಕೊನೆಗೂ ಉಳಿದು ಹೋಗುವುದು ಎರಡು ಪ್ರಶ್ನೆಗಳು “ದೇವರಿಗೆ ಮೋಸ ಮಾಡ್ತಾರ?” ಮತ್ತು “ಹೇಳಿ ಹೋಗು ಕಾರಣ”.

ಈ ಕಾದಂಬರಿಯು ಪ್ರೀತಿ, ಕಾಮ, ತ್ಯಾಗ, ನೋವು, ದ್ವೇಷ, ಜೀವನ, ಜವಾಬ್ದಾರಿ ಮತ್ತು ಸಂಬಂಧಗಳ ಮಧ್ಯೆ ಚಲಿ‌ಸುತ್ತದೆ‌‌. ರೋಚಕ ತಿರುವುಗಳ ಜೊತೆ ಭಯನಕವಾದ ಘಟ್ಟಗಳು, ಗದ್ಗದಿತವಾದ ಸನ್ನಿವೇಶಗಳು ಓದುಗರನ್ನು ಸೆಳೆಯುತ್ತದೆ. ಪ್ರೇಯಸಿಯಲ್ಲಿ ತಾಯಿಯ ಮಮತೆ ಕಾಣುವ ಸಂದರ್ಭ ಎರಡು ನಿಮಿಷ ನಮ್ಮನ್ನು ಮೌನಿಯಾಗಿ ಮಾಡಿಬಿಡುತ್ತದೆ.

ಕಟ್ಟಿದ ಆಸ್ಪತ್ರೆ ಕನಸಾಗಿಯೇ ಉಳಿದಿದೆ, ಹಿಮವಂತನ ಪ್ರೀತಿ ದಿಗ್ಭ್ರಮೆಯ ಶೋಕ ಸಾಗರದಲ್ಲಿ ಮುಳುಗಿದೆ. ಕಾದಂಬರಿಯ ಅಂತ್ಯದಲ್ಲಿ ಕಣ್ಣಂಚಿನಲ್ಲಿ ಹನಿಯಾಗಿ ಜಾರುವುದಂತೂ ಖಚಿತ. ಪ್ರತಿ ಹದಿಹರೆಯದವರು ಓದಲೇ ಬೇಕಾದ ಕಾದಂಬರಿ. ಸಾಧ್ಯವಾದರೆ ನಿಮಗೆ ೨೪ ವರ್ಷ ತುಂಬುವುದರೊಳಗೆ ಓದಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

4383

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು