News Kannada
Wednesday, March 29 2023

ಅಂಕಣ

ಅರೆ ತಲೆ ನೋವಿನ ಬಗ್ಗೆ ಉದಾಸೀನತೆ ಬೇಡ…

Photo Credit :

ಮೈಗ್ರೇನ್‌ ಇಲ್ಲವೇ‌ ಅರೆ ತಲೆ‌ ನೋವು ಇದು ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲಾ ವಯಸ್ಸಿನ ಜನರನ್ನು ಕಾಡುವ ಸಮಸ್ಯೆಯಾಗಿದೆ.ಸಾಮಾನ್ಯ ತಲೆನೋವಿನಂತೆಯೇ ಪ್ರಾರಂಭವಾಗುವ ಮೈಗ್ರೇನ್ ನಿಧಾನವಾಗಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಾ ತಲೆಯ ನಡುವಿನಿಂದ ಕೊಂಚ ಎಡಭಾಗದಲ್ಲಿ ಅಥವಾ ಕೊಂಚ ಬಲಭಾಗದಲ್ಲಿ ಕೇಂದ್ರೀಕರಿಸಿದಂತೆ ನೋವು ಪ್ರಾರಂಭವಾಗುತ್ತದೆ. ಕೊಂಚ ಹೊತ್ತಿಗೇ ಈ ನೋವು ಎಷ್ಟು ಪ್ರಬಲವಾಗುತ್ತದೆ ಎಂದರೆ ಮೆದುಳು ಗ್ರಹಿಸುವ ದೃಷ್ಟಿ, ಶ್ರವಣ, ಯೋಚನಾಶಕ್ತಿ ಮೊದಲಾದ ಎಲ್ಲಾ ಶಕ್ತಿಗಳನ್ನು ಈ ನೋವು ಆವರಿಸಿ ಬಿಡುತ್ತದೆ. ತೀವ್ರ ಮೈಗ್ರೇನ್‌ ತಲೆನೋವಿಗೆ ಕಾರಣವಾಗುವ ಯಾವುದೇ ಅಂಶವನ್ನು ‘ಮೈಗ್ರೇನ್‌ ಪ್ರಚೋದಕ’ ಎನ್ನುತ್ತಾರೆ.

ಈ ಪ್ರಚೋದಕಗಳ ಪ್ರಭಾವಕ್ಕೆ ವ್ಯಕ್ತಿ ಸಂಪರ್ಕಕ್ಕೆ ಬಂದಾಗ ಅಥವಾ ಅಂಥ ಸಂದರ್ಭದಿಂದ ಹಿಂದೆ ಸರಿದಾಗ ತೀವ್ರ ಮೈಗ್ರೇನ್ ತಲೆನೋವು ಬರುತ್ತದೆ. ವರ್ತನೆ, ಪರಿಸರ, ನಂಜು, ಆಹಾರ ಕ್ರಮ, ರಾಸಾಯನಿಕ ಅಥವಾ ಹಾರ್ಮೋನಿನಿಂದ ಉಂಟಾಗುತ್ತವೆಂದು ಈ ಪ್ರಚೋದಕಗಳನ್ನು ವರ್ಗೀಕರಿಸಬಹುದು. ವೈದ್ಯಕೀಯ ಸಾಹಿತ್ಯದಲ್ಲಿ ಈ ಅಂಶಗಳನ್ನು ‘ಒತ್ತರಕಾರಿಗಳು'(=ಪ್ರೆಸಿಪಿಟೆಂಟ್ಸ್)’ ಎಂದು ಈ ಬಗ್ಗೆ ಕಾಕುಂಜೆ ಆಯುರ್ವೇದಿಕ್ ವೆಲ್ ನೆಸ್ ಕ್ಲಿನಿಕ್ ವೈದ್ಯೆ ಡಾ. ಅನುರಾಧ.

ಕೆಲವೊಮ್ಮೆ ಮೈಗ್ರೇನ್‌‌ ಕಾಣಿಸಿಕೊಳ್ಳಲು ಸ್ಪಷ್ಟ “ಕಾರಣ”ಗಳಿರುವುದಿಲ್ಲ. ಕೆಲವು ಪರಿಸರದ ಅಂಶಗಳಿಗೆ ಪ್ರವೇಶಿಸುವುದರಿಂದ ವ್ಯಕ್ತಿಯ ಮೈಗ್ರೇನ್‌ ತೀವ್ರಗೊಳ್ಳುತ್ತದೆ ಅಥವಾ ಪ್ರಚೋದನೆಗೆ ಒಳಗಾಗುತ್ತದೆ ಎಂಬುದೊಂದು ಸಿದ್ಧಾಂತ. ಮೈಗ್ರೇನ್‌ಗೆ ಈಡಾಗುವವರ ತಲೆನೋವು ಮತ್ತು ಹಲವಾರು ಪ್ರಚೋದಕ ಅಂಶಗಳ ನಡುವಿನ ಸಂಬಂಧವನ್ನು ಗುರುತಿಸುವ ಮ‌ೂಲಕ ಹಾಗೂ ಮೈಗ್ರೇನ್ ಬಂದ ಬಗ್ಗೆ “ತಲೆನೋವು ಡೈರಿ” ದಾಖಲೆಯನ್ನು ಇಟ್ಟುಕೊಳ್ಳುವುದರ ಮ‌ೂಲಕ ಅವರ ತಲೆನೋವಿನ ಪ್ರಚೋದಕಗಳನ್ನು ಕಂಡುಹಿಡಿಯುವಂತೆ ಸಲಹೆ ನೀಡಲಾಗುತ್ತದೆ. ಪ್ರಚೋದಕ ಆಹಾರ ಕ್ರಮದಿಂದ ದೂರವಿರುವಂತೆಯೂ ಮುನ್ಸೂಚನೆ ಕೊಡಲಾಗುತ್ತದೆ. ಕೆಲವಷ್ಟು ಪ್ರಚೋದಕ ಅಂಶಗಳು ಅದರ ಪ್ರಮಾಣವನ್ನು ಅವಲಂಬಿಸಿರುತ್ತವೆ ಎಂಬುದು ಗಮನಾರ್ಹ.

ಗಾಢವರ್ಣದ ಚಾಕೋಲೇಟ್‌ನ ಸಣ್ಣ ತುಂಡನ್ನು ತಿಂದರೆ ಬಾರದಿರುವ ಮೈಗ್ರೇನ್‌‌, ಅರ್ಧ ಭಾಗದಷ್ಟು ಅದೇ ಚಾಕೋಲೇಟ್‌ ತಿಂದರೆ ನೋವಿಗೆ ಪಕ್ಕಾಗಬಲ್ಲ ವ್ಯಕ್ತಿಗೆ ಖಂಡಿತವಾಗಿ ಬರಬಹುದು. ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಪ್ರಚೋದಕ ಅಂಶಗಳಿಗೆ ಈಡಾದಾಗ ಮೈಗ್ರೇನ್‌ ಉಂಟಾಗುವ ಸಂಭಾವ್ಯತೆ ಹೆಚ್ಚಾಗಿರುತ್ತದೆ. ಉದಾ. ಬಿಸಿ, ತೇವ ದಿನದಲ್ಲಿ ಹಲವಾರು ಪ್ರಚೋದಕ ಅಂಶಗಳಿರುವ ಆಹಾರವನ್ನು ಸೇವಿಸಿದರೆ ಒತ್ತಡದಿಂದ ಸ್ವಲ್ಪ ಪ್ರಮಾಣದ ನಿದ್ದೆ ಮಾಡಿದ ನಂತರ ಮೈಗ್ರೇನ್‌‌ ಖಂಡಿತವಾಗಿ ಬರಬಹುದು. ಆದರೆ ತಂಪಾದ ದಿನದಲ್ಲಿ ಒಂದು ಪ್ರಚೋದಕ ಅಂಶವಿರುವ ಆಹಾರವನ್ನು ಸೇವಿಸಿ, ಕನಿಷ್ಠ ಒತ್ತಡ ಇರುವ ಪರಿಸರದಲ್ಲಿ ಚೆನ್ನಾಗಿ ನಿದ್ರೆ ಮಾಡಿದರೆ ಮೈಗ್ರೇನ್‌ ಬರುವ ಸಂಭವವಿಲ್ಲ. ಮೈಗ್ರೇನ್‌ ಬರದಿರುವಂತೆ ತಡೆಯುವುದು ಬಹು ಕಷ್ಟ, ಆದರೆ ಮೈಗ್ರೇನ್‌ ದಿನಚರಿಯನ್ನು ನಿಖರವಾಗಿ ಬರೆದು ಇಟ್ಟುಕೊಂಡರೆ ಹಾಗೂ ಕ್ರಮಬದ್ಧವಾದ ಜೀವನಕ್ರಮದಿಂದ ಮೈಗ್ರೇನ್‌ನನ್ನು ದೂರವಿರಿಸಬಹುದು. ಕೆಲವು ಪ್ರಚೋದಕ ಅಂಶಗಳನ್ನು ವಾಸ್ತವಿಕವಾಗಿ ದೂರವಿರಿಸಲು ಸಾಧ್ಯವಿಲ್ಲ. ಉದಾ. ಹವಾಮಾನ ಅಥವಾ ಭಾವೋದ್ವೇಗಗಳು. ಆದರೆ ಪ್ರಚೋದಕ ಅಂಶಗಳನ್ನು ಮಿತಿಗೊಳಿಸುವ ಮ‌ೂಲಕ ತಪ್ಪಿಸಿಕೊಳ್ಳಲಾಗದ-ಅಂಶಗಳು ರೋಗಿಗಳ ಮೇಲೆ ಕಡಿಮೆ ಪರಿಣಾಮವನ್ನು ಬೀರುವಂತೆ ಮಾಡಬಹುದು.

See also  ಸಂಪ್ರದಾಯದಿಂದ ಟ್ರೆಂಡಾಗಿ ಬದಲಾದ ಮದರಂಗಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

4283
Swathi M G

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು