News Kannada
Wednesday, July 06 2022

ಅಂಕಣ

ಭಗ್ನಪ್ರೇಮದ ಏಕ ವ್ಯಕ್ತಿಯ ಯಾತನೆಯ ಸಂಭ್ರಮಾಚರಣೆ ಈ “ಎಲ್” - 1 min read

Photo Credit :

“ಎಲ್” ಕಾದಂಬರಿ ಮೂರು ಭಾಗಗಳಲ್ಲಿ ಬಿಚ್ಚಿಕೊಳ್ಳುವ ಕಥೆ. ಅಪ್ಪ, ಪ್ರೇಯಸಿ ಹಾಗೂ ತನ್ನ ನಡುವೆ ಹರಡಿಕೊಂಡಿದೆ. ತನ್ನ ತಳಮಳಗಳಿಗೆ ಕವಿತೆಯ ಮಾಧ್ಯಮ ಹುಡುಕುವ ಎಲ್ ಗೆ ಅದು ತನ್ನ ಮತ್ತು ಪ್ರೇಯಸಿಯ ಜೋಡಿಸುವ ಮಾಧ್ಯಮವಾಗಿ ಒದಗಿ ಬಂದರೆ, ಕೊನೆಗದರ ಹೊರತು ತನಗೆ ಸಂವಹನಕ್ಕೆ ದಾರಿಯೇ ಇಲ್ಲ ಎಂಬುದರ ಅರಿವಾಗುತ್ತದೆ‌. ಸಿಗರೇಟು ಮದ್ಯದಂತೆ ಕವಿತೆ ಬರೆಯುವ ಚಟವೂ ಅಪಾಯಕಾರಿ ಎಂಬಂತಹ ಸತ್ಯದ ಜೊತೆಗೆ ಅದಿಲ್ಲದೆ ತಾನಿಲ್ಲ ಎನ್ನುವುದೂ ಅವನಿಗೆ ಗೊತ್ತು. ಹಾಗಂತ ಎಲ್‌ಗೆ ಅದನ್ನು ಹೊರಜಗತ್ತಿಗೆ ತೋರಿಸಕೊಳ್ಳುವ ಹಪಹಪಿಯಿಲ್ಲ.

ಅಸಂಖ್ಯಾತ ಕವಿತೆಗಳ ಬರೆದು ಸುಟ್ಟು, ಹರಿದು ಗೊತ್ತಿದೆ ಅವನಿಗೆ.  ತನ್ನ ಕವಿತೆಗಳ ವಾಚನವೂ ಅವನಿಗೆ ಖುಷಿ ಕೊಡುವ ಸಂಗತಿ ಅಲ್ಲ. ಹೇಳಬೇಕಾದ್ದನ್ನು ಹೇಳುವ ಮಾಧ್ಯಮ ಅದು ಅವನಿಗೆ.

ಅಪ್ಪ ಅಮ್ಮನ ಪ್ರೀತಿ ವಂಚಿತನಾಗಿ ಬೆಳೆದ ಎಲ್‌ಗೆ ತನ್ನ ಕವಿತೆಗಳು ಅರಳುವುದಕ್ಕೂ ಅವನ್ನು ಓದುಗರು ಪ್ರಶಂಸಿಸುವುದನ್ನೂ ನೋಡುವ ಬಾಲ್ಯ ಒದಗಿಲ್ಲ. ಓದಿಗೆಂದು ಅವನು ಬಂದ ಊರಲ್ಲಿ ಸಿಕ್ಕವಳಲ್ಲಿ ಅದು ಚಿಗುರಿ ಅವನಿಗೆ ಹೊಸದಾರಿ ತೆರೆಯುತ್ತದೆ. ಆದರೆ ಬದಲಾವಣೆಗೆ ಹಿಂಜರಿಯುವ ಮನಸು ಆಮೇಲೆ ಅದಕ್ಕೇ ಅಂಟಿಕೊಳ್ಳುವ ಹಾಗೆ ಅವನಿಗೆ ಅವಳು ಲೀಲಾವತಿ ಕಾಡುತ್ತಾಳೆ, ಹಿಂಸಿಸುತ್ತಾಳೆ, ಪ್ರೀತಿಸುತ್ತಾಳೆ  ಎಲ್ಲ ಪ್ರೇಮಿಗಳ ನೋವಿಗದ್ದಿದ ಕುಂಚದ ಚಿತ್ರಣವೇ ಇಲ್ಲೂ.

ಇದು ಹುಡುಕಾಟದ ಕಥೆ, ಗುಟ್ಟುಗಳ ಕಥೆ, ಕಾದಂಬರಿ ಶುರುವಾದ ಬಿಂದುವಿಗೇ ಬಂದು ನಿಂತು ವೃತ್ತ ಪೂರ್ಣಗೊಳ್ಳುತ್ತದೆ. ಎಲ್ ತನಗೆ ತೋಚಿದ ತಾನು ಸತ್ಯ ಅಂದುಕೊಂಡ ಸಂಗತಿಗಳ ಬಗ್ಗೆ ಮಾತ್ರ ಹೇಳುತ್ತಾ ಹೋಗುತ್ತಾನೆ. ಅದೇ ಸತ್ಯವಾ? ಲೀಲಾವತಿ ಆದ ಬಳಿಕ ಬಂದ ಪ್ರೆಯಸಿಯರ ಕಥೆ ಏನು? ಅವರಿಗೆ ಮಹತ್ವವೇ ಇಲ್ಲವೆ? ಹಾಗಾದರೆ ಖ್ಯಾತಿ ಬೇಡವೇ ಅವನಿಗೆ? ನೋವೇ ಸಾಕೇ? ಇಲ್ಲ ಉತ್ತರ ಸಿಗುವುದಿಲ್ಲ. ಓದಿ…. ಅನುಭವಿಸಿ.

See also  ಸ್ವಯಂ-ಅನ್ವೇಷಣೆಯು ವೈಯಕ್ತಿಕ ಪರಿವರ್ತನೆಯ ಪ್ರಮುಖ ಮೂಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

4383
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು