News Kannada
Tuesday, October 03 2023
ಅಂಕಣ

ತ್ವಚೆಯ ಕಾಂತಿ ಹೆಚ್ಚಿಸುತ್ತದೆ ಐಸ್ ಕ್ಯೂಬ್ ಫೇಶಿಯಲ್

Ice Cube
Photo Credit :

Listen to the Article narrated by the author:

ಸಾಮಾನ್ಯವಾಗಿ ಹುಡುಗಿಯರು ಸ್ಕಿನ್ ಕೇರ್ ಉತ್ಪನ್ನಗಳಿಗಾಗಿ ಹುಡುಕಾಡುತ್ತಾರೆ. ಇದರ ಬದಲು ನಾವು ನಮ್ಮ ಮನೆಯಲ್ಲಿಯೇ ದೊರೆಯುವ ಐಸ್‍ಕ್ಯೂಬ್‍ನಂತಹ ಪೇಶಿಯಲ್‍ಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಇದರ ಮೂಲಕ ನಮ್ಮ ಮುಖಕ್ಕೆ ಹೊಳಪನ್ನು ನೀಡಬಹುದು. ಏಕೆಂದರೆ ಐಸ್‍ಕ್ಯೂಬ್ ಪೇಶಿಯಲ್ ಮುಖದ ತ್ವಚೆಗೆ ಅಗತ್ಯವಾದ ರಕ್ತ ಸಂಚಾರವನ್ನು ಒದಗಿಸುತ್ತದೆ.

ಮುಖದ ಕಾಂತಿಯನ್ನು ದುಪ್ಪಟ್ಟುಗೊಳಿಸುವಲ್ಲಿ ಐಸ್‌ಕ್ಯೂಬ್ ಮಹತ್ತರವಾದುದು. ನಿಮ್ಮ ತ್ವಚೆ ಮಂಕಾಗಿದ್ದಲ್ಲಿ ಐಸ್ ಕ್ಯೂಬ್‌ನಿಂದ ಉಜ್ಜಿಕೊಳ್ಳಬೇಕು.ಮೊಡವೆಯಿಂದ ಸಂರಕ್ಷಣೆಯನ್ನು ಪಡೆಯಲು ಐಸ್‌ಕ್ಯೂಬ್ ಅತ್ಯುತ್ತಮ ಔಷಧಿಯಾಗಿದೆ. ಇದು ಹೆಚ್ಚಿನ ತೈಲ ಉತ್ಪಾದನೆಯನ್ನು ಕಡಿಮೆಮಾಡುತ್ತದೆ.ತ್ವಚೆಯನ್ನು ನಯಗೊಳಿಸುವಲ್ಲಿ ಐಸ್‌ಕ್ಯೂಬ್ ಹೆಚ್ಚು ಉಪಯುಕ್ತ. ಇದು ತ್ವಚೆಯ ಆಳಕ್ಕೆ ಇಳಿದು ತ್ವಚೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಬಿಸಿ ಬಿಸಿಯಾದ ನೀರಿಗಿಂತ ತಣ್ಣೀರಿನ ಸ್ನಾನವು ದೇಹ ಮತ್ತು ಚರ್ಮ ಎರಡಕ್ಕೂ ಉತ್ತಮ ಎಂದು ಆಯುರ್ವೇದ ಹೇಳುತ್ತದೆ. ಬಿಸಿ ನೀರು ಚರ್ಮದಲ್ಲಿರುವ ನೈಸರ್ಗಿಕ ತೈಲವನ್ನು ತೆಗೆದು ಹಾಕಬಹುದು. ಅಲ್ಲದೆ, ಚರ್ಮವನ್ನು ಮತ್ತಷ್ಟು ಒಣಗುವಂತೆ ಮಾಡಬಹುದು ಆದರೆ ತಣ್ಣೀರು ತಾತ್ಕಾಲಿಕವಾಗಿ ರಂಧ್ರಗಳನ್ನು ಬಿಗಿಗೊಳಿಸಲು ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಐಸ್‍ಕ್ಯೂಬನ್ನು ಫೇಶಿಯಲ್ ಆಗಿ ಬಳಸಲು ಮೊದಲು ಒಂದು ಪೇಪರ್ ಟಿಶ್ಯೂವನ್ನು ತೆಗೆದುಕೊಳ್ಳಿ. ಅದರಲ್ಲಿ ಐಸ್‌ಕ್ಯೂಬ್ ಇಟ್ಟು ನಂತರ ಅದರಿಂದ ಮುಖದ ಮೇಲೇ ವೃತ್ತಾಕಾರವಾಗಿ ಮಸಾಜ್ ಮಾಡಿ. ಆದಷ್ಟು ಈ ಮಸಾಜನ್ನು ಬೆಳಗ್ಗೆ ಸ್ನಾನಕ್ಕೆ ಹೋಗುವ ಮೊದಲು ಮಾಡುವುದು ಉತ್ತಮ.

ಬೇಸಿಗೆ ಸಮಯದಲ್ಲಿ ಹೊರಗೆ ಹೋಗಿ ಬಂದು ಅಲೋವೇರಾ ಐಸ್ ಕ್ಯೂಬ್ ಅಪ್ಲೈ ಮಾಡಿದರೆ, ಬಾಡಿದ ದೇಹದ ಹಾಗೂ ಮುಖದ ನಯವಾದ ಚರ್ಮ ಮತ್ತೆ ತನ್ನ ಹೊಳಪನ್ನು ಕಾಯ್ದಿರಿಸಿಕೊಂಡು ತಂಪಾಗುತ್ತದೆ. ಏಕೆಂದರೆ ಅಲೋವೆರಾ ದಲ್ಲಿ ದೇಹದ ಚರ್ಮವನ್ನು ತಂಪಾಗಿಸಿ ಬಿಸಿಯನ್ನು ಶಮನ ಮಾಡುವ ಅದ್ಭುತ ಗುಣ ಲಕ್ಷಣಗಳಿವೆ.

ಐಸ್ ಕ್ಯೂಬ್ ನಿಂದ ಮಸಾಜ್ ಮಾಡುದರಿಂದ, ಊತವನ್ನು ನಿವಾರಿಸುತ್ತದೆ.ಕಣ್ಣುಗಳ ಕೆಳಗಿನ ಕಪ್ಪು ವಲಯಕ್ಕೆ ಚಿಕಿತ್ಸೆ ನೀಡುತ್ತದೆ. ತ್ವಚೆಯ ಮೇಲಿನ ಹೆಚ್ಚುವರಿ ಎಣ್ಣೆಯನ್ನು ತೊಡೆದು ಹಾಕುತ್ತದೆ. ಚರ್ಮಕ್ಕೆ ಆರೋಗ್ಯಕರವಾದ ಹೊಳಪನ್ನು ನೀಡುತ್ತದೆ.

See also  ಋತುವಿಗೆ ಅನುಗುಣವಾಗಿ ಆಹಾರ ಪದ್ಧತಿ ಇರಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು