News Kannada
Thursday, September 29 2022

ಅಂಕಣ

ಸುಂದರ ತ್ವಚೆಗಾಗಿ ಬಳಸಿ ಟೊಮಾಟೊ ಫೇಸ್ ಪ್ಯಾಕ್ - 1 min read

Photo Credit : Wikimedia

Listen to the Article

ಹೆಣ್ಣು ಸೌಂದರ್ಯ ಪ್ರೀಯೆ. ಆಕೆ ತನ್ನ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಹಲವಾರು ದಾರಿಗಳನ್ನು ಕಂಡುಕೊಳ್ಳುತ್ತಾಳೆ. ಆಕೆ ಈ ದಾರಿಯಲ್ಲಿ ಕೆಲವೊಮ್ಮೆ ಉಪಯೋಗ ಪಡೆದು ಕೊಳ್ಳಬಹುದು ಅಥವ ಸಮಸ್ಯೆಗಳನ್ನು ಅನುಭವಿಸಬಹುದು. ಆದ್ದರಿಂದ ಇಂತಹ ಹೊಸ ಹೂಸ ದಾರಿ ಕಂಡುಕೊಂಡು ಸಮಸ್ಯೆ ಮಾಡಿಕೊಳ್ಳುವ ಬದಲು ಮನೆಯಲ್ಲಿಯೇ ಸಿಗುವ ಟೊಮಾಟೊದಿಂದ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ. ಈ ಕಾಂತಿಯನ್ನು ಪಡೆದುಕೊಳ್ಳಲು ನೀವು ಹಸಿ ಟೊಮೆಟೊವನ್ನು ನೇರವಾಗಿ ಮುಖಕ್ಕೆ ಹಚ್ಚಿ ಅಥವಾ ಅದರ ರಸವನ್ನು ತೆಗೆದು ಮುಖಕ್ಕೆ ಹಚ್ಚಿಕೊಳ್ಳಿ.

ಟೊಮೆಟೊವನ್ನು ಮುಖಕ್ಕೆ ಉಜ್ಜಿಕೊಳ್ಳೊದ್ರಿಂದ ಮುಖದ ರಂಧ್ರಗಳನ್ನು ಆಳವಾಗಿ ಸ್ವಚ್ಛಗೊಳ್ಳುತ್ತದೆ, ಚರ್ಮವನ್ನು ಆರೋಗ್ಯಕರವಾಗಿ ಇಡುವುದಲ್ಲದೆ ಮುಖ ಹೊಳೆಯುವಂತೆ ಮಾಡುತ್ತದೆ. ಮಾತ್ರವಲ್ಲದೆ ಟೊಮೆಟೋ ರಸವನ್ನು ಹಚ್ಚುವ ಮೂಲಕ ಟ್ಯಾನಿಂಗ್ ಮಾರ್ಕ್ಸ್ ಕೂಡ ಕಡಿಮೆಯಾಗುತ್ತದೆ. ಇದರ ಜೊತೆಗೆ, ಚರ್ಮದ ಕಿರಿಕಿರಿಯು ಸಹ ಕಡಿಮೆಯಾಗುತ್ತದೆ.

ಟೊಮೆಟೊದಲ್ಲಿರುವ ತೇವಾಂಶವು ಚರ್ಮವನ್ನು ಮೃದುವಾಗಿಸುತ್ತದೆ, ಇದರಿಂದ ಮುಖವು ದಪ್ಪವಾಗಿ ಕಾಣುತ್ತದೆ. ಟೊಮಾಟೊದಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಕಾರಣದಿಂದ ಟೊಮೆಟೊ ಹಣ್ಣುಗಳಲ್ಲಿ ನಮ್ಮ ಚರ್ಮದ ಗಾಢವಾದ ಬಣ್ಣವನ್ನು ತಿಳಿ ಬಣ್ಣಕ್ಕೆ ಬದಲಾಯಿಸಿ ಚರ್ಮದ ಮೇಲೆ ಕಂಡುಬರುವ ಸತ್ತ ಜೀವಕೋಶಗಳನ್ನು ನಿವಾರಣೆ ಮಾಡಲು ಪ್ರಭಾವ ಶಾಲಿಯಾಗಿದೆ.

ನೀವು ಟೊಮೆಟೊವನ್ನು ನೇರವಾಗಿ ಮುಖಕ್ಕೆ ಹಚ್ಚಬಹುದು ಅಥವಾ ಪ್ಯಾಕ್ ಆಗಿ ಬಳಸಬಹುದು. ಈ ಟೊಮಾಟೊ ಫೇಸ್ ಪ್ಯಾಕ್ ಮಾಡಲು, ಎರಡು ಚಮಚ ಟೊಮೆಟೊ ತಿರುಳು, ಒಂದು ಚಮಚ ಜೇನುತುಪ್ಪ ಇವೆರಡರ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ನಂತರ 15 ನಿಮಿಷ ಅಥವಾ ಒಣಗುವ ತನಕ ಹಾಗೆ ಬಿಡಿ. ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಈ ರೀತಿ ಮಾಡಿ.

ಟೊಮೆಟೊ ಮುಖಕ್ಕೆ ಹೊಳಪು ನೀಡುತ್ತದೆ ಮತ್ತು ಜೇನುತುಪ್ಪವು ಪ್ರಮುಖ ಪೋಷಕಾಂಶ ಒದಗಿಸುವ ಮೂಲಕ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

 

See also  ತಮಿಳುನಾಡಿನಿಂದ ಗೋವಾಕ್ಕೆ ಸೈಕಲ್ ನಲ್ಲಿ ಪಯಣ ಆರಂಭಿಸಿದ ಮುಗೇಶ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11034
Gayathri Gowda

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು