ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಅತೀಯಾಗಿ ಕಾಳಜಿ ವಹಿಸುತ್ತಾರೆ. ಅನೇಕರು ಮಾರುಕಟ್ಟೆಗೆ ಬಂದಿರುವಂತಹ ಸೌಂದರ್ಯವರ್ಧಕಗಳನ್ನು ಬಳಕೆ ಮಾಡಿ ತಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗೆಲ್ಲಾ ಮಾಡುವ ಬದಲು ಮನೆಯಲ್ಲೇ ಸಿಗುವಂತಹ ಅರಶಿನವನ್ನು ಬಳಸಿಕೊಂಡು ಮುಖದ ಕಾಂತಿ ಹೆಚ್ಚಿಸಿಕೊಳ್ಳಿ.
ಮಾರ್ಕೆಟ್ ನಲ್ಲಿ ಸಿಗುವ ಅರಶಿನ ಹುಡಿಗಿಂತ ಮನೆಯಲ್ಲೇ ಬೆಳೆಸಿದೆ ಅರಶಿನದ ಗಿಡದ ಬುಡದಿಂದ ಅರಿಶಿಣ ತೆಗೆದು ಉಪಯೋಗಿಸಿದರೆ ಇನ್ನಷ್ಟು ಪರಿಣಾಮಕಾರಿಯಾಗಲಿದೆ. ಮೊದಲಿನಿಂದಲೂ ದೇಹದ ಆರೋಗ್ಯ ಮತ್ತು ಚರ್ಮದ ರಕ್ಷಣೆ ಹಾಗೂ ಸೌಂದರ್ಯ ಕಾಪಾಡುವುದರಲ್ಲಿ ಅರಶಿಣ ತನ್ನದೇ ಪಾತ್ರ ವಹಿಸಿಕೊಂಡು ಬಂದಿರುವುದನ್ನು ನಾವು ಕಾಣಬಹುದಾಗಿದೆ.
ಕಸ್ತೂರಿ ಅರಿಶಿಣವನ್ನು ವಾರಕ್ಕೆ ನಾಲ್ಕು ಬಾರಿ ಮುಖಕ್ಕೆ ಹಚ್ಚಿದರೆ ಮುಖದ ಕಲೆಗಳನ್ನು ಮಾಯವಾಗುತ್ತವೆ. ಕಸ್ತೂರಿ ಅರಿಶಿನದ ತುಂಡನ್ನು ಹಾಲಿನ ಕೆನೆಯಲ್ಲಿ ತೇಯ್ದು ಮುಖಕ್ಕೆ ಪ್ಯಾಕ್ ಹಾಕಿದ್ದರೆ ಮುಖದಲ್ಲಿನ ಮೊಡವೆ ಕಜ್ಜಿಗಳು ಗುಣವಾಗಿ ಮುಖ ಕಾಂತಿಯುವಾಗುತ್ತದೆ.
ಸೂಕ್ಷ್ಮ ಚರ್ಮದವರು ಹಾಲು ಅಥವಾ ಜೇನಿನೊಂದಿಗೆ ಕಸ್ತೂರಿ ಅರಿಶಿನ ಬೆರೆಸಿ ಉಪಯೋಗಿಸಬಹುದು. ಎಣ್ಣೆ ಚರ್ಮದವರು ಪನ್ನಿರೀನೊಂದಿಗೆ ಅಥವಾ ಗುಲಾಬಿ ಎಸಳಿನೊಂದಿಗೆ ಅರೆದು ಉಪಯೋಗಿಸಬಹುದು. ಅರಿಶಿಣವನ್ನು ಮುಖ ಕೈ ಕತ್ತು ಮುಂತಾದ ಕಡೆ ಹಚ್ಚುತ್ತಾ ಬಂದರೆ ಅನಗತ್ಯ ಕೂದಲು ಉದುರುತ್ತವೆ.
ಅರಿಶಿನದ ಉಪಯೋಗದ ಬಗ್ಗೆ ಗೊತ್ತಿಲ್ಲದವರು ಇನ್ನು ಮುಂದೆಯಾದರೂ ಇದರ ಮಹತ್ವ ಅರಿತು ಉಪಯೋಗಿಸುವುದನ್ನು ರೂಢಿಸಿಕೊಂಡರೆ ಮುಖದ ಕಾಂತಿ ಪಡೆಯಲು ಅನುಕೂಲವಾಗುತ್ತದೆ. ಅಲ್ಲದೆ ಮುಖದಲ್ಲಿ ಕೂದಲು ಬೆಳೆಯುವುದು ಕಡಿಮೆಯಾಗುತ್ತದೆ.