News Kannada
Wednesday, December 06 2023
ಅಂಕಣ

ಗಂಡನ ಯಶಸ್ಸಿನ ಹಿಂದಿನ ಅದ್ಭುತ ಪ್ರೇರಣಾ ಶಕ್ತಿ ಮನದೊಡತಿ

force-behind-her-husbands-success
Photo Credit : Freepik

ಇವಳನ್ನು ಗೃಹಿಣಿ ಎನ್ನಬಹುದು ಅಥವಾ ಮನೆಯೊಡತಿ, ಜೀವದ ಗೆಳತಿ, ಜೀವನದ ಗೆಳತಿ. ಇವಳು ಮನೆಯ ಬೆಳಕು. ಇವಳು ಮನೆಯ ನೆಮ್ಮದಿ ಸುಖ ಶಾಂತಿಗೆ ನಾಂದಿ ಇವಳು. ಸಹನೆ, ಪ್ರೀತಿ ಇವಳ ಒಡವೆ. ಸಂಬಂದಗಳೇ ಇವಳ ಆಸ್ತಿ. ಹಿರಿಯರ ಮಾರ್ಗದರ್ಶನವೇ ಇವಳಿಗೆ ಪ್ರೇರಣೆ . ಒಂದು ಕುಟುಂಬದ ಜೀವಾಳವೇ ಇವಳು.

ಗಂಡಿನ ಬದುಕಿಗೆ ಸ್ಫೂರ್ತಿ ದಾರಿ ದೀಪ ಹೆಂಡ್ತಿ. ಗಂಡನನ್ನು ಅತೀಯಾಗಿ ಪ್ರೀತಿಸುವ ಜೀವ, ಗೌರವಿಸುವ, ಸದಾ ಒಳ್ಳೆಯದನ್ನೇ ಬಯಸುವ ಜೀವ. ಗಂಡ ಹೆಂಡ್ತಿಯ ಸಂಬಂಧ ಅತೀ ಮಧುರ. ಹೆಂಡ್ತಿಯಾದವಳು ಗಂಡನಿಂದ ಬಯಸುವುದಾರೂ ಎನು ? ಪ್ರೀತಿ, ಗಮನ, ಆರೈಕೆ…. ಇವಳಿಗೆ ಸಿಗುವ ಈ ಕೊಂಚ ಪ್ರೀತಿಗೆ ಬದಲಾಗಿ ಗಂಡನಿಗೆ ಸದಾ ಬೆಂಗಾವಾಲಾಗಿರುತ್ತಾಳೆ. ಅವನಿಗೆ ಪ್ರತಿಯೊಂದು ವಿಷಯದಲ್ಲಿ ಬೆಂಬಲಿಸುತ್ತಾಳೆ. ಗಂಡ, ಗಂಡನ ಮನೆಯ ಘನತೆ ಗೌರವನ್ನು ಕಾಪಾಡುವಲ್ಲಿ ಸದಾ ಮುಂದಿರುತ್ತಾಳೆ. ಮನೆಯ ಸದಸ್ಯರ ಪ್ರತಿಯೊಬ್ಬರ ಅವಶ್ಯಕತೆಯ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾಳೆ. ಅದು ಊಟ ತಿಂಡಿ ವಿಚಾರದಲ್ಲಿ ಇರಬಹುದು ಅಥವಾ ಆರೋಗ್ಯದ ವಿಷಯದಲ್ಲಿ ಇರಬಹುದು. ಮನೆಯವರ ಅಭಿಪ್ರಾಯ ಸಲಹೆಗಳಿಗೆ ತಲೆಬಾಗುವುದು. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಹಾಗೂ ಮನೆಗೆ ರಕ್ಷ ಕವಚದಂತೆ ಕಾರ್ಯನಿರ್ವಹಿಸುವುದು. ಅತ್ತೆ ಮಾವ ಮನೆಯ ಹಿರಿಯರನ್ನು ಗೌರವದಿಂದ ಕಾಣುವುದು ಇವಳ ವಿಶಿಷ್ಟ ಗುಣ.

ಪ್ರೀತಿ ಸಹನೆಯಿಂದ ತಾಳ್ಮೆಯಿಂದ ಎಲ್ಲರ ಸೇವೆಯಲ್ಲಿ ಸದಾ ನಿರಂತರ ಕರ್ತವ್ಯ ನಿರತರ. ಅವಳ ನಿಜವಾದ ಸೌಂದರ್ಯ ಹೊಳೆಯುವುದು ಅವಳ ಕರ್ತವ್ಯ ಗುಣಗಳು ಮನೆಯವರೊಂದಿಗೆ ಬೆರೆಯುವ ಪರಿ ಅವಳನ್ನು ಇನಷ್ಟು ಸುಂದರಿಯಾನ್ನಾಗಿಸುತ್ತದೆ.

ಗಂಡ ಕೆಲಸದ ನಿಮ್ಮಿತ್ತ ಪರಊರಿಗೆ ಹೋದಾಗ ನೆನೆಸಿಕೊಳ್ಳದ ಸಮಯವಿಲ್ಲ. ಸರಿಯಾಗಿ ಊಟ, ನಿದ್ರೆ, ಹೋದ ಕೆಲಸ ಚೆನ್ನಾಗಿ ಆಗಿರಬಹುದುದೇ ಎಂಬ ಚಿಂತೆಯಲ್ಲಿಯೇ ಕಾಯುತ್ತಿರುತ್ತಾಳೆ. ಕುಟುಂಬದ ಯಾವುದೇ ಸಮಸ್ಯೆ ಇರಲಿ ಅದಕ್ಕೆ ಪರಿಹಾರ ಕಂಡುಹಿಡಿಯುವಲ್ಲಿ ನಿಪುಣೆ. ಮನೆಯಲ್ಲಿ ಹೊಸತನವನ್ನು ಪರಿಚಯಿಸುವವಳು. ಸಮಯ ಪ್ರಜ್ಞೆ , ಕರ್ತವ್ಯ ಹೀಗೆ ಸದಾ ವ್ಯಸ್ತಳಾಗುತ್ತಾಳೆ.

ಎಷ್ಟೋ ಜನ ಹೆಣ್ಣು ಮಕ್ಕಳ ಜೀವನ ಅಂದರೆ ಇಷ್ಟೆ ಮನೆ ಕೆಲಸ ಅಡುಗೆ ಮನೆಯವರ ಸೇವೆ. ಇವೆಲ್ಲ ಇವಳ ಕರ್ತವ್ಯ ಎನ್ನುವವರು ತುಂಬಾನೇ ಮಂದಿ. ಹೆಣ್ಣಿನ ಮನಸ್ಸುನ್ನು ಬಲ್ಲವರು ಯಾರು ಇಲ್ಲ ಆದರೆ ಅವಳಲ್ಲಿನ ಭಾವನೆಯನ್ನು ಅರಿತು ಗೌರವಿಸಿದಲ್ಲಿ ಸುಖ ಸಂಸಾರಕ್ಕೆ ಆಧಾರವಾಗುತ್ತಾಳೆ. ಇವೆಲ್ಲದರ ನಡುವೆ ವೈಯಕ್ತಿಕ ಮತ್ತು ವೈವಾಹಿಕ, ಔದ್ಯೋಗಿಕ ಜೀವನ ಎಲ್ಲವನ್ನು ಸರಿದೂಗಿಸುತ್ತಾ ತನ್ನದೇ ಆದ ಒಂದು ಸ್ಥಾನವನ್ನು ಸಮಾಜದಲ್ಲಿ ಗುರುತಿಸಿಕೋಳ್ಳುವ ಮಾದರಿ ಅದ್ಭುತ.

ಒಂದು ಹೆಣ್ಣಿಗೆ ಸರ್ವಸ್ವವು ಅವಳ ಗಂಡ ಆಗಿರುತ್ತಾನೆ. ತನ್ನ ಕರ್ತವ್ಯದಿಂದ ಯಾವತ್ತು ಹಿಂಜರಿಯುವುದಿಲ್ಲ ಕಷ್ಟದಲ್ಲೂ ಸುಖದಲ್ಲೂ ಎಲ್ಲ ಸಂದರ್ಭದಲ್ಲಿ ದಿಟ್ಟವಾಗಿ ಗಂಡನ ಜೊತೆ ನಿಲ್ಲುವ ಏಕೈಕ ಜೀವ ಮನದೊಡತಿ.

See also  ನೋಯ್ಡಾ: ಜಾನುವಾರುಗಳನ್ನು ಸಾಗಿಸುತ್ತಿದ್ದ ಇಬ್ಬರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು