News Kannada
Thursday, December 01 2022

ಅಂಕಣ

ಮೆಟ್ಟಿಲ ಕೆಳಗಿನ ಸ್ಥಳವಕಾಶವನ್ನು ಸಮರ್ಪಕವಾಗಿ ಬಳಸೋಣ - 1 min read

lets-make-the-most-of-the-space-at-the-bottom-of-the-stairs
Photo Credit : Pexels

ಕೆಲವೊಂದು ಮನೆಯಲ್ಲಿ ಸಣ್ಣಪುಟ್ಟ ಸ್ಥಳಾವಕಾಶವನ್ನು ಸಮರ್ಪಕವಾಗಿ ಬಳಕೆಯಾಗದಿರುವುದನ್ನು ಕಾಣಬಹುದು. ಮನೆಯ ಒಳಗೆ ಮತ್ತು ಹೊರಗೆ ಎರಡು ಕಡೆಯಲ್ಲೂ. ಇಂತಹ ಸ್ಥಳಗಳನ್ನು ನೀವು ಕ್ರೀಯಶೀಲರಾಗಿದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬಹದು.

ಸಾಮಾನ್ಯವಾಗಿ ಮೆಟ್ಟಿಲ ಕೆಳಗಿನ ಸ್ಥಳವನ್ನು ಬಳಸಿಕೋಳ್ಳಲು ಉತ್ತಮ ಉಪಾಯವನ್ನು ಮಾಡಬಹುದು. ಈ ಸ್ಥಳದ ಲಾಭವನ್ನು ಉತ್ತಮ ರೀತಿಯಲ್ಲಿ ಪಡೆಯಬಹುದಾಗಿದೆ. ಮಟ್ಟಿಲ ಕೆಳಗೆ ವಿಶೇಷ ರೀತಿಯ ವಿನ್ಯಾಸದ ಸಂಗ್ರಹಣಾ ಮಾದರಿಗಳನ್ನು ಅಳವಡಿಸಬಹುದು.

ಪುಸ್ತಕ ಪ್ರಿಯರು ತಮ್ಮ ಅಮೂಲ್ಯವಾದ ಪುಸ್ತಕಗಳನ್ನು ಅಚ್ಚುಕಟ್ಟಾದ ರೀತಿಯಲ್ಲಿ ಜೋಡಿಸಿಡಲು ಅಥಾವ ಮಿನಿ ಗ್ರಂಥಾಯವನ್ನು ನಿರ್ಮಿಸಬಹುದು. ಕಪಾಟ್, ರೀಡಿಂಗ್ ಟೇಬಲ್, ಚೇರನ್ನು ಮತ್ತು ಓದುವ ದೀಪವನ್ನು ಸೇರಿಸಿ ನಿಮ್ಮ ಏಕಾಂತ ಅಧ್ಯಯನಕ್ಕೆ ಯಾವುದೇ ಅಡೆತಡೆಗಳಿಲ್ಲದೆ ಓದಬಹುದು.

ಇನ್ನು ಕೆಲವರು ತಮ್ಮ ಮೋಜಿಗೆ ಮನೆಯ ಒಳಗೆನೆ ಮಿನಿ ಬಾರ್ ಲಾಂಜ್‌ನ್ನು ನಿರ್ಮಿಸಲು ಸೂಕ್ತ ಸ್ಥಳಾವಕಾಶವಾಗಿದೆ. ಮನೆಯವರ ಸ್ವಂತ ಸಣ್ಣ ಮನರಂಜನಾ ಸ್ಥಳವಾಕಾಶವಾಗಿದೆ. ಸಾಮನ್ಯವಾಗಿ ನಾವು ನಮ್ಮ ಚಪ್ಪಲಿ, ಛತ್ರಿ, ಕೋಟು ಮತ್ತು ಬೂಟುಗಳನ್ನು ಮನೆಯ ಹೊರಗಡೆ ಬಿಡುವುದು ವಾಡಿಕೆಯಾಗಿದೆ. ಈ ಎಲ್ಲ ವಸ್ತುಗಳನ್ನು ಸಂಗ್ರಹಿಸಿ ಜೋಪಾನವಾಗಿಡಲು ಮೆಟ್ಟಿಲಿನ ಕೆಳಗಿನ ಸ್ಥಳ ಸೂಕ್ತವಾಗಿದೆ. ಡ್ರಾಯರ್, ರ‍್ಯಾಕ್‌ಗಳನ್ನು ಅಳವಡಿಸಿ ದೈನಂದಿನ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಇಡಬಹುದು ಇದರಿಂದ ಮನೆಯ ಹೊರಗಿನ ಮೆಟ್ಟಿಲು ನಿಮ್ಮನ್ನು ಮುಜುಗರಕ್ಕೆ ಅವಕಾಶ ನೀಡುವುದಿಲ್ಲ.

ಮನೆಯಲ್ಲಿ ಮಕ್ಕಳು ಇದ್ದಲ್ಲಿ ಅವರ ಆಟಿಕೆಗಳನ್ನು ಜೋಡಿಸಿಡಲು ಕೂಡ ಸಹಕಾರಿಯಾಗಿದೆ.ಮಕ್ಕಳ ಆಟಿಕೆ, ಪುಸ್ತಕಗಳನ್ನು ಸಂಗ್ರಹಿಸಿಡಲು ಕ್ಯಾಬಿನೆಟ್‌ಗಳನ್ನು ನಿರ್ಮಿಸಿ ಖಾಲಿ ಜಾಗವನ್ನು ಉತ್ತಮ ರೀತಿಯಲ್ಲಿ ಬಳಸಬಹುದು. ಇದರಿಂದ ಮನೆಯ ತುಂಬಾ ಮಕ್ಕಳು ಆಟಿಕೆಗಳನ್ನು ಹರಡುವುದನ್ನು ತಪ್ಪಿಸಬಹುದು. ಆಟಿಕೆಗಳನ್ನು ಜೋಡಿಸಿ ಇಡುವುದರಿಂದ ಮನೆಯ ಅಲಂಕಾರಕ್ಕೆ ಒತ್ತು ನೀಡಿದಂತಾಗುತ್ತದೆ. ಮಕ್ಕಳಿಗೂ ತಮ್ಮ ಆಟಿಕೆಗಳು ಸುಲಭವಾಗಿ ಕೈಗೆ ಸಿಗುವಂತಿರುತ್ತದೆ. ಲಿವಿಂಗ್ ಎರಿಯದ ಸ್ಥಳವು ದೊರೆತಂತಾಗುತ್ತದೆ.

ಮನೆಯಲ್ಲಿಯೇ ಒಂದು ಸಣ್ಣದಾಗಿ ಆಫೀಸ್ ಕೆಲಸಕ್ಕೆ ಶಾಂತ ಚಿತ್ತರಾಗಿ ಕೆಲಸಮಾಡಲು ಮೆಟ್ಟಿಲಿನ ಕೆಳಗಿನ ಸ್ಥಳವು ಉತ್ತಮ. ಕಪಾಟುಗಳು ಮತ್ತು ಡೆಸ್ಕ್ ಹೊಂದಿರುವ ಹೋಮ್ ಆಫೀಸ್ ಆಗಿ ಪರಿವರ್ತಿಸಬಹುದಾಗಿದೆ.

ಮನೆಯ ಒಳಗೆ ಅತಿಥಿ ವಾಶ್‌ರೂಮ್ ನ್ನು ನಿರ್ಮಿಸುವುದಾದರೆ, ಮೆಟ್ಟಿಲಿನ ಕೆಳಗಿನ ಸ್ಥಳ ಸೂಕ್ತವಾಗಿರುತ್ತದೆ ಮತ್ತು ಹೆಚ್ಚು ಅನುಕೂಲಕರವಾಗಿರುತ್ತದೆ.ಇನ್ನು ಕೆಲವರು ತಮ್ಮ ನೆಚ್ಚಿನ ಪ್ರಾಣಿಗಳಾದ ನಾಯಿ, ಬೆಕ್ಕುಗಳ ಆರಾಮಕ್ಕೂ ಸೂಕ್ತವಾದ ಸ್ಥಳವಾಗಿರುತ್ತದೆ.

ಒಂದು ಸ್ಥಳವನ್ನು ಉತ್ತಮ ರೀತಿಯಲ್ಲಿ ಬಳಸುವುದು ನಮ್ಮ ಕ್ರೀಯಾ ಶೀಲತೆಯ ಮೇಲೆ ಅವಲಂಬಿತವಾಗಿದೆ. ನಮ್ಮ ಬುದ್ಧಿಶಾಲಿ ಕೂಡ ಇದರಲ್ಲಿ ಅಡಕವಾಗಿರುತ್ತದೆ. ಒಟ್ಟಿನಲ್ಲಿ ನಮ್ಮ ಅವಶ್ಯಕತೆ ಆದ್ಯತೆ ಮತ್ತು ಆಧುನಿಕ ವಿನ್ಯಾಸದ ಆಧುನಿಕ ಆಲೋಚನೆಗಳು ನಮ್ಮ ಮನೆಗೆ ಹೆಚ್ಚು ಮೆರುಗು ನೀಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

See also  ಸುಮಂಗಲಿಯರ ಸಂಕೇತ ಬೆಳ್ಳಿ ಕಾಲುಂಗುರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

30655

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು