News Kannada
Monday, December 05 2022

ಅಂಕಣ

ಸುಂದರ ಮುಖಕ್ಕಾಗಿ ದ್ರಾಕ್ಷಿ ಹಣ್ಣಿನ ಫೇಸ್ ಪ್ಯಾಕ್

Grapefruit face pack for a beautiful face
Photo Credit : Freepik

ಹೆಣ್ಣು ಸೌಂದರ್ಯ ಪ್ರಿಯೇ. ಆಕೆ ಮುಖದ ಬಗ್ಗೆ ಹೆಚ್ಚು ಕಾಲಜಿ ವಹಿಸುತ್ತಾಳೆ. ಮುಖದ ಕಾಂತಿ ಹೆಚ್ಚಿಸಲು ಹಲವಾರು ಮಾರ್ಗಗಳನ್ನು ಆಕೆಯೇ ಕಂಡು ಕೊಳ್ಳುತ್ತಾಳೆ. ಮುಖದ ಮೇಲೆ ಮೂಡುವಂತಹ ಮೊಡವೆ, ಕಲೆ ಹಾಗೂ ಬಿಸಿಲಿನಿಂದ ಆಗಿರುವಂತಹ ಕಲೆ ಇವೆಲ್ಲ ಮುಖದ ಸೌಂದರ್ಯವನ್ನು ಹಾಳುಮಾಡುತ್ತದೆ. ಇಂತಹ ಸಮಸ್ಯೆಯಿಂದ ದೂರಾಗಿ ಮುಖದ ಸೌಂದರ್ಯ ಹೆಚ್ಚಿಸಲು ಇಲ್ಲಿದೆ ಸಲಹೆಗಳು.

ಸೇಬು ಹಣ್ಣು ಮತ್ತು ದ್ರಾಕ್ಷಿಯ ಫೇಸ್ ಪ್ಯಾಕ್ ಮಾಡಲು ಕೆಲವು ತುಂಡು ಸೇಬು ಮತ್ತು ಸ್ವಲ್ಪ ದ್ರಾಕ್ಷಿ ತೆಗೆದುಕೊಂಡು ಅದನ್ನು ಮೆತ್ತಗಿನ ಪೇಸ್ಟ್ ಮಾಡಿಕೊಂಡು, ಎರಡನ್ನು ಸರಿಯಾಗಿ ಮಿಶ್ರಣ ಮಾಡಿ ಮುಖಕ್ಕೆ ಈ ಅನ್ನು ಪೇಸ್ಟ್ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ. ನಿಯಮಿತವಾಗಿ ಇದನ್ನು ಬಳಸಿದರೆ ಸ್ವಚ್ಛ ಹಾಗೂ ಕಾಂತಿಯುತ ತ್ವಚೆ ಪಡೆಯಬಹುದು.

ದ್ರಾಕ್ಷಿ ಹಣ್ಣು ಮತ್ತು ಗೋಧಿ ಹಿಟ್ಟಿನ ಫೇಸ್ ಮಾಡಲು, ಎರಡು ಚಮಚ ದ್ರಾಕ್ಷಿ ಹಣ್ಣಿನ ರಸ, ಒಂದು ಚಮಚ ಗೋಧಿ ಹಿಟ್ಟು, ಒಂದು ಚಮಚ ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡಿಕೊಂಡು ಅದನ್ನು ಮುಖದ ಮೇಲೆ ಹಚ್ಚಿ ಸ್ವಲ್ಪ ಹೊತ್ತು ಹಾಗೆ ಒಣಗಲು ಬಿಟ್ಟು ನಂತರ ಮುಖ ಸ್ವಚ್ಛವಾಗಿ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಮುಖ ಮೃದು ಆಗುವುದರ ಜೊತೆಗೆ ಕಾಂತಿ ಹೆಚ್ಚುತ್ತದೆ.

ಸ್ವಲ್ಪ ದ್ರಾಕ್ಷಿಯ ಸಿಪ್ಪೆ ತೆಗೆದು ಕೊಂಡು ಮತ್ತು ಅದಕ್ಕೆ ಒಂದು ಚಮಚ ಮೊಸರು, ನಿಂಬೆರಸ ಹಾಕಿ ಸರಿಯಾಗಿ ಮಿಶ್ರಣ ಮಾಡಿ ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ಸರಿಯಾಗಿ ತೊಳೆಯಿರಿ. ಇದರಿಂದಲೂ ಕಾಂತಿ ಹೆಚ್ಚಾಗುತ್ತದೆ.

ಸ್ವಲ್ಪ ದ್ರಾಕ್ಷಿಯ ಸಿಪ್ಪೆಗೆ ಒಂದು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಬಳಿಕ ತೊಳೆಯಿರಿ. ನಿಯಮಿತವಾಗಿ ಇದನ್ನು ಬಳಸಿಕೊಂಡರೆ ತ್ವಚ್ಛೆ ಸುಂದರವಾಗುತ್ತದೆ.

See also  ಢಾಕಾ: ಬಾಂಗ್ಲಾದೇಶದಲ್ಲಿ ದೋಣಿ ಮುಳುಗಿ 16 ಸಾವು, 30 ಮಂದಿ ನಾಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11034
Gayathri Gowda

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು