News Kannada
Thursday, December 08 2022

ಅಂಕಣ

ಹಾಲಿನ ಕೆನೆಯಲ್ಲಿದೆ ಸೌಂದರ್ಯವರ್ಧಕ ಗುಣ

The cosmetic properties of milk cream
Photo Credit : Freepik

ಮುಖದ ಸೌಂದರ್ಯದ ಬಗ್ಗೆ ಸಾಮಾನ್ಯವಾಗಿ ಎಲ್ಲರು ಗಮನಹರಿಸುತ್ತಾರೆ. ತ್ವಚೆ ಕಲೆ ರಹಿತವಾಗಿರಬೇಕು, ಮುಖ ಹೊಳೆಯುತ್ತಿರಬೇಕು ಎಂದು ಎಲ್ಲರ ಇಚ್ಛೆಯಾಗಿರುತ್ತದೆ. ಅಂತವರು ಹಾಲಿನ ಕೆನೆಯ ಫೇಸ್ ಪ್ಯಾಕ್ ಬಳಕೆ ಮಾಡಿ. ಇದರಲ್ಲಿ ಸೌಂದರ್ಯವರ್ಧಕ ಗುಣ ಒಳಗೊಂಡಿದೆ.

ಹಾಲಿನ ಕೆನೆಯ ಫೇಸ್ ಪ್ಯಾಕ್ ಮಾಡಲು ಹಾಲಿನ ಕೆನೆಗೆ ಶ್ರೀಗಂಧವನ್ನು ಸ್ವಲ್ಪ ಅರಿಶಿನವನ್ನು, ಜೇನುತುಪ್ಪ ಮತ್ತು ಕಡಲೆಹಿಟ್ಟಿನ ಜೊತೆಗೆ ರೋಸ್ ವಾಟರ್ ಅನ್ನು ಒಟ್ಟಿಗೆ ಮಿಶ್ರಣ ಮಾಡಿ ಕುತ್ತಿಗೆಯ ಭಾಗ ಹಾಗೂ ಮುಖದ ಭಾಗದಲ್ಲಿ ಹಚ್ಚಿ, ಸ್ವಲ್ಪ ಹೊತ್ತು ಹಾಗೆಯೇ ಇದ್ದು ನಂತರ ನೀರಿನಿಂದ ಮುಖ ತೊಳೆದುಕೊಂಡರೆ ಉತ್ತಮ ರಿಸಲ್ಟ್ ಪಡೆಯಬಹುದು.

ತ್ವಚೆ ಹೊಳೆಯುವಂತೆ ಮಾಡಲು ಒಂದು ಚಮಚ ಶ್ರೀಗಂಧದ ಪುಡಿಗೆ ಎರಡು ಚಮಚ ಹಾಲಿನ ಕೆನೆ, ಒಂದು ಚಮಚ ಕಡಲೆಹಿಟ್ಟು, ಒಂದು ಚಿಟಿಕೆ ಅರಿಶಿನ ಮತ್ತು ಕೆಲವು ಹನಿ ಗುಲಾಬಿ ನೀರನ್ನು ಸೇರಿಸಿ. ಈ ಪೇಸ್ಟ್ ಅನ್ನು ಮುಖಕ್ಕೆ ಪೂರ್ತಿಯಾಗಿ ಹಚ್ಚಿ ಮಸಾಜ್ ಮಾಡಿ. ನಂತರ 10 ನಿಮಿಷಗಳ ಕಾಲ ಹಾಗೇ ಬಿಟ್ಟು, ನಂತರ ನೀರಿನಲ್ಲಿ ಮುಖ ತೊಳೆಯಿರಿ.

ತ್ವಚೆ ಬೆಳ್ಳಗೆಯಾಗಲು ಒಂದು ಚಮಚ ಜೇನುತುಪ್ಪ, ಒಂದು ಚಮಚ ಹಾಲಿನ ಕೆನೆಯೊಂದಿಗೆ ಚಿಟಿಕೆಯಷ್ಟು ಕೇಸರಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ತೊಳೆಯಬೇಕು ಇದರಿಂದ ಬೆಳ್ಳಗಿನ ತ್ವಚೆ ಪಡೆಯ ಬಹುದು.

ಒಂದು ಚಮಚ ಜೇನುತುಪ್ಪವನ್ನು ಒಂದು ಚಮಚ ಹಾಲಿನ ಕೆನೆಯೊಂದಿಗೆ ಬೆರೆಸಿ ಒಂದು ಚಮಚ ನಿಂಬೆ ರಸವನ್ನು ಕೂಡ ಸೇರಿಸಿ ಮಿಶ್ರಣ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಇದನ್ನು 15 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಬೇಕು ಹೀಗೆ ಮಾಡಿದರೆ ತ್ವಚೆಯ ಮೇಲಿನ ಕಲೆ ಮಾಯವಾಗುತ್ತದೆ.

See also  ಚಾಮರಾಜನಗರ: ಎಂಎಂ ಹಿಲ್ಸ್ ಹುಲಿ ಸಂರಕ್ಷಿತ ಅರಣ್ಯ ಘೋಷಣೆ ಕೈಬಿಡಲು ಆಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11034
Gayathri Gowda

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು