News Kannada
Thursday, February 02 2023

ಅಂಕಣ

ಕಾಂತಿಯುತ ತ್ವಚೆಗಾಗಿ ಬೀಟ್​​ರೂಟ್ ಫೇಸ್ ಪ್ಯಾಕ್

Beetroot face pack for glowing skin
Photo Credit : Freepik

ಬೀಟ್​​ರೂಟ್ ನಲ್ಲಿ ಸೌಂದರ್ಯ ವರ್ಧಕ ಗುಣ ಅಡಗಿದ್ದು, ಇದು ಹಲವಾರು ಮುಖದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ, ಮಾತ್ರವಲ್ಲದೇ ಮುಖದ ಸೌಂದರ್ಯ ಹೆಚ್ಚಿಸಿ ಕೊಳ್ಳಲು, ಟ್ಯಾನ್ ಅನ್ನು ತೆಗೆದುಹಾಕಲು ಸಹಕಾರಿಯಾಗಿದೆ.

ಟ್ಯಾನ್ ನಿಂದ ಮುಕ್ತಿ ಪಡೆಯಲು ಬೀಟ್ರೊಟ್ ಸಹಾಯ ಮಾಡುತ್ತದೆ. ಇದಕ್ಕಾಗಿ, ಒಂದು ಬೌಲ್ ನಲ್ಲಿ 1 ಚಮಚ ಅಕ್ಕಿ ಹಿಟ್ಟು, 1 ಚಮಚ ತೆಂಗಿನ ಎಣ್ಣೆ ಮತ್ತು 2 ಚಮಚ ತುರಿದ ಬೀಟ್ರೂಟ್ ಸೇರಿಸಿ. ಮುಖವನ್ನು ಸ್ವಚ್ಛಗೊಳಿಸಿ ಈ ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ. ನಂತರ ಸ್ವಲ್ಪ ಸಮಯ ಮಸಾಜ್ ಮಾಡಿ ನಂತರ ನೀರಿನಿಂದ ಮುಖವನ್ನು ಸ್ವಚ್ಛ ಮಾಡಿ ಇದರಿಂದ ಟ್ಯಾನ್ ನಿವಾರಣೆಯಾಗುತ್ತದೆ.

ಸುಂದರ ಹಾಗೂ ಯೌವನಯುತ ತ್ವಚೆ ಪಡೆಯಲು ಬೀಟ್ ರೂಟ್ ಮತ್ತು ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್ ಟ್ರೈ ಮಾಡಿ. ಇದನ್ನು ಮಾಡಲು ಎರಡು ಚಮಚ ಬೀಟ್ ರೂಟ್ ರಸ ಮತ್ತು ಅರ್ಧ ಚಮಚ ಅಕ್ಕಿ ಹಿಟ್ಟು ಹಾಕಿ ಮಿಶ್ರಣ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಅದು ಒಣಗಿದ ನಂತರ ನೀರಿನಿಂದ ತೊಳೆಯಿರಿ ಇದರಿಂದ ಉತ್ತಮ ರಿಸಲ್ಟ್ ಪಡೆಯುತ್ತೀರಿ.

ಯೌವನದಲ್ಲಿ ಮೊಡವೆ ಸಮಸ್ಯೆ ಬರುವುದು ಸಾಮಾನ್ಯ ಅಂತವರು ಈ ಬೀಟ್ರೂಟ್ ಮತ್ತು ಮೊಸರು ಫೇಸ್ ಪ್ಯಾಕ್ ಟ್ರೈ ಮಾಡಿ. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ 2 ಚಮಚ ಬೀಟ್ರೂಟ್ ರಸ, 3 ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ, ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಕ್ರಮೇಣ ಮೊಡವೆ ಸಮಸ್ಯೆ ನಿವಾರಣೆ ಆಗುತ್ತದೆ.

ಮೊಡವೆ ನಿವಾರಣೆಗೆ ಬೀಟ್ ರೂಟ್ ಮತ್ತು ರೋಸ್ ವಾಟರ್ ಪ್ಯಾಕ್ ಟ್ರೈ ಮಾಡಿ, ಇದಕ್ಕಾಗಿ ಬೀಟ್ ರೂಟ್ ಅನ್ನು ತುರಿದು ಅದಕ್ಕೆ ಒಂದು ಚಮಚ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ, ಮುಖ ಹಾಗೂ ಕುತ್ತಿಗೆಗೆ ಹಚ್ಚಿ ನಂತರ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

See also  ಫ್ಯಾಷನ್‌ಗೂ ಸೈ ಸಂಪ್ರದಾಯಿಕ ಉಡುಗೆಯಾಗಿಯೂ ಸೈ ಎನಿಸಿಕೊಂಡ ಸೀರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11034
Gayathri Gowda

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು