News Kannada
Monday, February 06 2023

ಪರಿಸರ

ಭತ್ತದ ಬೇಸಾಯ: ಹಳ್ಳಿಗಳಲ್ಲಿನ ಮುಖ್ಯ ಜೀವನೋಪಾಯ

Paddy cultivation: The main livelihood in the villages
Photo Credit : Pixabay

ಅಕ್ಕಿ ನಮ್ಮ ದಕ್ಷಿಣ ಭಾರತದ ಪ್ರಮುಖ ಆಹಾರಗಳಲ್ಲಿ ಮುಖ್ಯವಾದದ್ದು. ಪ್ರತಿದಿನ ಊಟ ಮಾಡದೆ ನಮ್ಮ ದಿನ ಪೂರ್ತಿಯಾಗುವುದಿಲ್ಲ. ಈ ರೀತಿಯ ಆಹಾರ ಅಭ್ಯಾಸಗಳು ನಮ್ಮ ದಿನನಿತ್ಯದ ಜೀವನದ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ದಿನ ನಿತ್ಯದ ಆಹಾರದ ಒಂದು ಭಾಗವೇ ಆಗಿರುವ ಅಕ್ಕಿಯನ್ನು ಬೆಳೆಸುವುದರಿಂದ ಹಿಡಿದು ನಮ್ಮ ತಟ್ಟೆ ಸೇರುವವವರೆಗೂ ಅನೇಕ ವಿಧಾನಗಳಿರುತ್ತವೆ.

ಏಶಿಯನ್ ದೇಶಗಳಾದ ಭಾರತ, ಚೀನಾ, ಜಪಾನ್, ಥೈಲ್ಯಾಂಡ್, ಇಂಡೋನೇಶಿಯಾಗಳಲ್ಲಿ ಭತ್ತವನ್ನು ವ್ಯಾಪಕವಾಗಿ ಬೆಳೆಸಲಾಗುತ್ತದೆ. ಇಡೀ ಪ್ರಪಂಚದಲ್ಲಿ ಚೀನಾವು ಭತ್ತದ ಬೆಳೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ ಭಾತವು ಎರಡನೇ ಸ್ಥಾನದಲ್ಲಿದೆ.

ಭತ್ತದಯ ಬೇಸಾಯವು ತುಂಬಾ ಶ್ರಮವನ್ನು ಕೇಳುವ ಕೆಲಸವಾಗಿದ್ದು, ಉತ್ತಮ ನೀರಾವರಿ ಹೊಂದಿರುವ ಪ್ರದೇಶಗಳಲ್ಲಿ ಮಾತ್ರವೆ ಇವುಗಳನ್ನು ಬೆಳೆಯಲು ಸಾಧ್ಯ. ಇದು ಉಷ್ಣವಯದ ಹವಾಮಾನ ಬೆಳೆಯಾಗಿದ್ದು ಸಮುದ್ರಮಟ್ಟದಿಂದ ೩೦೦ ಮೀಟರ್ ಎತ್ತರದ ವರೆಗೆ ಬೆಳೆಯಬಹುದಾಗಿದೆ. ೬ ಅಡಿ ಎತ್ತರಕ್ಕೆ ಬೆಳೆಯುವ ಈ ಸಸ್ಯಗಳು ಉದ್ದವಾದ ಮತ್ತು ಮೊನಚಾದ ಎಲೆಯನ್ನು ಹೊಂದಿರುತ್ತವೆ. ಹೆಚ್ಚಿನ ತಾಪಮಾನ, ಆರ್ದ್ರತೆ ಹಾಗೂ ನಿರಾವರಿ ಸೌಲಭ್ಯಗಳೊಂದಿಗೆ ಸಾಕಷ್ಟು ಮಳೆಯು ಭತ್ತದ ಕೃಷಿಯ ಮೂಲ ಅವಶ್ಯಕತೆಯಾಗಿದೆ.

ಭತ್ತ ಬೆಳೆಯಲು ಉತ್ತಮ ಕಾಲ

ಭತ್ತವು ವಿವಿಧ ಹವಾಮಾನಗಳಲ್ಲಿ ಬೆಳೆಯುವುದರಿಂದ ಇದನ್ನು ವಿವಿಧ ಋತುಗಳಲ್ಲಿ ಬೆಳೆಸಬಹುದಾಗಿದೆ. ಮೇ ನಿಂದ ನವೆಂಬರ್ ಅವಧಿಯಲ್ಲಿ ದಕ್ಷಿಣ ಮತ್ತು ಪೂರ್ವ ರಾಜ್ಯಗಳಲ್ಲಿ ೨-೩ ಬೆಳೆಗಳನ್ನು ಬೆಳೆಸಲಾಗುತ್ತದೆ.

ಭತ್ತದ ಕೃಷಿಗೆ ಉತ್ತಮ ಮಣ್ಣು ಯಾವುದು?

ಕಪ್ಪು ಮಣ್ಣು, ಕೆಂಪು ಮಣ್ಣು, ಜೇಡಿ ಮಣ್ಣುಗಳು ಸೂಕ್ತವಾಗಿರುತ್ತವೆ.

ಬೀಜದಿಂದ ಹಿಡಿದು ಅದು ಅಕ್ಕಿಯಾಗುವವರೆಗು ಕೆಲವು ವಿಧಾನಗಳು ಇಲ್ಲಿ ಮುಖ್ಯವಾಗುತ್ತದೆ ಅವುಗಳೆಂದರೆ

ಭೂಮಿಯನ್ನು ಹದಗೊಳಿಸುವುದು : ಗದ್ದೆಯಲ್ಲಿ ಬೆಳೆದಂತಹ ಕಳೆಯನ್ನು ಮಣ್ಣಿನಲ್ಲಿ ಸೇರಿಸಲು ಒಂದು ಸುತ್ತಿನ ಟ್ರಾಕ್ಟರ್ ಅನ್ನು ಓಡಿಸಲಾಗುತ್ತದೆ. ಮತ್ತೆ ಒಂದು ವಾರಗಳ ನಂತರ ಮಣ್ಣನ್ನು ಹದಗೊಳಿಸಲು ಟ್ರಾಕ್ಟರ್ ಮೂಲಕ ಮತ್ತೊಮ್ಮೆ ಗದ್ದೆಗಳಲ್ಲಿ ಚಲಾಯಿಸಲಾಗುತ್ತದೆ ಇದರಿಂದ ಮಣ್ಣು ಹದಗೊಳ್ಳುತ್ತದೆ.

ಭತ್ತದ ಸಸಿಗಳ ನಾಟಿ: ಮೊಳಕೆ ಬರಿಸಲು ಭತ್ತದ ಬೀಜಗಳನ್ನು ಸೆಗಣಿ ನೀರಿನಲ್ಲಿ ಚೆನ್ನಾಗಿ ಬೆರೆಸಿ ೨ ದಿನಗಳಕಾಲ ಗೋಣಿಚೀಲದಲ್ಲಿ ಕಟ್ಟಿಟ್ಟು ಮೊಳಕೆ ಬರಿಸಲು ಇಡಬೇಕು. ೨ ದಿನಗಳ ಬಳಿಕ ಬೀಜಗಳು ನಾಟಿ ಮಾಡಲು ಸಿದ್ದವಾಗುತ್ತವೆ. ಬೀಜಗಳನ್ನು ಗದ್ದೆಗಳಲ್ಲಿ ನಾಟಿ ಮಾಡಿದ ನಂತರ ಅದಕ್ಕೆ ಬೇಕಾದಷ್ಟು ನೀರನ್ನು ಒದಗಿಸಬೇಕಾಗುತ್ತದೆ. ನೀರು ಹೆಚ್ಚಾದಲ್ಲಿ ಬೀಜಗಳು ತೇಲುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಕೃಷಿಕರು ತುಂಬಾ ಜಾಗರೂಕರಾಗಿರಬೇಕು.

ಭತ್ತದ ಕಟಾವು : ಇದು ಭತ್ತದ ಕೊನೆಹ ಹಂತ ಇಲ್ಲಿ ಭತ್ತದ ಬೀಜಗಳನ್ನು ನಾಟಿ ಮಾಡಿದ ಸುಮಾರು ೯೦ ದಿನಗಳು (೩ತಿಂಗಳು)ಗಳಲ್ಲಿ ಭತ್ತವು ಕಟಾವಿಗೆ ತಯಾರಾಗುತ್ತದೆ.

ಹಳೆಯ ಕಾಲದಲ್ಲಿ ಮಾನವ ಶಕ್ತಿಯನ್ನು ಬಳಸಿಕೊಂಡು ಭತ್ತದ ಕಟಾವು ಮಾಡಲಾಗುತಿತ್ತು ಆದರೆ ಈಗ ಭತ್ತ ಕೊಯ್ಯಲ್ಲು ಬಹಳಷ್ಟು ಬಗೆಯ ಯಂತ್ರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಲ್ಲಿಂದ ಮುಂದೆ ಭತ್ತವನ್ನು ಅಕ್ಕಿ ಮಾಡುವ ಮಿಲ್ಲಿಗೆ ಒಯ್ದು ಅಲ್ಲಿ ಅಕ್ಕಿಯನ್ನು ತಯಾರಿಸಲಾಗುತ್ತದೆ.

See also  ತ್ವಚೆಯ ಹೊಳಪಿಗಾಗಿ ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

25278

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು