ಸೌಂದರ್ಯದ ಬಗ್ಗೆ ಪ್ರತಿಯೊಬ್ಬ ಯುವತಿಯರು ಯೋಚಿಸುತ್ತಾರೆ. ತ್ವಚೆ ಕಲೆ ರಹಿತವಾಗಿರಬೇಕು, ಮುಖ ಹೊಳೆಯುತ್ತಿರಬೇಕು ಎಂದು ಎಲ್ಲರ ಇಚ್ಛೆಯಾಗಿರುತ್ತದೆ ಇದಕ್ಕಾಗಿ ಅವರು ಹಲವಾರು ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ಅಂತವರು ಈ ಆಯುರ್ವೇದಿಕ್ ವಿಧಾನವನ್ನು ಟ್ರೈ ಮಾಡಿ ನೋಡಿ.
ಕಡಲೆ ಹಿಟ್ಟು, ಕೆಂಪು ಬೇಳೆ, ಅರಶಿನ ಹುಡಿಯನ್ನು ಸ್ವಲ್ಪ ಹಾಲಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ದಪ್ಪ ಪೇಸ್ಟ್ ಆದ ಬಳಿಕ ಇದನ್ನು ದೇಹ ಹಾಗೂ ಮುಖಕ್ಕೆ ಹಚ್ಚಿಕೊಂಡು, ಸುಮಾರು 30-60 ನಿಮಿಷ ಕಾಲ ಹಾಗೆ ಇರಿ. ಇದರ ಬಳಿಕ ನೀವು ಸ್ನಾನ ಮಾಡಿ. ಇದರಿಂದ ತ್ವಚೆಯು ಕಾಂತಿಯುತವಾಗುವುದು.
ಬಿಸಿಲಿಗೆ ಹೊರ ಹೋಗುವ ಮೊದಲು ತೆಂಗಿನ ಎಣ್ಣೆಯನ್ನು ಮೈಗೆ ಹಚ್ಚಿಕೊಳ್ಳಬೇಕು. ಇದರಿಂದ ಚರ್ಮವು ಆರೋಗ್ಯಕರ ಹಾಗೂ ಸುಂದರವಾಗಿ ಇರುವುದು. ಅದರಲ್ಲೂ ಚಳಿಗಾಲದಲ್ಲಿ ಇದು ತುಂಬಾ ನೆರವಾಗುವುದು.
ಅಲೋವೆರಾದ ಗಿಡವಿದ್ದರೆ ಆಗ ನೀವು ಇದರ ಒಂದು ಎಲೆ ತೆಗೆದುಕೊಂಡು, ಅದರ ಲೋಳೆ ತೆಗೆಯಿರಿ. ಇದನ್ನು ಮುಖ ಹಾಗೂ ದೇಹದ ಭಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. ಇದು ನೈಸರ್ಗಿಕ ಮೊಶ್ಚಿರೈಸರ್ ಆಗಿ ಕೆಲಸ ಮಾಡುವುದು. ನೀವು ನಿಯಮಿತವಾಗಿ ಅಲೋವೆರಾ ಹಚ್ಚಿಕೊಂಡರೆ ಆಗ ಚರ್ಮಕ್ಕೆ ವಯಸ್ಸಾಗುವುದು ನಿಧಾನವಾಗುವುದು ಮತ್ತು ಕಾಂತಿಯು ಬರುವುದು.