News Kannada
Sunday, February 05 2023

ಪರಿಸರ

ಸಿರಿ ಧಾನ್ಯಗಳಲ್ಲಿ ಉತ್ತಮ ಏಕದಳ ಧಾನ್ಯ : ರಾಗಿ

Finger millet Plant
Photo Credit : Facebook

ಎಲುಸಿನ್ ಕೊರಕಾನ ಅಥವಾ ಫಿಂಗರ್ ರಾಗಿ ಎಂದು ಕರೆಯಲ್ಪಡುವ ರಾಗಿಯು ಏಕದಳ ಧಾನ್ಯವಾಗಿದ್ದು ಪ್ರಪಂಚದಾದ್ಯಂತ ವ್ಯಾಪಕ ಬೆಳೆಯಲಾಗುತ್ತದೆ.  ಸಿರಿ ಧಾನ್ಯ ಎಂದು ಕರೆಯಲ್ಪಡುವ ರಾಗಿಯು ಮುಖ್ಯವಾಗಿ ಕೃಷಿ ಪ್ರದೇಶಗಳಾದ ಪೂರ್ವ ಮತ್ತು ದಕ್ಷಿಣ ಆಫ್ರೀಕಾದ ಭಾಗಗಳಾದ ಉಗಾಂಡ, ಕೀನ್ಯ, ಕಾಂಗೋ, ಜಿಂಬ್ವಾಬೆ, ಜಾಂಬಿಯ, ತಾಜಾಂನಿಯ, ಮತ್ತು ಭಾರತ ಮತ್ತು ನೇಪಾಳದ ಭಾಗಗಳಲ್ಲಿ ಇದನ್ನು ಬೆಳೆಯಲಾಗುತ್ತದೆ.

ರಾಗಿಯು ವ್ಯವಿಧ್ಯ ಋತು ಮತ್ತು ಮಣ್ಣಿನ ಗುಣಲಕ್ಷಣಗಳನ್ನು ಅವಲಂಬಿಸಿ ಬಿತ್ತನೆಯ ೩-೫ ತಿಂಗಳ ನಂತರ ಬೆಳೆ ಬಲಗೊಳ್ಳುತ್ತದೆ. ಮುಖ್ಯವಾಗಿ ಬೆಳೆಯ ಚಿಗುರಿನ ಮೇಲೆ ೫೦% ದಷ್ಟು ಕಂದು ಬಣ್ಣಕ್ಕೆ ತಿರುಗಿದಾಗ ಬೆಳೆ ಕೊಯ್ಲಿಗೆ ಸಿದ್ದವಾಗುತ್ತದೆ. ಕೊಯ್ಲು ಮಾಡಿದ ತೆನೆಗಳನ್ನು ರಾಶಿ ಮಾಡಿ ತೆನೆಯನ್ನು ಕೋಲಿನಿಂದ ಹೊಡೆಯಲಾಗುತ್ತದೆ ಅಥವಾ ದನಗಳಿಂದ ತುಳಿಸಲಾಗುತ್ತದೆ. ಇನ್ನು ಹಲವೆಡೆ ಕೈ ಒಕ್ಕಣೆ, ಬಿದಿರು ಒಕ್ಕಣೆ, ಯಂತ್ರ ಒಕ್ಕಣೆಯ ಮೂಲಕ ಧಾನ್ಯಗಳಿಂದ ತೆಗೆಯಲಾಗುತ್ತದೆ.

ತಾಪಮಾನ

ರಾಗಿಯ ಉತ್ತಮ ಬೆಳವಣಿಗೆಗಾಗಿ ಹಗಲಿನ ತಾಪಮಾನವು ೩೦ ಡಿಗ್ರಿಯಿಂದ ೩೪ ಡಿಗ್ರಿಯವಗೆರೆ ಇರಬೇಕಾಗುತ್ತದೆ. ಇನ್ನು ರಾತ್ರಿಯ ತಾಪಮಾನ ೨೦ ರಿಂದ ೨೫ ಡಿಗ್ರಿಯಷ್ಟು ಇರಬೇಕಾಗುತ್ತದೆ. ಹಾಗೂ ಮಳೆ ವರ್ಷಕ್ಕೆ ಗರಿಷ್ಠ ಮಟ್ಟದ ಸುಮಾರು ೧೦೦ ಸೆಂ.ಮೀ ಮಳೆ ಬೇಕಾಗುತ್ತದೆ.

ಮಣ್ಣಿನ ಅವಶ್ಯಕತೆ

ಸಿರಿ ಧಾನ್ಯಗಳನ್ನು ಬೆಳೆಯಲು ಉತ್ತಮ ರೀತಿಯ ಮಣ್ಣಿನಿಂದ ಹಿಡಿದು ಸಾವಯವ ವಸ್ತುಗಳನ್ನು ಹೊಂದಿರುವ ತಗ್ಗು ಪ್ರದೇಶಗಳ ವರೆಗಿನ ವಿಶಾಲ ಶ್ರೇಣಿಯ ಮಣ್ಣನ್ನು ಬಳಸಬಹುದು. ಹಾಗೂ ಕೆಂಪು ಮಣ್ಣು, ಮರಳು ಮಿಶ್ರಿತ ಮಣ್ಣು, ಜೇಡಿ ಮಣ್ಣು, ಹಾಗೂ ಕಪ್ಪು ಮಣ್ಣು ಈ ರಾಗಿ ಬೆಳೆಯ ಕೃಷಿಗೆ ಬಹಳ ಸೂಕ್ತವಾಗಿದೆ.

ಉತ್ತಮ ಆಹಾರವಾಗಿ ರಾಗಿ

೧೪ ಕ್ಕು ಹೆಚ್ಚು ಜೀವ ಸತ್ವಗಳು ಮತ್ತು ಖನಿಜಗಳು ಮತ್ತು ವಿಟಮಿನ್ ಎ,ಸಿ,ಡಿ ಕಬ್ಬಿಣ ಮತ್ತು ಸತುಗಳಂತಹ ಪೋಶಕಾಂಶಗಳನ್ನು ಒಳಗೊಂಡಿದೆ. ಇವುಗಳು ಮನುಷ್ಯನ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

See also  ಮಂಡ್ಯ: ಜಿಲ್ಲೆಯ ಎಲ್ಲ ಏಳು ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲುವು ಸಾಧಿಸಲಿದೆ- ಎಚ್.ಡಿ. ಕುಮಾರಸ್ವಾಮಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

25278

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು