ಮೊಸರು ಹಲವಾರು ಸಮಸ್ಯೆಗಳಿಗೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಮೊಸರು ಮುಖದ ಕಾಂತಿ ಹೆಚ್ಚಿಸಲು ಸಹಕಾರಿ ಜೊತೆಗೆ ಕೂದಲಿನ ಹಲವಾರು ಸಮಸ್ಯೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ.
ತಲೆಹೊಟ್ಟು ಸಮಸ್ಯೆ ದೂರವಾಗಿಸಲು ಒಂದು ಬೌಲ್ ಮೊಸರಿಗೆ ಸ್ವಲ್ಪ ನಿಂಬೆ ರಸ ಮತ್ತು ಕೆಲವು ಹನಿ ತೆಂಗಿನ ಎಣ್ಣೆಯನ್ನು ಬೆರೆಸಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ ಅರ್ಧ ಗಂಟೆ ಹಾಗೆ ಬಿಟ್ಟು ನಂತರ ತೊಳೆಯಿರಿ ಇದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.
ಕೂದಲು ಉದ್ದನೆ ಬೆಳೆಯಲು ಸ್ವಲ್ಪ ಮೊಸರು, ತೆಂಗಿನ ಎಣ್ಣೆ ಮತ್ತು ದಾಸವಾಳದ ಎಸಳುಗಳನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಂಡು ಕೂದಲಿಗೆ ಹಚ್ಚಿಕೊಂಡು, ಸ್ವಲ್ಪ ಸಮಯ ಹಾಗೆ ಬಿಟ್ಟು ತೊಳೆಯಬೇಕು ಇದರಿಂದ ಕೂದಲು ಕ್ರಮೇಣ ಉದ್ದ ಬೆಳೆಯುತ್ತದೆ.
ಕೂದಲು ಉದುರುವಿಕೆಯನ್ನು ತಡೆಯಲು ಕರಿಬೇವಿನ ಎಸಳನ್ನು ಜಜ್ಜಿ ಮೊಸರಿನೊಂದಿಗೆ ಮಿಶ್ರಣ ಮಾಡಿ ತಲೆ ಕೂದಲಿಗೆ ಹಚ್ಚಿದರೆ ಕೂದಲು ಉದುರುವ ಸಮಸ್ಯೆ ನಿವಾರಣೆ ಆಗುತ್ತದೆ. ಮೊಸರನ್ನು ಹಾಗೆ ತಲೆಗೆ ಹಚ್ಚುವುದರಿಂದ ಸೀಳು ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.
ಮೊಸರು ಮತ್ತು ಮೊಟ್ಟೆಯ ಹೇರ್ ಪ್ಯಾಕ್ ಕೂದಲಿಗೆ ಹಚ್ಚುವುದರಿಂದ ಕೂದಲು ಬೆಳೆಯುತ್ತದೆ, ಇದಕ್ಕಾಗಿ ಹಸಿ ಮೊಟ್ಟೆಯನ್ನು ಒಡೆದು ಅದಕ್ಕೆ ಮೊಸರನ್ನು ಸೇರಿಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ ನಂತರ ತೊಳೆಯಿರಿ.
ಕೂದಲು ಉದುರುವುದನ್ನು ತಡೆಯಲು ಮೊಸರು, ಜೇನುತುಪ್ಪ ಮತ್ತು ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ. ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗುವುದರ ಜೊತೆಗೆ ಕೊಡಲು ಮೃದು ಆಗುತ್ತದೆ.