News Kannada
Friday, March 31 2023

ಅಂಕಣ

ಕರ್ನಾಟಕ ಐತಿಹಾಸಿಕ ತೀರ್ಥಕ್ಷೇತ್ರ – ಬೆಂಗಳೂರು

Karnataka Historical Pilgrimage - Bangalore
Photo Credit : Wikimedia

ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಮಹಾನಗರವು ಭಾರತದ ಬೃಹನ್ನಗರಗಳಲ್ಲಿ ಜನೆಯ ಸ್ಥಾನದಲ್ಲಿದೆ. ಮತ್ತು ಏಷ್ಯಾ ಖಂಡದಲ್ಲಿಯೇ ಅತಿವೇಗವಾಗಿ ವಿಸ್ತಾರಗೊಳ್ಳುತ್ತಿರುವ ನಗರವಾಗಿದೆ. ತೀರ್ಥಕ್ಷೇತ್ರಗಳಿದ್ದರೂ ನವನಾಗರಿಕತೆಯ ಅಬ್ಬರದ ನಡುವೆ ಅವು ಎದ್ದು ಕಾಣಿಸುವುದೇ ಇಲ್ಲ. ಆಡಳಿತದ ಸೌಕರ್ಯಕ್ಕಾಗಿ ಬೆಂಗಳೂರು ನಗರ ಜಿಲ್ಲೆಯನ್ನು ಉತ್ತರ ತಾಲ್ಲೂಕು, ದಕ್ಷಿಣ ತಾಲ್ಲೂಕು ಮತ್ತು ಆನೇಕಲು ತಾಲ್ಲೂಕು ಎಂದು ವಿಭಾಗಿಸಿದ್ದಾರೆ.

ಗಾಳಿ ಆಂಜನೇಯ ಸ್ವಾಮಿ:
ಉತ್ತರ ತಾಲ್ಲೂಕಿನ ಬೆಂಗಳೂರು –ಮೈಸೂರು ರಸ್ತೆಯಲ್ಲಿರುವ ಋಷಭಾವತಿ ನದಿಯ ಉಗಮ ಸ್ಥಾನದಲ್ಲಿ ಗಾಳಿ ಆ೦ಜನೇಯ ಸ್ವಾಮಿಯ ಕ್ಷೇತ್ರವಿದೆ. ಗಾಳಿಗ್ರಹಗಳ ಬಾಧೆಗೆ ತುತ್ತಾದವರು ಅಲ್ಲಿರುವ ಆಂಜನೇಯ ಸ್ವಾಮಿಯನ್ನು ಆರಾಧಿಸಿ ಸಂಕಟಮುಕ್ತರಾಗುತ್ತಾರೆ.

ಗವಿಗಂಗಾಧರೇಶ್ವರ:
ಗವಿಪುರದಲ್ಲಿರುವ ಗವಿಗಂಗಾಧರೇಶ್ವರ ದೇವಾಲಯವು ನೈಸರ್ಗಿಕವಾದ ಗುಹೆಯೊಂದರಲ್ಲಿ ನಿರ್ಮಾಣ ಗೊಂಡಿರುವ ಪ್ರಾಚೀನ ಕ್ಷೇತ್ರ. ಮಕರ ಸಂಕ್ರಾಂತಿ ಹಬ್ಬದ ಸಂಧ್ಯಾ ಕಾಲಕ್ಕೆ ಸೂರ್ಯನ ಕಿರಣಗಳು ಗವಿಯನ್ನು ಪ್ರವೇಶಿಸಿ ಗರ್ಭ ಗೃಹದ ಲಿಂಗದ ಮೇಲೆ ಬೀಳುವ ವಾಸ್ತುಚಾತುರ್ಯ ಅಚ್ಚರಿ ಗೊಳಿಸುತ್ತದೆ. ದೇವಾಲಯದ ಅಂಗಳದಲ್ಲಿ ೧೫ ಅಡಿ ಎತ್ತರದ ಏಕಶಿಲಾಸ್ಥಂಭದಲ್ಲಿ ತ್ರಿಶೂಲ, ಛತ್ರ, ಡಮರುಗಗಳನ್ನು ಕಡೆದಿರುವ ಶಿಲ್ಪವು ಮನೋಜ್ಞವಾಗಿದೆ.

ಬನ್ನೇರುಘಟ್ಟ:
ಆನೇಕಲ್ಲು ತಾಲ್ಲೂಕಿನ ಬನ್ನೇರುಘಟ್ಟವೆಂಬ ಗ್ರಾಮದ ಬೆಟ್ಟದಲ್ಲಿ ಅರ್ಕಾವತಿಯ ಉಪನದಿಯಾದ ಸುವರ್ಣಾ ವತಿಯು ಹುಟ್ಟುತ್ತದೆ. ಅಲ್ಲಿ ಮಹಾವಿಷ್ಣುವು ಶ್ರೀದೇವಿಭೂದೇವಿ ಯರೊಡಗೂಡಿ ಸಂಪಂಗಿರಾಮಸ್ವಾಮಿ ಅಥವಾ ಚಂಪಕಧಾಮ ಸ್ವಾಮಿ ಎಂಬ ನಾಮದಿಂದ ನೆಲೆಗೊಂಡು, ಅದನ್ನೊಂದು ಪುಣ್ಯ ತೀರ್ಥವಾಗಿಸಿದ್ದಾನೆ. ಅಲ್ಲಿ ಫಾಲ್ಗುಣದಲ್ಲಿ ನಡೆಯುವ ಹೂವಿನ ಪಲ್ಲಕ್ಕಿ ಉತ್ಸವವು ವಿಶೇಷ ಕಾಂತಿಯಿಂದ ಕೂಡಿರುತ್ತದೆ.

ಶಿವಗಂಗೆ:
ಕಕುದ್ದಿರಿ ಎಂಬ ಪುರಾಣನಾಮದ ಶಿವಗಂಗೆಯು ನೆಲಮಂಗಲ ತಾಲ್ಲೂಕಿಗೆ ಸೇರಿದ್ದು, ಅಲ್ಲಿಂದ ೩೦ ಕಿ.ಮೀ.ಗಳ ದೂರದಲ್ಲಿದೆ. ಅದನ್ನು ‘ತೀರ್ಥರಾಜ’ ಎಂದು ಬಣ್ಣಿಸಲಾಗಿದ್ದು, ಅದಕ್ಕೆ ತಕ್ಕಂತೆಯೇ ಇದೆ. ಅಲ್ಲಿರುವ ಬಹಳ ಕಡಿದಾದ, ವಿಶಾಲ ವಾದ ಪರ್ವತಸ್ತೋಮದಲ್ಲಿ ಗಂಗಾಧರೇಶ್ವರ ಮತ್ತು ಹೊನ್ನಾದೇವಿ ಯವರ ಬೇರೆ ಬೇರೆಯೇ ಆದ ಗುಹಾಂತರ ದೇವಾಲಯಗಳಿವೆ. ಗಂಗಾಧರೇಶ್ವರ ಲಿಂಗದ ಮೇಲೆ ತುಪ್ಪವನ್ನು ಸವರಿ ಗೋರಿಕೊಂಡರೆ ಅದು ಬೆಣ್ಣೆಯಾಗಿ ಬಿಡುವ ವೈಚಿತ್ರ್ಯ ಅಲ್ಲಿದೆ. ಹೊನ್ನಾದೇವಿಯು ಕುಳಿತ ಭಂಗಿಯಲ್ಲಿದ್ದು, ಅವಳು ಅಷ್ಟಭುಜೆಯಾಗಿ ರಕ್ತಬೀಜಾಸುರ ನನ್ನು ಸಂಹರಿಸುವ ಉಗ್ರರೂಪಿಣಿಯಾಗಿದ್ದಾಳೆ. ಈ ಸನ್ನಿಧಾನಗಳ ರಥೋತ್ಸವಗಳು ಬೇರೆ ಬೇರೆ ಮಾಸಗಳಲ್ಲಿಯೇ ಜರಗುತ್ತವೆ. ಪರ್ವ ತಾಗ್ರದ ಮೈನವಿರೇಳಿಸುವ ಪ್ರಪಾತದ ಅಂಚಿನಲ್ಲಿ ಬೃಹದಾಕಾರದ ನಂದಿವಿಗ್ರಹವನ್ನು ಸ್ಥಾಪಿಸಿದ್ದಾರೆ. ಸಂತಾನವಿಲ್ಲದ ಸ್ತ್ರೀಯರು ಆ ನಂದಿಯನ್ನು ಪ್ರದಕ್ಷಿಣೆ ಮಾಡಿದರೆ, ಸಂತಾನವತಿಯಾಗುತ್ತಾರೆಂಬ ನಂಬಿಕೆಯಿದೆ. ಸ್ವಚ್ಛವಾದ ಜೀವಜಲದಿಂದ ತುಂಬಿದ ‘ಅಷ್ಟತೀರ್ಥ’ ಗಳೇ ಮೊದಲಾದ ಅನೇಕ ಪುಣ್ಯತೀರ್ಥಗಳಿದ್ದು ಅದು ತೀರ್ಥ ರಾಜನೇ ಆಗಿದೆ.

ಶಿಲ್ಪಕಲಾವೈಭವದಿಂದ ಕೂಡಿದ ವೀರಭದ್ರೇಶ್ವರ, ಚಂಡಿಕೇಶ್ವರ, ಸುಬ್ರಹ್ಮಣ್ಯ ಮುಂತಾದ ಮೂರ್ತಿಗಳು ಅಲ್ಲಿ ಭಕ್ತರನ್ನು ಮೋಹಗೊಳಿಸುತ್ತವೆ. ಬೆಟ್ಟದ ಪಾದದಲ್ಲಿರುವ ಊರಿನೊಳಗೆ ಶಿವಗಂಗಾ ಮಠ ಎಂದೇ ಕರೆಯುವ ಯತಿಪರಂಪರೆಯಿರುವ ಶಂಕರಾಚಾರ್ಯ ಪರಂಪರೆಯ ದೊಡ್ಡದಾದ ಮಠವಿದೆ. ಎರಡು ಗಣ್ಯವಾದ ವೀರಶೈವ ಮಠಗಳೂ ಇವೆ. ಪರ್ವತವೈಭವ, ವಾಸ್ತುವೈಭವ, ತೀರ್ಥವೈಭ ವಾದಿ ಪ್ರಕೃತಿಯ ಅದ್ಭುತ ಲೀಲೆಗಳನ್ನು ಕಣ್ಣಾರೆ ಕಾಣಬೇಕೆಂದರೆ ಶಿವಗಂಗೆಗೆ ಹೋಗಲೇಬೇಕು, ಕಳಲೆ ನಂಜರಾಜ ಕವಿಯು (೧೭೫೦) ‘ಕಕುಬ್ಬರಿ ಪದ್ಯ ಕಾವ್ಯವನ್ನೇ ರಚಿಸಿದ್ದಾನೆ.

See also  ಜ.11ರಂದು ರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಗೃತಿ ದಿನ ಆಚರಣೆ

-ಮಣಿಕಂಠ ತ್ರಿಶಂಕರ್, ಮೈಸೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

34905
ಮಣಿಕಂಠ ತ್ರಿಶಂಕರ್

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು