ಸಾಮಾನ್ಯವಾಗಿ ಯುವತಿಯರು ಕೂದಲಿನ ಸೌಂದರ್ಯ ದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಏಕೆಂದರೆ ಕೂದಲು ಸೌಂದರ್ಯದ ಸಂಕೇತ ಎಂದರೆ ತಪ್ಪಾಗದು. ಆದರೆ ಇಂದು ಯುವತಿಯರಿಗೆ ಕೂದಲಿನ ಸಮಸ್ಯೆ ಅಗಾಧವಾಗಿ ಕಾಡುತ್ತಿದೆ. ಕೂದಲು ಉದುರುವುದು, ಕೂದಲ ತುದಿ ಎರಡು ಭಾಗವಾಗುವುದು ಹೀಗೆ ಹಲವಾರು ಸಮಸ್ಯೆಯನ್ನು ಇಂದಿನ ಯುವ ಪೀಳಿಗೆ ಅನುಭವಿಸುತ್ತಿದೆ. ಇಂತಹ ಸಮಸ್ಯೆಯಿಂದ ದೂರಾಗಿ ಕೂದಲು ಉತ್ತಮ ಹೊಳಪು ಮತ್ತು ಪೋಷಣೆ ಪಡೆದು ಸೊಂಪಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುವಂತೆ ಮಾಡಲು ಇಲ್ಲಿದೆ ಕೆಲವು ಸಲಹೆಗಳು.
ಮೊದಲು ಮೊಟ್ಟೆ ಮತ್ತು ಮೊಸರನ್ನು ಮಿಶ್ರಣ ಮಾಡಿ ಅದಕ್ಕೆ ಕೆಲವು ಹನಿ ಲಿಂಬೆರಸ ಸೇರಿಸಿ ಆಗ ತಯಾರಾದ ಪೇಸ್ಟನ್ನು ತಲೆಗೂದಲಿಗೆ ಹಚ್ಚಿ ಸ್ವಲ್ಪ ಸಮಯ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಂಡರೆ ಉತ್ತಮ ರಿಸಲ್ಟ್ ಪಡೆಯಬಹುದು.
ಎರಡು ಮೊಟ್ಟೆಗಳನ್ನು ಚೆನ್ನಾಗಿ ಕಲಸಿ ಅದಕ್ಕೆ ಒಂದು ಚಮಚ ಹರಳೆಣ್ಣೆ ಸೇರಿಸಿ, ಕೆಲವು ಹನಿ ಜೇನು ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕೂದಲ ಬುಡದಿಂದ ತುದಿಯವರೆಗೂ ಚೆನ್ನಾಗಿ ಹಚ್ಚಿ, ನಂತರ ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.
ಕೂದಲು ಕಾಂತಿಯುತವಾಗಿ ಹೊಡೆಯಲು ಮತ್ತು ಕೂದಲು ಉದುರುವ ಸಮಸ್ಯೆ ನಿವಾರಣೆ ಆಗಲು, ಮೊಟ್ಟೆಯ ಬಿಳಿಭಾಗವನ್ನು ತೈಲದಂತೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ಶಾಂಪೂ ಬಳಸಿ ತೊಳೆದುಕೊಳ್ಳಿ ಇದು ಕೂಡ ಒಳ್ಳೆಯ ರಿಸಲ್ಟ್ ಕೊಡುತ್ತದೆ.
ಗುಂಗುರು ಕೂದಲು ಇರುವ ಯುವತಿಯರು ಈ ಸಲಹೆಯನ್ನು ಫಾಲೋ ಮಾಡಿ, ಮೊಟ್ಟೆಗಳನ್ನು ಒಡೆದು ನೇರವಾಗಿ ತಲೆಗೂದಲಿಗೆ ಹಚ್ಚಿ ಮಸಾಜ್ ಮಾಡಿ ನಂತರ ಒಣಗಲು ಬಿಡಬೇಕು, ನಂತರ ಶಾಂಪೂ ಬಳಸಿಕೊಂಡು ತೊಳೆದರೆ ಕೂದಲು ಬಾಚಲು ಸುಲಭ ಆಗುತ್ತದೆ.
ಇನ್ನು ತಲೆ ಹೊಟ್ಟು ಸಮಸ್ಯೆಯಿಂದ ಪಾರಾಗಲು, ಒಂದು ಮೊಟ್ಟೆಯನ್ನು ಒಡೆದು ಅದಕ್ಕೆ ಲಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡಿ ತಲೆಗೂದಲಿಗೆ ಹಚ್ಚಿ ಬಳಿಕ ತೊಳೆದುಕೊಂಡರೆ ತಲೆಹೊಟ್ಟು ಇಲ್ಲವಾಗುತ್ತದೆ. ಜೊತೆಗೆ ಕೂದಲ ಕಾಂತಿಯೂ ಹೆಚ್ಚಿಸುತ್ತದೆ.