ಯುವತಿಯರು ಸಾಮಾನ್ಯವಾಗಿ ಮುಖದ ಕಾಂತಿ ಕಾಪಾಡಿಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು ಮಾರ್ಕೆಟ್ ಗಳಲ್ಲಿ ಸಿಗುವಂತಹ ಸೌಂದರ್ಯ ವರ್ಧಕಗಳನ್ನು ಬಳಕೆ ಮಾಡುತ್ತಾರೆ. ಅಂತವರಿಗೆ ಇಲ್ಲಿದೆ ಸಿಂಪಲ್ ಬ್ಯೂಟಿ ಟಿಪ್ಸ್ ಗಳು. ತೆಂಗಿನ ಎಣ್ಣೆ ಬಗ್ಗೆ ನಮ್ಮೆಲ್ಲರಿಗೂ ಗೊತ್ತೇ ಇದೆ. ಇದನ್ನು ತಲೆ ಕೂದಲಿಗೆ ಹಚ್ಚುವುದರಿಂದ ಕೊದಲು ಕಾಂತಿ ಪಡೆಯುತ್ತದೆ. ಆದರೆ ಇದು ಕೇವಲ ಕೂದಲಿನ ಕಾಂತಿಗೆ ಸಹಕರಿಸುವುದಲ್ಲದೆ ಸೌಂದರ್ಯ ವರ್ಧಕ ಗುಣ ಕೂಡ ಹೊಂದಿದೆ. ಇದು ಮುಖದ ಹಲವಾರು ಸಮಸ್ಯೆಗಳನ್ನು ದೂರ ಮಾಡಿ ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
ತೆಂಗಿನ ಎಣ್ಣೆಯ ಫೇಸ್ ಸ್ಕ್ರಬ್ ಮಾಡಲು, ಒಂದು ಬೌಲ್ ಅಲ್ಲಿ ಸ್ವಲ್ಪ( ನಿಮಗೆ ಬೇಕಾದಷ್ಟು) ತೆಂಗಿನ ಎಣ್ಣೆ, ಬ್ರೌನ್ ಶುಗರ್ ಮತ್ತು ಕಾಫಿ ಪೌಡರ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ನಂತರ ಒದ್ದೆಯಾದ ಮುಖದ ಮೇಲೆ ಈ ಸ್ಕ್ರಬ್ ಅನ್ನು ಹಚ್ಚಿ ಮಸಾಜ್ ಮಾಡಿ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ ಇದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.
ತೆಂಗಿನ ಎಣ್ಣೆ ಮತ್ತು ಮುಲ್ತಾನಿ ಮಿಟ್ಟಿಯ ಫೇಸ್ ಪ್ಯಾಕ್ ಮಾಡಲು ಒಂದು ಬೌಲ್ ಗೆ ಒಂದುಚಮಚ ಮುಲ್ತಾನಿ ಮಿಟ್ಟಿ ಪುಡಿ, ಎರಡು ಚಮಚ ಕೊಬ್ಬರಿ ಎಣ್ಣೆ ಮತ್ತು ಸ್ವಲ್ಪ ಹಸಿ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿ ನಂತರ ಸ್ವಲ್ಪ ಸಮಯ ಒಣಗಲು ಬಿಟ್ಟು ನಂತರ ನೀರಿನಿಂದ ಮುಖವನ್ನು ತೊಳೆಯಿರಿ.
ತೆಂಗಿನ ಎಣ್ಣೆಯ ಫೇಸ್ ಪ್ಯಾಕ್ ಮಾಡಲು ಮೊದಲಿಗೆ ಒಂದು ಬೌಲ್ ನಲ್ಲಿ, ಒಂದು ಚಮಚ ತೆಂಗಿನ ಎಣ್ಣೆ, ಒಂದು ಚಮಚ ಜೇನುತುಪ್ಪ, ಒಂದು ಟೀಸ್ಪೂನ್ ಅಲೋವೆರಾ ಜೆಲ್ ಗಳನ್ನು ಒಟ್ಟಿಗೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಎಲ್ಲಾ ಭಾಗಗಳಿಗೆ ಹಚ್ಚಿ. ಸ್ವಲ್ಪ ಸಮಯ ಒಣಗಲು ಬಿಡಿ ನಂತರ ನೀರಿನಿಂದ ತೊಳೆಯಿರಿ. ಇದರಿಂದ ಮುಖದ ಚರ್ಮ ಕ್ಲೀನ್ ಆಗಿ ಬಹಳ ಸ್ವಚ್ಛವಾಗಿ ಕಾಣುತ್ತದೆ. ಕಪ್ಪು ಕಲೆಗಳು ದೂರವಾಗುತ್ತವೆ, ಸುಕ್ಕುಗಳು ಕಡಿಮೆಯಾಗುತ್ತವೆ, ಮೊಡವೆಗಳು ದೂರವಾಗುತ್ತವೆ. ಒಣ ತ್ವಚೆಗೆ ಇರುವವರಿಗೆ ಈ ಫೇಸ್ ಪ್ಯಾಕ್ ಹಚ್ಚೋದರಿಂದ ಚರ್ಮ ಮೃದುವಾಗುತ್ತದೆ.
ಒಂದರಿಂದ ಎರಡು ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಒಂದು ಚಮಚ ಜೇನು, ಒಂದು ಚಮಚ ಮೊಸರು ಬಳಸಿ ಕೊಂಡು ಫೇಸ್ ಪ್ಯಾಕ್ ತಯಾರಿಸಲು, ಈ ಮೂರು ಬಗೆಯನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ನಂತರ ಸ್ವಲ್ಪ ಸಮಯದ ಬಿಟ್ಟು ನೀರಿನಿಂದ ತೊಳೆಯಿರಿ ಹೀಗೆ ಮಾಡುವುದರಿಂದ ತ್ವಚೆಯ ಹೊಳಪು ಹೆಚ್ಚುತ್ತದೆ.