ಹೆಣ್ಣು ಸೌಂದರ್ಯ ಪ್ರಿಯೆ, ಆಕೆ ತನ್ನ ಸೌಂದರ್ಯ ವೃದ್ಧಿಗೆ ಹಲವಾರು ಹೊಸ ಹೊಸ ಪ್ರಯೋಗಗಳನ್ನು ಅನುಸರಿಸುತ್ತಾಳೆ. ಇದು ಕೆಲವೊಮ್ಮೆ ಉತ್ತಮ ರಿಸಲ್ಟ್ ಕೊಡಬಹುದು, ಕೆಲವೊಮ್ಮೆ ಸಮಸ್ಯೆಗಳನ್ನು ತಂದೊಡ್ಡುವ ಪರಿಸ್ಥಿತಿಯೂ ನಿರ್ಮಾಣವಾಗಬಹುದು. ಸೌಂದರ್ಯ ಎಂದಾಗ ಯುವತಿಯರು ಕೇಶದ ಬಗ್ಗೆಯೂ ಅತೀವ ಕಾಳಜಿವಹಿಸುತ್ತಾರೆ. ಏಕೆಂದರೆ ಮುಖದ ಅಂದವನ್ನು ಹೆಚ್ಚಿಸುವಲ್ಲಿ ಕೇಶ ವಿನ್ಯಾಸವೂ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಕೂದಲು ಚೆನ್ನಾಗಿದ್ದರೆ ಕೇಶ ವಿನ್ಯಾಸವನ್ನು ಅಚ್ಚುಕಟ್ಟಾಗಿ ಮುಖಕ್ಕೆ ಒಪ್ಪುವಂತಹ ವಿನ್ಯಾಸ ಮಾಡಲು ಸಹಾಯವಾಗುತ್ತದೆ. ಹೀಗೆ ಮಾಡಿದಾಗ ಮುಖ ಅಂದವಾಗಿ ಕಾಣುತ್ತದೆ.
ಕೂದಲು ಉದ್ದ ಮತ್ತು ದಪ್ಪವಾಗಿ ಹೊಳೆಯುವಂತೆ ಮಾಡುವಲ್ಲಿ ತೆಂಗಿನ ಎಣ್ಣೆ ಸಹಕಾರಿಯಾಗಿದೆ. ಇದಕ್ಕಾಗಿ ಕೆಲವೂಂದು ಸಿಂಪಲ್ ಟಿಪ್ಸ್ ಇಲ್ಲಿದೆ, ತೆಂಗಿನ ಎಣ್ಣೆಗೆ ಕೆಲವು ಹನಿ ನಿಂಬೆ ಎಣ್ಣೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಕೂದಲಿನ ಬುಡಕ್ಕೆ ವಾರಕ್ಕೆ ಎರಡು ಅಥವಾ ಮೂರು ಬಾರಿ ಮಸಾಜ್ ಮಾಡಿದರೆ ಕೆಲವೇ ದಿನಗಳಲ್ಲಿ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗಿ ಕೂದಲು ಸಮೃದ್ಧಿಯಾಗಿ ಬೆಳೆಯುತ್ತದೆ.
ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡುವುದರಿಂದ ಕೂದಲ ಬೆಳವಣಿಗೆ ಸಹಾಯವಾಗುತ್ತದೆ ಇದರ ಜೊತೆಗೆ ಉದುರುವ ಪ್ರಮಾಣವು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಕೂದಲಿಗೆ ತೆಂಗಿನ ಎಣ್ಣೆ ಹಚ್ಚಿ ಮಸಾಜ್ ಮಾಡಿ ಐದರಿಂದ ಆರು ಗಂಟೆಗಳ ಕಾಲ ಹಾಗೆಯೇ ಬಿಟ್ಟು ನಂತರ ಚೆನ್ನಾಗಿ ತಲೆ ಕೂದಲನ್ನು ಶಾಂಪೂ ಬಳಸಿ ಸ್ವಚ್ಛ ಮಾಡಿಕೊಳ್ಳಿ ಮರು ದಿನ ಕೂದಲು ಮೃದು ಮತ್ತು ಹೊಳೆಯುತ್ತಿರುತ್ತದೆ. ಹೀಗೆ ವಾರದಲ್ಲಿ ಎರಡು ಅಥವಾ ಮೂರು ಬಾರಿ ಮಾಡಿದರೆ ಉತ್ತಮ.
ಕೂದಲು ಉದುರುವ ಸಮಸ್ಯೆಯಿಂದ ಪಾರಾಗಲು ಈರುಳ್ಳಿಯನ್ನು ಪೇಸ್ಟ್ ಮಾಡಿ ಎರಡು ವಾರಕ್ಕೆ ಒಮ್ಮೆ ಹಚ್ಚಿ ಮಸಾಜ್ ಮಾಡಿ ಹೀಗೆ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.