News Karnataka Kannada
Thursday, April 18 2024
Cricket
ಅಂಕಣ

ಮುಖದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿ ಬಾದಾಮಿ ಫೇಸ್ ಪ್ಯಾಕ್

Almond face pack helps in enhancing the beauty of the face
Photo Credit : Freepik

ಬಾದಮಿ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆಯೂ ಬಾದಾಮಿ ಉಪಕಾರಿ ಜೊತೆಗೆ ಸೌಂದರ್ಯ ವೃದ್ಧಿಗೂ ಸಹಕಾರಿಯಾಗಿದೆ. ಬಾದಾಮಿ ಅಂದ ಹೆಚ್ಚಿಸಲು ಹೇಗೆ ಸಹಕಾರಿ ಎಂದು ತಿಳಿದುಕೊಳ್ಳೋಣ.

ಬಾದಾಮಿಯ ಫೇಸ್ ಪ್ಯಾಕ್ ಮಾಡಲು, ಮೊದಲಿಗೆ ಬಾದಾಮಿಗಳನ್ನು ರಾತ್ರಿ ತಣ್ಣೀರಿನಲ್ಲಿ ನೆನೆಸಿಡಿ, ನಂತರ ಮರುದಿನ ಬೆಳಿಗ್ಗೆ ಈ ಬಾದಾಮಿಗಳನ್ನು ಹಾಲಿನೊಂದಿಗೆ ಮಿಕ್ಸಿಯಲ್ಲಿ ಅರೆದು ಅದಕ್ಕೆ ಲಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಹಾಗೆ ಬಿಟ್ಟು ಚೆನ್ನಾಗಿ ಮುಖವನ್ನು ತೊಳೆದುಕೊಳ್ಳಿ ಹೀಗೆ ಕ್ರಮೇಣ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ಬಾದಾಮಿ ಎಣ್ಣೆ, ಸ್ವಲ್ಪ ಸಕ್ಕರೆ ಹಾಗೂ ಹಸಿ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮುಖ, ಕತ್ತಿಗೆಗೆ ಹಚ್ಚಿ ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ಹೀಗೆ ಮಾಡುವುದರಿಂದ ಚಳಿಗಾಲದಲ್ಲಿಯೂ ತ್ವಚೆ ಕಾಂತಿಯುತವಾಗಿ ಹೊಳೆಯುತ್ತಿರುತ್ತದೆ.

ಬಾದಾಮಿ ಪುಡಿ ಮತ್ತು ಹಸಿ ಹಾಲಿನ ಫೇಸ್ ಪ್ಯಾಕ್ ತಯಾರಿಸಲು ಮೊದಲಿಗೆ, ಬಾದಾಮಿ ಪುಡಿ ಮತ್ತು ಹಾಲು ಇವೆರಡನ್ನು ಮಿಶ್ರಣ ಮಾಡಿ ಗಟ್ಟಿ ಪೇಸ್ಟ್ ತಯಾರಿಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ಮುಖ ಕಾಂತಿಯುತವಾಗಿ ಹೊಳೆಯುವಂತೆ ಮಾಡಲು ಬಾದಾಮಿ, ಅರಿಶಿನ ಮತ್ತು ಕಡಲೆ ಹಿಟ್ಟಿನ ಫೇಸ್ ಪ್ಯಾಕ್ ಮಾಡಿ. ಇದನ್ನು ಮಾಡಲು ಮೊದಲಿಗೆ ಬಾದಾಮಿ ಪುಡಿ, ಕಡಲೆ ಹಿಟ್ಟು ಹಾಗೂ ಅರಿಶಿನ ಪುಡಿ ಇವು ಮೂರು ಬಗೆಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ಪಲ್ಪ ಸಮಯ ಹಾಗೆ ಬಿಡಿ ನಂತರ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು