News Kannada
Sunday, December 10 2023
ವಿಶೇಷ

ಪೇರಳೆ ಹಣ್ಣಿನ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here is some information about guava cultivation
Photo Credit : Pixabay

17ನೇ ಶತಮಾನದಲ್ಲಿ ಪೋರ್ಚುಗೀಸರು ಪೇರಳೆ ಸಸ್ಯಗಳನ್ನು ಭಾರತಕ್ಕೆ ತಂದರು. ನಾವು ಬಾಳೆ ಸಿಟ್ರಸ್ ನಂತಹ ಹಣ್ಣಿನ ಜೊತೆಗೆ ಇದು ಭಾರತದಲ್ಲಿ ನಾಲ್ಕನೇ ಪ್ರಮುಖ ಬೆಳೆಯಾಗಿ ಬೆಳೆಯಿತು. ಈಗ  ಈ ಹಣ್ಣನ್ನು ಭಾರತ ದೇಶದ ಬಿಹಾರ್, ಉತ್ತರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಒರಿಸ್ಸಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ‘ಮಿರ್ಟೇಸಿ’ ಕುಟುಂಬಕ್ಕೆ ಸೇರಿದ ಈ ಪೇರಳೆ ಹಣ್ಣುಗಳು ವಿದೇಶಗಳಲ್ಲಿ ಇದು ಉಷ್ಣವಲಯದ ಅಮೇರಿಕಾದ ಕೆಲವು ಭಾಗಗಳಲ್ಲಿ ಬೆಳೆಯುತ್ತಾರೆ.

ವಿ ಎನ್ ಆರ್ ಪೇರಳೆ ಹಣ್ಣು: ವಿಎನ್ಆರ್ ಪೇರಳೆ ಹಣ್ಣು ಸಂಶೋಧನೆ ಮೂಲಕ ಅಭಿವೃದ್ಧಿಪಡಿಸಿದ್ದ ನವೀನ ಪೇರಳೆ ಹಣ್ಣಿನ ತಳಿಯಾಗಿದೆ. ತೋಟಗಾರಿಕಾ ವಲಯದ ಖಾಸಗಿ ಸಂಶೋಧನಾ ಸಂಸ್ಥೆಯಾದ ವಿಎನ್ಆರ್ ನರ್ಸರಿ ಈ ತಳಿಯನ್ನು ಅಭಿವೃದ್ಧಿಪಡಿಸಿದೆ. ವಿಎನ್ಆರ್ ಭಾರತದಲ್ಲಿ ಅತಿ ದೊಡ್ಡ ಪೇರಳೆ ಹಣ್ಣಿನ ಕೃಷಿಯ ತಳಿಯಾಗಿದೆ.

ಈ ತಳಿಯ ಹಣ್ಣುಗಳು ಗುಲಾಬಿ ಅಥವಾ ಬಿಳಿ ಬಣ್ಣದಿಂದ ಕೂಡಿರುತ್ತದೆ. ಪಿಏನ್ಆರ್ ಪೇರಳೆ ಹಣ್ಣು ಪ್ರಸ್ತುತ ಪ್ರಪಂಚದಾದ್ಯಂತ 30 ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಭಾರತ ಸೇರಿದಂತೆ ಬ್ರೆಜಿಲ್, ದಕ್ಷಿಣ ಆಫ್ರಿಕಾ, ಜಮೈಕಾ, ಈಜಿಪ್ಟ್, ಥೈಲ್ಯಾಂಡ್ದೇಶಗಳಲ್ಲಿ ಈ ವಿಎನ್ಆರ್ ಪೇರಳೆಗಳನ್ನು ಬೆಳೆಸುತ್ತಾರೆ.

ಮಣ್ಣಿನ ಅವಶ್ಯಕತೆ: ಈ ಪೇರಳೆ ಹಣ್ಣುಗಳನ್ನು ಆಳವಿಲ್ಲದ ಮಧ್ಯಮ ಕಪ್ಪು ಮತ್ತು ಕ್ಷಾರೀಯ ಮಣ್ಣು ಸೇರಿದಂತೆ ವಿವಿಧ ಮಣ್ಣುಗಳಲ್ಲಿ ಬೆಳೆಯಬಹುದಾದ ಗಟ್ಟಿಯಾದ ಸಸ್ಯವಾಗಿದೆ. ಅದಾಗಿಯೂ ಇದು ಕನಿಷ್ಠ 0.5 ರಿಂದ 1ಮೀ ಆಳದೊಳಗೆ ಚೆನ್ನಾಗಿ ಬರೆದು ಹೋದ ಮಣ್ಣಿನಲ್ಲಿ ಯಶಸ್ವಿಯಾಗಿ ಬೆಳೆಯುವ ಬೆಳೆಯಾಗಿದೆ.

ಹವಾಮಾನದ ಅಗತ್ಯತೆ: ಪೇರಳೆ ಗಿಡಗಳೆಲ್ಲ ಉಷ್ಣವಲಯದ ಮತ್ತು ಉಪೋಷ್ಟ್ನವಲಯ  ಪ್ರದೇಶಗಳಲ್ಲಿ ಬೆಳೆಯಬಹುದು. ಹಾಗೂ ಇದು ಬೇಸಿಗೆ ಸಮಯದಲ್ಲಿ ಹೆಚ್ಚಿನ ತಾಪಮಾನ ಮತ್ತು ಬರ ಪರಿಸ್ಥಿತಿಗಳನ್ನು ಸಹಿಸಿಕೊಳ್ಳುತ್ತದೆ. ಈ ಪೇರಳೆ ಗಿಡಗಳಿಗೆ ವಾರ್ಷಿಕ ಮಳೆ ಸುಮಾರು 100 ಸೆಂಟಿಮೀಟರ್ ಸಾಕಾಗುತ್ತಿದೆ. ಕೊಯ್ಲು ಸಮಯದಲ್ಲಿ ಮಾತ್ರ ಮಳೆಯೂ ಹಣ್ಣುಗಳ ಗುಣಮಟ್ಟವನ್ನು ಹದಗೆಡಿಸುತ್ತಿದೆ.

ನೀರಾವರಿ ಅವಶ್ಯಕತೆ: ಪೇರಳೆ ಬಹುಪಾಲು ಮಳೆಯ ಮಳೆಯಾಶ್ರಿತ  ಪರಿಸ್ಥಿತಿಯಲ್ಲಿ ಬೆಳೆಯಲಾಗುತ್ತದೆ. ಚಳಿಗಾಲದಲ್ಲಿ 20 ರಿಂದ 25 ದಿನಗಳವರೆಗೆ ನೀರಾವರಿ ಒದಗಿಸಲಾಗುತ್ತದೆ ರಿಂಗ್ ವಿಧಾನವು ಬೇಸಿಗೆ ತಿಂಗಳುಗಳಲ್ಲಿ 10 ರಿಂದ 15 ದಿನಗಳ ವರೆಗೆ ಇರುತ್ತದೆ. ಹನಿ ನೀರಾವರಿ ಬೆಳಕಿಯು ಪೇರಳೆ ಹಣ್ಣಿನ ಗಿಡಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ.

ಪೇರಳೆ ಹಣ್ಣಿನ ಗಿಡಗಳಿಗೆ ಹನಿ ನೀರಾವರಿ ಬಳಸುವುದರಿಂದ ಶೇಕಡ 60ರಷ್ಟು ನೀರಿನ ಉಳಿತಾಯವಾಗುತ್ತದೆ ಇದರ ಜೊತೆಗೆ ಹಣ್ಣುಗಳ ಗಾತ್ರ ಮತ್ತು ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ. ಗಿಡಗಳಿಗೆ ಬೆಳವಣಿಗೆಯ ಸಮಯದಲ್ಲಿ ನಿಯಮಿತವಾಗಿ ನೀರು ಹಾಕುವುದು ಮತ್ತು ಚಳಿಗಾಲದಲ್ಲಿ ನೀರು ಹಾಕುವುದನ್ನು ಕಡಿಮೆ ಮಾಡಬೇಕಾಗುತ್ತದೆ.

See also  ಹಿಂದೂ ಸಂಪ್ರದಾಯದಲ್ಲಿ ಸಿಂಧೂರ ಸುಮಂಗಲಿಯರ ಸಂಕೇತ

ಪೇರಳೆ ಹಣ್ಣಿನ ಆರೋಗ್ಯ ಪ್ರಯೋಜನಗಳು :ಪೇರಳೆ ಹಣ್ಣು ಅಧಿಕ ಪೋಷಕಾಂಶ ಔಷಧೀಯ ಗುಣಗಳನ್ನು ಹೊಂದಿರುವ ಹಣ್ಣಾಗಿದೆ.

# ಸೀಬೆಹಣ್ಣು ಹಲ್ಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ
# ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು
# ತೂಕ ಇಳಿಸಲು ಸಹಕಾರಿ
# ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ
# ಬೆವರಿನ ಸಮಸ್ಯೆಯನ್ನು ನಿವಾರಿಸುತ್ತದೆ
# ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ
# ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ
# ಕಾಮಾಲೆಗೆ ಅತ್ಯಂತ ಪರಿಣಾಮಕಾರಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು