News Karnataka Kannada
Thursday, March 28 2024
Cricket
ವಿಶೇಷ

ಅವಕಾಡೋ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here's some information about the avocado crop
Photo Credit : Pixabay

ಅವಕಾಡೋ ಅಥವಾ ಬಟರ್ ಫ್ರೂಟ್ ಎಂದು ಕರೆಯಲ್ಪಡುವ ಈ ಹಣ್ಣು ಮೂಲತಹ ಮಧ್ಯ ಅಮೇರಿಕಾ ಹಾಗೂ ಮೆಕ್ಸಿಕೋ ದಲ್ಲಿ ಹುಟ್ಟಿದ ಹಣ್ಣು ಇದಾಗಿದೆ. ಹಣ್ಣಿನ ಒಳ ಭಾಗವು ಬೆಣ್ಣೆಯಂತಿದ್ದು ಇದಕ್ಕಾಗಿ ಇದನ್ನು ಬೆಣ್ಣೆ ಹಣ್ಣು ಎಂದು ಕರೆಯಲಾಗಿದೆ.

ಇತರ ಹಣ್ಣುಗಳಿಗೆ ಹೋಲಿಸಿದರೆ ಈ ಹಣ್ಣುಗಳು ಉತ್ತಮ ಪೋಶಕಾಂಶದ ಮೂಲವಾಗಿದೆ. ಈ ಹಣ್ಣುಗಳನ್ನು ಮುಖ್ಯವಾಗಿ ತಾಜಾ ಹಣ್ಣುಗಳಾಗಿ ಬಳಸಲಾಗುತ್ತದೆ.ಅವುಗಳನ್ನು ಸಲಾಡ್, ಸ್ಯಾಂಡವಿಚ್ ಫಿಲ್ಲಿಂಗ್ ಗಳಲ್ಲಿ ಹಾಗೂ ಸ್ಮೂತಿಗಳಾಗಿ ಬಳಸಲಾಗುತ್ತದೆ.

ಉತ್ಪಾದನಾ ರಾಜ್ಯಗಳು: ಭಾರತದಲ್ಲಿ ಅವಕಾಡೊ ಕೃಷಿ ಉತ್ತಮವಾಗಿ ಬೆಳೆಯುತ್ತಿದೆ.ಇದು ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದು ತಮಿಳುನಾಡು, ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ವಾಣಿಜ್ಯ ಕೃಷಿಯಾಗಿ ನಡೆಯುತ್ತಿದೆ.

ಹವಾಮಾನ: ಅವಕಾಡೋ ಹಣ್ಣನ್ನು ಉಷ್ಣವಲಯ ಮತ್ತು ಅರೆಉಷ್ಣವಲಯ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಈ ಸಸ್ಯಗಳು ಬಿಸಿ ಒಣಗಾಳಿ ಮತ್ತು ಹಿಮವನ್ನು ಸಹಿಸುವುದಿಲ್ಲ.

ಮಣ್ಣಿನ ಅವಶ್ಯಕತೆ: ಈ ಹಣ್ಣುಗಳು ಕಳಪೆ ಬರಿದಾದ ಮಣ್ಣುಗಳನ್ನು ಹೊರತು ಪಡಿಸಿ ವಿವಿಧ ರೀತಿಯ ಮಣ್ಣಿನಲ್ಲಿ ಬೆಳೆಯುತ್ತದೆ. ಲವಣಯುಕ್ತ ಮಣ್ಣನ್ನು ತಪ್ಪಿಸುವುದು ಬಹಳ ಮುಖ್ಯ ಯಾಕೆಂದರೆ ಈ ಸಸ್ಯಗಳು ಲವಣಯುಕ್ತ ಪರಿಸ್ಥಿತಿಗಳನ್ನು ಸಹಿಸುವುದಿಲ್ಲ. ಅವಕಾಡೋ ಕೃಷಿಗೆ ಭೂಮಿಯನ್ನು ಒಂದೆರಡು ಬಾರಿ ಉಳುಮೆ ಮಾಡಿ ಕಳೆ ಮುಕ್ತವಾಗಿಸುವುದು ಉತ್ತಮ.

ನೀರಾವರಿ: ಅವಕಾಡೋ ಹಣ್ಣಿನ ಕೃಷಿಯಲ್ಲಿ ಕಸಿ ಮಾಡಿದ ತಕ್ಷಣ ನೀರಾವರಿ ಮಾಡಬೇಕು. ಭಾರಿ ಮಳೆ ಅಥವಾ ಪ್ರವಾಹದ ಸಂದರ್ಭದಲ್ಲಿ ನೀರು ಹೆಚ್ಚಾಗಿರುವುದರಿಂದ ನೀರನ್ನು ಹೊರಹಾಕಬೇಕಾಗುತ್ತದೆ.

ಕೊಯ್ಲು: ನಾಟಿ ಮಾಡಿ 5 ರಿಂದ 6 ವರ್ಷಗಳಲ್ಲಿ ಹಣ್ಣು ಕೊಯ್ಲಿಗೆ ಸಿದ್ದವಾಗುತ್ತದೆ. ಈ ಹಣ್ಣುಗಳು ಗಾಢ ಕಂದು ಬಣ್ಣಕ್ಕೆ ಬದಲಾಯಿಸಿದಾಗ ಅವುಗಳು ಕೊಯ್ಲಿಗೆ ಸಿದ್ದವಾಗಿದೆ ಎಂದರ್ಥ. ಸಾಮಾನ್ಯವಾಗಿ ಈ ಅವಕಾಡೋಗಳು ಹಣ್ಣಾಗಲು 5ರಿಂದ10 ದಿನಗಳು ಬೇಕಾಗುತ್ತದೆ.

ಆರೋಗ್ಯ ಲಾಭಗಳು:
• ಅವಕಾಡೋ ಹೃದಯಕ್ಕೆ ಆರೋಗ್ಯಕರ
• ಕ್ಯಾನ್ಸರ್ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ
• ಖಿನ್ನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ
• ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ
• ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತದೆ
• ಅವಕಾಡೋ ಗರ್ಭಿಣಿಯರ ಆರೋಗ್ಯಕ್ಕೆ ಉತ್ತಮ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು