News Kannada
Monday, December 11 2023
ವಿಶೇಷ

ಮೂಲಂಗಿ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here's some information about the radish crop
Photo Credit : Pixabay

ಮೂಲಂಗಿ ಉಷ್ಣವಲಯ ಮತ್ತು ಸಮಶೀತೋಷ್ಣವಲಯ ಪ್ರದೇಶಗಳಲ್ಲಿ ಜನಪ್ರಿಯವಾದ ತರಕಾರಿಯಾಗಿದೆ. ಶೀಘ್ರವಾಗಿ ಬೆಳೆಯುವ ತರಕಾರಿ ಆದ್ದರಿಂದ ಮೂಲಂಗಿಯನ್ನ ಅಂತರ ಬೆಳೆಯಾಗಿಯೂ ಬೆಳೆಯಬಹುದು. ಮೂಲಂಗಿ ಮೂಲತಹ ಚೀನಾದ ಬೆಳೆಯಾಗಿದ್ದು ಪ್ರಾಚೀನ ಕಾಲದಲ್ಲಿ ಈಜಿಪ್ಟ್ ಮತ್ತು ಗ್ರೀಕ್ ನಲ್ಲಿ ಜನಪ್ರಿಯವಾಗಿತ್ತು. ಹಾಗೂ ಪ್ರಾಚೀನ ಕಾಲದಲ್ಲಿ ಭಾರತದಲ್ಲಿಯೂ ಸಹ ಇದನ್ನು ಬೆಳೆಸಲು ಪ್ರಾರಂಭಿಸಿದ್ದರು. ಹೀಗಾಗಿ ಇದು ಭಾರತದಲ್ಲಿ ಈಗ  ಅತ್ಯಂತ ಪ್ರಮುಖ ತರಕಾರಿಯಾಗಿ ಬೆಳೆಯಲಾಗುತ್ತದೆ.

ಮೂಲಂಗಿಯ ಸಸ್ಯಶಾಸ್ತ್ರೀಯ ಹೆಸರು ‘ರಾಫನಸ್ ಸ್ಯಾಟಿವಸ್’. ಹೆಚ್ಚಿನ ಸಂಖ್ಯೆಯ ಸ್ಥಳೀಯ ಮತ್ತು ಇತರ ಪ್ರಭೇದಗಳನ್ನು ಭಾರತದಲ್ಲಿ ಬೆಳೆಸಲಾಗುತ್ತದೆ.

ಮೂಲಂಗಿ ಬೆಳೆಯಲು ಬೇಕಾದ ಹವಾಮಾನ ಪರಿಸ್ಥಿತಿ: ಸಾಮಾನ್ಯವಾಗಿ ಮೂಲಂಗಿಯು ತಂಪಾದರು ಟ್ವಿನ್ ಬೆಳೆಯಾಗಿದೆ ಆದರೆ ಏಷ್ಯಾ ಟಿಕ್ ಪ್ರಭೇದಗಳು ಯುರೋಪಿಯನ್ ಅಥವಾ ಸಮಶೀತೋಷ್ಣ ಪ್ರಭೇದಗಳಿಗಿಂತ ಹೆಚ್ಚು ಶಾಖವನ್ನು ತಡೆದುಕೊಳ್ಳಬಲ್ಲವು. ಇದು 10 ಡಿಗ್ರಿ ಸೆಲ್ಸಿಯಸ್ ನಿಂದ 15 ಡಿಗ್ರಿ ಸೆಲ್ಸಿಯಸ್ ನಲ್ಲಿ ಅತ್ಯುತ್ತಮ ವಿನ್ಯಾಸ ಮತ್ತು ಗಾತ್ರವನ್ನು ಪಡೆಯುತ್ತದೆ. ಹೆಚ್ಚಿನ ಬಿಸಿ ತಾಪಮಾನದಲ್ಲಿ ಮೂಲಂಗಿ ಹೆಚ್ಚಾಗಿ ಕಟುವಾಗಿರುತ್ತದೆ. ಹಾಗೂ ತಂಪಾದ ವಾತಾವರಣದಲ್ಲಿ ಮೂಲಂಗಿ ಚೆನ್ನಾಗಿ ಬೆಳೆಯುತ್ತದೆ.

ಸೂಕ್ತವಾದ ಮಣ್ಣಿನ ಅವಶ್ಯಕತೆ: ಯಾವುದೇ ರೀತಿಯ ಚೆನ್ನಾಗಿ ಬರಿದಾದ ಮತ್ತು ಸಡಿಲವಾದ ಮಣ್ಣಿನಲ್ಲಿ ಮೂಲಂಗಿ ಬೆಳೆಯುತ್ತದೆ. ಸಾವಯವ ಪದಾರ್ಥಗಳಿಂದ ಸಮೃದ್ಧಗೊಳಿಸಲು ಹೊಲದ ಗೊಬ್ಬರ ಅಥವಾ ಮಿಶ್ರಗೊಬ್ಬರವನ್ನು ಸೇರಿಸುವ ಮೂಲಕ ಉತ್ತಮ ಮೂಲಂಗಿ ಬೆಳೆಯನ್ನು ಬೆಳೆಸಬಹುದು.

ಮೂಲಂಗಿ ಬೆಳೆಯಲು ನೀರಿನ ಅವಶ್ಯಕತೆ: ಮಣ್ಣನ್ನು ದೇವವಾಗಿಡಲು ಮೂಲಂಗಿ ಸಸ್ಯಗಳಿಗೆ ನಿಯಮಿತವಾಗಿ ನೀರು ಹಾಕುವುದು ಅತ್ಯಗತ್ಯ ಮೊದಲ ನಾಲ್ಕರಿಂದ ಐದು ದಿನಗಳವರೆಗೆ ಪ್ರತಿದಿನ ನೀರಾವರಿ ಮಾಡಬೇಕು ನಂತರ ಪ್ರತಿ ಮೂರರಿಂದ ನಾಲ್ಕು ದಿನಗಳಿಗೊಮ್ಮೆ ಮಳೆ ಆಧಾರದ ಮೇಲೆ ಒಣ ಮಣ್ಣಿನ ಪರಿಸ್ಥಿತಿಗಳಲ್ಲಿ ನೀರು ಹಾಕಬೇಕು. ಆದರೆ ಹೆಚ್ಚು ನೀರು ಹಾಕುವುದು ಕೂಡ ಒಳ್ಳೆಯದಲ್ಲ ಇದರಿಂದ ಬೇರು ಕೊಳೆಯುತ್ತದೆ ಮತ್ತು ವಿಭಜನೆಯಾಗಲು ಪ್ರಾರಂಭವಾಗುತ್ತದೆ. ಋತುಮಾನ ಮತ್ತು ಮಣ್ಣಿನ ತೇವಾಂಶದ ಲಭ್ಯತೆಯನ್ನು ಅವಲಂಬಿಸಿ ಮೂಲಂಗಿ ಗೆ ನೀರಾವರಿ ಮಾಡಬಹುದು. ಮೂಲಂಗಿಗಳನ್ನು ನೆಟ್ಟ ನಂತರ ಮೊದಲ ಕೊಯ್ಲು ಪಡೆಯಲು ನಾಲ್ಕರಿಂದ ಐದು ವಾರಗಳನ್ನು ತೆಗೆದುಕೊಳ್ಳುತ್ತದೆ.

ಮೂಲಂಗಿಗಳನ್ನು ಸಾಮಾನ್ಯವಾಗಿ ಮನೆಯ ಹಿತ್ತಲಿನಲ್ಲಿಯೂ ಸಹ ನೆಡಬಹುದು. ಜೊತೆಗೆ ಮಡಿಕೆಗಳಲ್ಲಿ ಅಥವಾ ಪಾತ್ರೆಗಳಲ್ಲಿ ಬಳಸಬಹುದು ಟೆರೆಸ್ ಗಾರ್ಡನಿಂಗ್ ಅಥವಾ ಬಾಲ್ಕನಿಗಳಲ್ಲಿಯೂ ಇವುಗಳನ್ನು ಸುಲಭವಾಗಿ ಬಳಸಬಹುದು.

ಮೂಲಂಗಿ ಆರೋಗ್ಯ ಪ್ರಯೋಜನಗಳು: ಮೂಲಂಗಿಯಲ್ಲಿ ವಿಟಮಿನ್ ಸಿ ಫಾಸ್ಫರಸ್ ಸತ್ತು ಮತ್ತು ವಿಟಮಿನ್ ಬಿ ಯಂತಹ ಕೆಲವು ಖನಿಜಾಂಶಗಳಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

# ಕಾಮಾಲೆ ಚಿಕಿತ್ಸೆಗೆ ಉತ್ತಮ

# ಮೂಲಂಗಿ ಮಲಬದ್ಧತೆಯನ್ನು ನಿವಾರಿಸುತ್ತದೆ

# ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

# ಮೂತ್ರಕೋಶ ಮತ್ತು ಮೂತ್ರಪಿಂಡವನ್ನು ಶುಚಿಕರಿಸಲು ಸಹಾಯ ಮಾಡುತ್ತದೆ

See also  ಅಂಜೂರ ಹಣ್ಣಿನ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

# ಮೂಲಂಗಿ ತೂಕ ಇಳಿಸಲು ಸಹಕಾರಿ

# ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು