ಸೌಂದರ್ಯದ ಬಗ್ಗೆ ಸಾಮಾನ್ಯವಾಗಿ ಎಲ್ಲಾ ಯುವತಿಯರಿಗೂ ಕಾಳಜಿ ಇದ್ದೇ ಇರುತ್ತದೆ. ಸಣ್ಣ ವಯಸ್ಸಿನಲ್ಲಿ ಮುಖದ ಸೌಂದರ್ಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಆದರೆ ದಿನಕಳೆದಂತೆ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಅದರಲ್ಲೂ ಯೌವನದಲ್ಲಿ ಮುಖದ ಮೇಲೆ ಮೊಡವೆಗಳು, ಬ್ಲಾಕ್ಹೆಡ್ ಸಮಸ್ಯೆ ಮತ್ತು ಕಪ್ಪು ಕಲೆಗಳು ಇನ್ನಿತರ ತೊಂದರೆಗಳು ಕಂಡು ಬರಲು ಆರಂಭವಾಗಿ, ಮುಖದ ಸೌಂದರ್ಯ ಹಾಳಾಗುವುದು ಮಾತ್ರವಲ್ಲದೆ ಚರ್ಮದ ಕಾಂತಿಯು ಕಳೆದುಕೊಳ್ಳುತ್ತಾ ಬರುತ್ತದೆ. ಆದ್ದರಿಂದ ಇಂದು ನಾವು ಇಂತಹ ಸಮಸ್ಯೆಯಿಂದ ಹೇಗೆ ಪಾರಾಗಬಹುದು ಎಂದು ತಿಳಿದುಕೊಳ್ಳೋಣ. ಹಲಸಿನ ಹಣ್ಣಿನ ಬಗ್ಗೆ ನಮಗೆಲ್ಲರಿಗೂ ಗೊತ್ತೇ ಇದೆ. ಇದು ತನ್ನೊಳಗೆ ಸೌಂದರ್ಯ ವರ್ಧಕ ಗುಣಗಳನ್ನು ಹೊಂದಿದೆ. ಇದರ ಫೇಸ್ ಪ್ಯಾಕ್ ತಯಾರಿಸಲು ಮೊದಲಿಗೆ ಹಲಸಿನ ಹಣ್ಣಿನ ಸೊಸೆಯನ್ನು ಗ್ರೈನ್ ಮಾಡಿಕೊಂಡು ಈಗ ತಯಾರಾದ ಪೇಸ್ಟ್ ಅನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿದರೆ ಮೊಡವೆ ಸಮಸ್ಯೆ ಸುಧಾರಿಸುತ್ತದೆ.
ಇನ್ನು ಮುಖದ ಮೇಲಿನ ಕಪ್ಪು ಕಲೆಗಳು ಕಡಿಮೆಯಾಗಲು ಹಲಸಿನ ಹಣ್ಣು ಮತ್ತು ಅದರ ಬೀಜವನ್ನು ಚೆನ್ನಾಗಿ ಗ್ರೈನ್ ಮಾಡಿ ನಂತರ ತಯಾರಾದ ಪೇಸ್ಟ್ ಅನ್ನು ಕಲೆಗಳ ಮೇಲೆ ಹಚ್ಚಿ. ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಶುದ್ಧ ನೀರಿನಿಂದ ಮುಖವನ್ನು ಸ್ವಚ್ಛ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.
ಚರ್ಮ ಮೃದುವಾಗಿ ಹೊಳೆಯುವಂತೆ ಕಾಣಲು ಹಲಸಿನ ಹಣ್ಣನ್ನು ಹಾಲಿನಲ್ಲಿ ಅರೆದು, ಹಾಲಿನ ಕೆನೆಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ಪಲ್ಪ ಸಮಯ ಹಾಗೆ ಬಿಟ್ಟು ನಂತರ ಚೆನ್ನಾಗಿ ತೊಳೆದುಕೊಳ್ಳಿ.
ಮುಖದ ಕಾಂತಿ ಹೆಚ್ಚಿಸಲು ಜೇನು ತುಪ್ಪ ಮತ್ತು ಹಾಲಿನಲ್ಲಿ ಹಲಸಿನ ಹಣ್ಣಿನ ಬೀಜ ನೆನೆ ಹಾಕಿ ನಂತರ ಅದನ್ನು ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ತೊಳೆದು ಕೊಳ್ಳಿ.
ಚರ್ಮದ ಮೇಲೆ ಸುಕ್ಕುಗಳು ಕಡಿಮೆಯಾಗಲು ಮೊದಲಿಗೆ. ಹಲಸಿನ ಹಣ್ಣಿನ ಬೀಜಗಳನ್ನು ರುಬ್ಬಿ ಅದಕ್ಕೆ ಹಾಲು ಮಿಶ್ರಣ ಮಾಡಿ ಹಚ್ಚೋದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.