News Kannada
Wednesday, February 21 2024
ಅಂಕಣ

ವ್ಯಾಕ್ಸಿಂಗ್ ಮಾಡಿಸುವ ಮೊದಲು ಈ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ

Know about these things before waxing
Photo Credit : Freepik

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪಾರ್ಲರ್ ಗಳಿಗೆ ಹೋಗಿ ವ್ಯಾಕ್ಸಿಂಗ್ ಮಾಡಿಸುವುದು ಸರ್ವೇಸಾಮಾನ್ಯ ಆಗಿ ಬಿಟ್ಟಿದೆ. ಮಹಿಳೆಯರು ತಮ್ಮ ಕೈ, ಕಾಲುಗಳು ಹಾಗೂ ಕಂಕುಳಲ್ಲಿನ ಕೂದಲು ತೆಗೆಯಲು ಪಾರ್ಲರ್ ಗೆ ಭೇಟಿ ನೀಡುತ್ತಾ ಇರುತ್ತಾರೆ. ಆದರೆ ಈ ವ್ಯಾಕ್ಸಿಂಗ್ ಮಾಡಿಸುವುದು ಸುಲಭ ಅಲ್ಲ ಅಷ್ಟೇ ನೋವು ತಿನ್ನಬೇಕಾಗುತ್ತದೆ. ಆದ್ದರಿಂದ ಬಹುತೇಕ ಮಂದಿ ಈ ನೋವಿನಿಂದ ಪಾರಾಗಲು ಶೇವಿಂಗ್ ಸೆಟ್‌ನಲ್ಲಿ ಕೂದಲನ್ನು ತೆಗೆಯುತ್ತಾರೆ. ನೋವೂ ಆಗುವುದಿಲ್ಲ, ಖರ್ಚೂ ಕಡಿಮೆ. ಹಾಗಾಗಿ ರೇಜರ್ ವ್ಯಾಕ್ಸಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ.

ವ್ಯಾಕ್ಸಿಂಗ್ ಮಾಡಿಸಿಕೊಳ್ಳಬೇಕಾದರೆ ಕೂದಲು ಬೆಳೆಯುವವರೆಗೆ ಕಾಯಬೇಕು. ಆದರೆ ಶೇವಿಂಗ್‌ಗೆ ಸ್ವಲ್ಪ ಕೂದಲು ಕಂಡರೂ ಸಾಕು ಅದನ್ನು ಶೇವ್ ಮಾಡಬಹುದು. ಅದೇ ವ್ಯಾಕ್ಸಿಂಗ್ ಮಾಡಿಸಿಕೊಳ್ಳಲು ಕೂದಲು ಕಾಲು ಇಂಚಾದ ಬೆಳೆದಿರಬೇಕಾಗುತ್ತದೆ.

ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ, ಅಂತಹವರು ವ್ಯಾಕ್ಸಿಂಗ್ ಮಾಡುವುದರಿಂದ ಕೆಲವೊಮ್ಮೆ ಚರ್ಮ ಕಿತ್ತು ಬರುತ್ತದೆ. ಕೆಲವೊಮ್ಮೆ ರ್ಯಾಶಸ್ ಕೂಡಾ ಬೀಳುತ್ತದೆ. ಚರ್ಮ ಸಿಕ್ಕಾಪಟ್ಟೆ ಉರಿಯುತ್ತದೆ. ಆದ್ದರಿಂದ ಅವರು ಕೂದಲು ತೆಗೆಯಲು ರೇಜರ್ ಬಳಸುವುದು ಸೂಕ್ತ.

ವ್ಯಾಕ್ಸಿಂಗ್ ಮಾಡಿದ ನಂತರ, ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ವ್ಯಾಕ್ಸಿಂಗ್ ಮಾಡಿದ ಪ್ರದೇಶಕ್ಕೆ ಐಸ್ ಪ್ಯಾಕ್ ಅನ್ನು ಹಚ್ಚಿ. ಕೋಲ್ಡ್‌ಥೆರಪಿ ಆ ಪ್ರದೇಶದ ರಕ್ತದ ಹರಿವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ನೀವು ಕೋಲ್ಡ್ ಪ್ಯಾಕ್ ಹೊಂದಿಲ್ಲದಿದ್ದರೆ, ಐಸ್ಕ್ಯೂಬ್ ಅನ್ನು ಪೇಪರ್ ಟವೆಲ್‌ನಲ್ಲಿ ಕಟ್ಟಬಹುದು. ನೋವು ಕಡಿಮೆಯಾಗುವವರೆಗೆ ಪ್ರತಿ ಎರಡು ಗಂಟೆಗಳಿಗೊಮ್ಮೆ 10 ನಿಮಿಷಗಳ ಕಾಲ ಅದನ್ನು ಮಾಡಿ.

ವ್ಯಾಕ್ಸಿಂಗ್ ಮಾಡಿದ ನಂತರ ಚರ್ಮಕ್ಕೆ ಸೂರ್ಯನ ಕಿರಣ ಬೀಳದಂತೆ ನೋಡಿಕೊಳ್ಳಬೇಕು. ವ್ಯಾಕ್ಸಿಂಗ್, ಚರ್ಮದ ಮೇಲಿನ ಪದರವನ್ನು, ಅನಗತ್ಯ ಕೂದಲಿನೊಂದಿಗೆ ತೆಗೆದುಹಾಕುತ್ತದೆ. ಇದು ಚರ್ಮವನ್ನು ಇನ್ನಷ್ಟು ಹಾನಿಗೊಳಗಾಗುವಂತೆ ಮಾಡುತ್ತದೆ. ಆದ್ದರಿಂದ ವ್ಯಾಕ್ಸಿಂಗ್ ಮುಗಿದ ನಂತರ ಹೊರಬರುವಾಗ ಮೊದಲು ತ್ವಚೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದು ಒಳಿತು.

ವ್ಯಾಕ್ಸಿಂಗ್ ಮಾಡಿದ ನಂತರ ಬಿಸಿನೀರಿನ ಸ್ನಾನ ಮಾಡಬಾರದು. ಬಿಸಿನೀರು ಚರ್ಮವನ್ನು ಸುಡುವಂತ ಮಾಡುತ್ತದೆ. ವ್ಯಾಕ್ಸಿಂಗ್ ನ ನಂತರ ಸ್ವಚ್ಛಗೊಳಿಸಲು ತಣ್ಣೀರನ್ನು ಬಳಸಬೇಕು ಮತ್ತು ಯಾವುದೇ ಕಾರಣಕ್ಕೂ ಸೋಪ್ ಅನ್ನು ಬಳಸಬಾರದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು