News Karnataka Kannada
Friday, March 29 2024
Cricket
ಪರಿಸರ

ಕಾಫಿ ಬೆಳೆ: ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ

If you don't know, you can taste the smell of coffee
Photo Credit : Pixabay

ರುಬಿಯೇಸಿ ಸಸ್ಯ ಕುಟುಂಬಕ್ಕೆ ಸೇರಿದ ಕಾಫಿಯು ಒಂದು ಹೂಬಿಡುವ ಸಸ್ಯವಾಗಿದ್ದು ಅದರ ಬೀಜಗಳಿಂದಾಗಿ ಇದನ್ನು ಕಾಫಿ ಬೀನ್ಸ್ ಎಂದು ಕರೆಯಲಾಗುತ್ತದೆ. ಪಾನೀಯ ಸೇರಿದಂತೆ ಕಾಫಿ ಬೀಜದಿಂದ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಕಾಫಿಯನ್ನು ಭಾರತದಲ್ಲಿ ಕಾಫಿಯನ್ನು 1936ರಲ್ಲಿ ಚಿಕ್ಕಮಂಗಳೂರು ಬಳಿ ಪರಿಚಯಿಸಲಾಯಿತು.

ಪ್ರಪಂಚದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಜನಪ್ರಿಯ ಸರಕು ಬೆಳೆಗಳಲ್ಲಿ ಕಾಫಿ ಒಂದಾಗಿದೆ. ಕಾಫಿ ಉತ್ಪಾದನೆಯಲ್ಲಿ ಬೆಜಿಲ್ ವಿರ್ಶವದ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಭಾರತದಲ್ಲಿ ಕಾಫಿಉತ್ಪಾದನ ರಾಜ್ಯಗಳು: ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಒರಿಸ್ಸಾ.

ಕಾಫಿಉತ್ಪಾದನಾ ದೇಶಗಳು: ವಿಯೆಟ್ನಾಂ, ಬ್ರೆಜಿಲ್, ಭಾರತ, ಇಂಡೋನೇಷ್ಯಾ, ಇಥಿಯೋಪಿತಾ ಇತ್ಯಾದಿ.

ಪ್ರಬೇಧ: ಅರೇಬಿಕಾ ಮತ್ತು ರೊಬಾಸ್ಟಾ. ಇವುಗಳ ಅಡಿಯಲ್ಲಿ ನೂರಾರು ಪ್ರಬೇಧಗಳು ಲಭ್ಯವಾಗುತ್ತದೆ.

ಹವಾಮಾನ: ಕಾಫಿ ಬೆಳೆಯಲು ಹವಾಮಾನ ಪರಿಸ್ಥಿತಿಗಳು ಪ್ರಮುಖ ಪಾತ್ರ ವಹಿಸುತ್ತದೆ. ಅರೇಬಿಕಾ ಕಾಫಿ 900ರಿಂದ 1600 ಮೀಟರ್‌ಗಳ ಎತ್ತರದಲ್ಲಿ ಬೆಳೆಸಬಹುದು. ಅದಾಗಿಯೂ ಕಡಿಮೆ ಎತ್ತರದಲ್ಲಿ ಇದನ್ನು ಬೆಳೆಸಬಹುದು.

ಮಳೆ: ಮಳೆಯ ಅಗತ್ಯಕ್ಕೆ ಬಂದಾಗ ಕಾಫಿ ಬೆಳೆಯು 2,200ರಿಂದ 2300 ಮಿಮಿ ವಾರ್ಷಿಕ ಮಳೆಯೊಂದಿಗೆ ಚನ್ನಾಗಿ ಬಳೆಯಬಹುದು. ಉತ್ತಮ ಬೆಳೆವಣಿಗೆಗೆ ಆದರ್ಶ ತಾಪಮಾನ 10 ಡಿಗ್ರಿಯಿಂದ 28 ಡಿಗ್ರಿ ಅಗತ್ಯವಿರುತ್ತದೆ ಜೊತೆಗೆ ನೆರಳಿನ ಅಗತ್ಯವು ಹೆಚ್ಚಾಗಿರುತ್ತದೆ.

ಮಣ್ಣಿ ಅವಶ್ಯಕತೆ: ಕಾಫಿ ಬೆಳೆಯನ್ನು ಕಡಿದಾದ ಪರ್ವತ ಇಳಿಜಾರು ಅಥವಾ ಬಹುತೇಕ ಸಮತಟ್ಟಾದ ಭೂಮಿಯಲ್ಲಿ ಉತ್ತಮವಾಗಿ ಬೆಳೆಯಬಹುದು. ಲೋಮ್ ಮಣ್ಣು ಉತ್ತಮವಾಗಿರುತ್ತದೆ. ಕಾಫಿ ಬೆಳೆಯನ್ನು ವಸಂತ ಋತುವಿನಲ್ಲಿ ಅಥವಾ ಮಳೆಗಾಲದ ಮೊದಲು ನೆಡಲಾಗುತ್ತದೆ. ಏಕೆಂದರೆ ಬೆಳೆಗೆ ತೇವಾಂಶವುಳ್ಳ ಮಣ್ಣಿ ಪರಿಸ್ಥಿತಿಗಳು ಉತ್ತಮವಾಗಿರುತ್ತದೆ.

ಆರೋಗ್ಯ ಪ್ರಯೋಜನಗಳು: ಕಾಫಿಯ ಕೆಲವು ಆರೋಗ್ಯ ಪ್ರಯೋಜನಗಳು ಕೆಳಗಿನಂತಿವೆ.

• ಕಾಫಿ ಖಿನ್ನತೆಯನ್ನು ಕಡಿಮೆ ಮಾಡುವ ಅದ್ಬುತ ಪಾನೀಯವಾಗಿದೆ.
• ಕಾಫಿ ಆಂಟಿ ಆಕ್ಸಿಡೆಂಟ್ ನೈಸರ್ಗಿಕ ಮೂಲವಾಗಿದೆ
• ಕಾಫಿ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ
• ಯಕೃತ್ತಿನ ಆರೋಗ್ಯಕ್ಕೆ ಉತ್ತಮ
• ನಿರ್ದಿಷ್ಟ ಕ್ಯಾನ್ಸರ್ ತಡೆಗಟ್ಟಬಹುದು
• ಪಾರ್ಕಿನ್ಸನ್ ಕಾಯಿಲೆಯನ್ನು ಕಡಿಮೆಗೊಳಿಸುತ್ತದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು