ಮುಂಬೈ: ಮೊಬೈಲ್ ಎಂಬ ಮಾಯೆ ಅಂಗೈಯಲ್ಲಿಯೇ ಜಗತ್ತನ್ನು ತೋರಿಸುವ ಮಟ್ಟಕ್ಕೆ ಬೆಳೆದಿದೆ. ಆಹಾರದಿಂದ ಆರೋಗ್ಯದವರೆಗೆ ಬ್ಯಾಂಕಿಂಗ್‌ನಿಂದ ಹಿಡಿದು ಮನರಂಜನೆಯವರೆಗೆ ಮೊಬೈಲ್ ಬಳಕೆಯಾಗದ ಕ್ಷೇತ್ರವೇ ಇಲ್ಲ ಎನ್ನಬಹುದು.
ಅದೇ ರೀತಿ ಮೊಬೈಲ್ ಫೋನ್ಗಳನ್ನು ಮಕ್ಕಳು ಅಥವಾ ವೃದ್ಧರು ಎಂದು ಎಲ್ಲಾ ವಯಸ್ಸಿನ ಜನರು ಬಳಸುತ್ತಾರೆ. ಆದರೆ ಅತಿಯಾಗಿ ಮೊಬೈಲ್ ಫೋನ್ ಬಳಸುವುದರಿಂದ ಕಣ್ಣುಗಳಿಗೆ ಖಂಡಿತವಾಗಿಯೂ ಹಾನಿಯಾಗುತ್ತದೆ.
ದೀರ್ಘಕಾಲ ಮೊಬೈಲ್‌ಗಳಿಗೆ ನಮ್ಮ ಕಣ್ಣುಗಳನ್ನು ಒಡ್ಡುವ ಕಾರಣ ದೃಷ್ಟಿದೋಷ, ತಲೆನೋವು ಮೊದಲಾದ ಸಮಸ್ಯೆಗಳು ಕಾಡುತ್ತವೆ. ಇಂತಹ ಸಮಸ್ಯೆಗಳಿಂದ ಪಾರಾಗಲು ಸಣ್ಣ ಟ್ರಿಕ್ಸ್ ಬಳಸಿದರೆ ಖಂಡಿತವಾಗಿಯೂ ಕಣ್ಣುಗಳ ರಕ್ಷಣೆ ಮಾಡಿಕೊಂಡು ಆರೋಗ್ಯ ಕಾಯ್ದುಕೊಳ್ಳಬಹುದಾಗಿದೆ.
ಈಗ ಎಲ್ಲ ಸ್ಮಾರ್ಟ್‌ಫೋನ್ ಕಂಪನಿಗಳು ತಮ್ಮ ಬಳಕೆದಾರರ ಅನುಕೂಲಕ್ಕಾಗಿ ಪ್ರತಿಯೊಂದು ಫೋನ್‌ನಲ್ಲಿ ಡಾರ್ಕ್ ಮೋಡ್ ಆಯ್ಕೆಯನ್ನು ಒದಗಿಸುತ್ತವೆ. ಆದರೆ, ಅನೇಕ ಜನರು ಈ ವೈಶಿಷ್ಟ್ಯವನ್ನು ಬಳಸುವುದಿಲ್ಲ ಅಥವಾ ಅವರಿಗೆ ಈ ವೈಶಿಷ್ಟ್ಯದ ಬಗ್ಗೆ ತಿಳಿದಿರುವುದಿಲ್ಲ.ಸ್ಮಾರ್ಟ್‌ಫೋನ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಿದ ನಂತರ, ಡಿಸ್ ಪ್ಲೇ ಮೇಲೆ ಗೋಚರಿಸುವ ಎಲ್ಲ ವಿಷಯಗಳು ಕಪ್ಪು ಬಣ್ಣದಲ್ಲಿ ಇರುತ್ತದೆ. ಇದು ನಿಮ್ಮ ಕಣ್ಣುಗಳ ಮೇಲೆ ಹೆಚ್ಚು ಒತ್ತಡವನ್ನು ಬೀರುವುದಿಲ್ಲ. ಅದೇ ರೀತಿ ನಿಮ್ಮ ಫೋನ್‌ನಲ್ಲಿ ನೀವು ಡಾರ್ಕ್ ಮೋಡ್ ಅನ್ನು ಆನ್ ಮಾಡಿದರೆ, ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗನೆ ಖಾಲಿ ಆಗುವ ಸಮಸ್ಯೆಯೂ ನಿವಾರಣೆ ಆಗುತ್ತದೆ.