NewsKarnataka
Tuesday, November 23 2021

ಲೇಖನ

ಪರಿಶುದ್ದ ಸ್ನೇಹ ಸಂಬಂಧ

ಅಲ್ಲೊಂದು ಸುಂದರ ಸ್ನೇಹ  ಸಂಬಂಧ. ನೋಡಿದ ಯಾರಿಗೂ ಒಮ್ಮೆ ಹೊಟ್ಟೆ ಕಿಚ್ಚಾಗುತ್ತಿದ್ದಂತು ಸತ್ಯ. ಹೌದು ಒಂದು ಹುಡುಗ ಹುಡುಗಿ ಸ್ನೇಹಿತರು ಆದ್ರೆ ಸಮಾಜ ಅವರನ್ನು ಪ್ರೇಮಿಗಳು ಎಂಬ ಪಟ್ಟ ಕಟ್ಟಿ ಸ್ನೇಹದ ಪವಿತ್ರತೆ ಕಳಂಕ ಬಗೆಯುತ್ತಿದ್ದಾರೆ. ಅವರಿಬ್ಬರದ್ದು ಅಪರೂಪರದ ಸ್ನೇಹ. ಆರಂಭದಲ್ಲಿ ಕಾಲೇಜಿನ ತುಂಬಾ ಎಲ್ಲರ ಬಾಯಲ್ಲೂ ಅವರ ಸ್ನೇಹದ್ದೇ ಮಾತು. ಕ್ಯಾಂಪಸ್‌ನಲ್ಲೂ, ಕ್ಯಾಂಟಿನಲ್ಲೂ ಎಲ್ಲಿ ಕಂಡರೂ ಅವರಿಬ್ಬರೂ ಜೊತೆಗೆ ಇರುತ್ತಿದ್ದರೂ, ನನಗೂ ಅನಿಸಿದ್ದುಂಟು ಇವರು ನಿಜಕ್ಕೂ ಸ್ನೇಹಿತರೇ ಎಂದು.
ಅವಳು ಕಷ್ಟದಲ್ಲಿ ಅವನು ಸದಾ ಆಕೆಯ ಜೊತೆ ಸಹಾಯಕ್ಕೆ ನಿಲ್ಲುತ್ತಾನೆ. ಯಾವುದೆ ಕ್ಷಣದಲ್ಲಿ ಸಹಾಯಕ್ಕೆ ಕರೆದಾಗ ಆತ ಎರಡೇ ನಿಮಿಷದಲ್ಲಿ ಅಲ್ಲಿಹಾಜರಾಗುತ್ತಾನೆ.ಕಾಲೇಜಿನಲ್ಲಿ ಲೆಕ್ಚರ‍್ಸ್ಗೂ ಇವರ ಸ್ನೇಹದ ಮೇಲೆ ಒಂಥರಾ ಕೆಂಗಣ್ಣು ಅವರ ಅಂಕದ ಮೇಲೂ ಅದು ಪರಿಣಾಮ ಬೀರುತ್ತಿತು ಎಂದು ಹೇಳುತ್ತಾ ಇದ್ದದ್ದು ನನಗಿನ್ನು ನೆನಪಿದೆ. ಆದರೆ ಅವರಿಬ್ರೂ ಅದಕ್ಯಾವುದಕ್ಕೂ ತಲೆ ಕೆಡಿಸಿಕೊಂಡವರಲ್ಲ. ಬದಲಾಗಿ ಸ್ನೇಹದ ನಂಟನ್ನು ಇನ್ನೂ ಗಟ್ಟಿ ಮಾಡಿಕೊಂಡರು.
ಅವರ ಸ್ನೇಹದ ಭಾಂಧವ್ಯವು ಒಂಥರಾ ವಿಚಿತ್ರವಾಗಿ ಹುಟ್ಟಿಕೊಂಡಿತು ಎನ್ನಬಹುದು. ತರಗತಿಯಲ್ಲಿ ಎಲ್ಲರೂ ಒಂದು ಇವನಿಂದಾಗಿ ಒಂದು ವಿಚಾರದಲ್ಲಿ ಸಿಕ್ಕಿ ಬಿದ್ದರೂ ಎಂದೂ ಇವನನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿದಾಗ, ಆ ಸಂದರ್ಭದಲ್ಲಿ ಆತನೊಂದಿಗೆ ಇದ್ದದ್ದು ಆಕೆಯೊಬ್ಬಳೆ ಅದೇ ಅವರ ಸ್ನೇಹದ ಪವಿತ್ರತೆಗೆ ಕಾರಣ. ತನ್ನ ಕಷ್ಟದ ಸಂದರ್ಭದಲ್ಲಿ ಯಾರು ತನ್ನೊಂದಿಗೆ ಬೆನ್ನೆಲುಬಾಗಿ ನಿಂತು ನಿನ್ನೊಂದಿಗೆ ನಾನಿದ್ದೇನೆ ಎಂದೂ ಸ್ವಾಂತನ ಮಾತು ಹೇಳುತ್ತಾನೋ ಅವನೇ ನಿಜವಾದ ಸ್ನೇಹಿತ. ಆಕೆ ಒಂಥರಾ ನಡೆದಾಡುವ ಪಾದರಸದಂತೆ ಎಲ್ಲಾ ಕ್ಷೇತ್ರದಲ್ಲೂ ತನ್ನನ್ನು ತೊಡಗಿಕೊಂಡವಳು. ಅವನು ಅಷ್ಟೇ ಕಾಲೇಜಿನಲ್ಲಾಗಲಿ ಉಳಿದ ಸಮಯದಲ್ಲಾಗಲಿ ಆಕೆಯೊಂದಿಗಿದ್ದು ಸ್ನೇಹದ ಪವಿತ್ರತೆಯನ್ನು ಉಳಿಸಿಕೊಂಡಿದ್ದಾನೆ. ಎಲ್ಲಾ ಸ್ನೇಹಿತರಂತೆ ಇವರು ಕಿತ್ತಾಡುತ್ತಾರೆ ಆದರೆ ಅದು ಕೇವಲ ಎರಡೆ ನಿಮಿಷಕ್ಕೆ ಸಿಟ್ಟು ಎಂಬಲ್ಲಿ ನಿಷ್ಕಲ್ಮಶ ಸ್ನೇಹ ಮತ್ತೆ ಚಿಗುರುತ್ತಿತ್ತು ಎನ್ನುವುದೇ ಖುಷಿ.
ಇವರ ಸ್ನೇಹದ ಇನ್ನೊಂದು ವಿಶೇಷ ಎಂದರೇ ಎರಡೂ ಮನೆಗಳಲ್ಲೂ ಇಬ್ಬರ ಪರಿಚಯ ಇದೆ. ಹಾಗೇ ಅಷ್ಟೇ ನಂಬಿಕೆಯು ಇದೆ ಎಂದರೇ ತಪ್ಪಾಗದು. ಸಮಾಜ ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳದೇ ಸದಾ ನಮ್ಮ ಸ್ನೇಹವನ್ನು ಇನ್ನೂ ಗಟ್ಟಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನೇ ಅವರು ಯೋಚಿಸುತ್ತಾ ಇದ್ದರು. ಅವಳ ಮೌನದ ಹಿಂದಿನ ನೋವನ್ನು ಕ್ಷಣಾರ್ಧದಲ್ಲಿ ಅರಿತುಕೊಳ್ಳುವ ಸಾಮರ್ಥ್ಯ ಇದ್ದದ್ದು ಆತನಿಗೆ ಮಾತ್ರ, ಹಾಗೇ ಆತನ ನೋವನಲ್ಲಿರುವಾಗ ನೋವ ಮರೆಸಿ ನಗಿಸುವ ಕಾರ್ಯವನ್ನು ಆಕೆ ಮಾಡುತಿದ್ದಳು. ಇನ್ನೂ ಒಂದು ಮರೆಯಾಲಾಗದ ವಿಚಾರವೆಂದರೆ ಆಕೆಯ ಮದುವೆ ಇತ್ತೀಚೇಗಷ್ಟೇ ನಡೆಯಿತು ಮದುವೆಯ ಎರಡು ದಿನ ಮೊದಲೇ ಮದುವೆ ಮನೆಗೆ ಆಗಮಿಸಿ ಮದುವೆ ಸಂಭ್ರಮದಲ್ಲಿ ಬಾಗಿಯಾಗಿ.ಸಂಶಯ ಪಟ್ಟವರ ಮುಂದೆ ಅವರ ಸ್ನೇಹ ಎಷ್ಟು ಪರಿಶುಧ್ದ ಎಂದು ತೋರಿಸಿ ಕೊಟ್ಟಿದ್ದಾರೆ. ಅದು ಅಲ್ಲದೇ ಮದುವೆಯ ಬಳಿಕವು ಅವರ ನಿಷ್ಕಲ್ಮಶ ಸ್ನೇಹವು ಹಿಂದಿನಂತೆ ಮುಂದುವರಿಯುತ್ತಿರುವುದು ಅವರ ಸ್ನೇಹದ ಪವಿತ್ರತೆಗೆ ಇರುವ ಶಕ್ತಿ. ಸಮಾಜದಲ್ಲಿ ಗಂಡು ಹೆಣ್ಣು ಉತ್ತಮ ಸ್ನೇಹಿತರಾಗಬಹುದು ಎಂಬುದಕ್ಕೆ ಇವರೇ ಸಾಕ್ಷಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Swathi M G

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!