NewsKarnataka
Thursday, November 25 2021

ಲೇಖನ

ಕನಸಿನ ಜೊತೆ ಕಾಲೇಜಿಗೆ ಪಾದಾರ್ಪಣೆ

ಅಂದು ಕಾಲೇಜಿನ ಮೊದಲನೇ ದಿನ ಒಂದ್‌ಚೂರು ಭಯ, ಇನ್ನೊಂದ್‌ಚೂರು ಖುಷಿ ಹೀಗೇ ಹಾಗೋ ಹೀಗೋ ಅಂದುಕೊಂಡು ಕಾಲೇಜಿಗೆ ಪಾರ್ದಾಪಣೆ ಮಾಡಿ ಆಯಿತು. ಇನ್ನು ಮುಂದೆ ಏನು ಅನ್ನೋ ಅರಿವೆ ಇರದೆ ಕಾಲೇಜಿಗೆ ಕಾಲಿಟ್ಟ ಹುಡುಗಿ ನಮ್ ಅಂಜು. ಸ್ನಾತಕೋತ್ತರ ವಿದ್ಯಾಭ್ಯಾಸ ಅಂದ್ರೆ ಏನು ಎಂದೆ ತಿಳಿದಿಲ್ಲ, ಆದ್ರೂ ಕಲಿಬೇಕು ಅನ್ನೋ ಹುಮ್ಮಸ್ಸು ಹೆಚ್ಚೆ ಇತ್ತು ಆಕೆಗೆ. ಅದಕ್ಕೆ ಸರಿಯಾಗಿ ಮನೆಯಲ್ಲೂ ಅಣ್ಣನ ಸಂಪೂರ್ಣ ಬೆಂಬಲದೊಂದಿಗೆ ಸೇರ್ಪಡೆಗೊಂಡಳು. ಆದರೆ ಇತ್ತ ಅಂಜುವಿನ ಹೆತ್ತವರಿಗೆ ಮಗಳು ಉದ್ಯೋಗ ಮಾಡಬೇಕು ತನ್ನ ಕಾಲಲ್ಲಿ ತಾನು ನಿಂತುಕೊಳ್ಳುವಷ್ಟು ಸಾಮರ್ಥ್ಯ ಹೊಂದಿರಬೇಕು ಅನ್ನೋ ಆಸೆ ಅವರದ್ದು, ಆದರೆ ಅಂಜು ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಪಡೆಯಲೇಬೇಕು ಅನ್ನೋ ಹಂಬಲದಲ್ಲಿ ಇದ್ದವಳು ಅದಕ್ಕಾಗಿ ಹೆತ್ತವರ ಒಪ್ಪಿಗೆ ಪಡೆಯಲು ಹರೆಸಾಹಸ ಪಡಬೇಕಾದರು ಕೊನೆಗೂ ತನಗೆ ಬೇಕಾದದ್ದು ಪಡೆದುಕೊಂಡಳು.

ಕಾಲೇಜಿಗೇನೋ ಕಾಡಿಬೇಡಿ ಸೇರಿಕೊಂಡಾಯ್ತು ನಮ್ ಅಂಜು, ಮೊದಮೊದಲು ಆಕೆಗೆ ಒಂದೊಂದೆ ಯೋಚನೆಗಳು ಕಾಡತೊಡಗುತ್ತದೆ. ಒಂದೆಡೆಯಿಂದ ಅಣ್ಣ ತನ್ನ ಮೇಲಿಟ್ಟುರುವ ನಂಬಿಕೆ ಉಳಿಸಿಕೊಂಡು ಮುಂದುವರಿಯುವುದು ಆದರೆ, ಇನ್ನೊಂದೆಡೆ ಹೆತ್ತವರ ಆಸೆಯನ್ನು ಈಡೇರಿಸುವುದು. ಆಕೆಗೆ ಪ್ರತೀ ಕ್ಷಣ ಅದೇ ಕಣ್ಣ ಮುಂದೆ ಕಾಣುತ್ತಿತ್ತು.

ಕಾಲೇಜು ಅಂದ್ ಮೇಲೆ ಜ್ವಾಲಿ ಫನ್ ಇರಲೇ ಬೇಕಲ್ಲ ಅದೇ ರೀತಿ ಈ ನಮ್ ಅಂಜುಗೂ ಒಂದು ಕ್ರೇಜಿ ಗೆಳೆಯ ಗೆಳತಿಯರ ಬಳಗ ಇಲ್ಲಿ ಸಿಕ್ತು. ತಾನೂ ಅವರ ಜೊತೆ ಸೇರಿ ಅವರಂತೆ ಜ್ವಾಲಿ ಫನ್ ಎಂದು ಕ್ಲಾಸ್‌ಗೆ ಚಕ್ಕರ್ ಹೊಡೆದು ಹೊರಗಿನ ಸುತ್ತಾಟದಲ್ಲಿ ತೊಡಗಿಕೊಂಡು ವಿದ್ಯಾಭ್ಯಾಸದತ್ತ ಒಲವು ಕಡಿಮೆಯಾಗುತ್ತಾ ಬರುತ್ತದೆ, ಗಮನವೆಲ್ಲಾ ಸುತ್ತಾಟದೆಡೆವಾಲುತ್ತದೆ. ಆ ಗುಂಗಿನಲ್ಲಿ ತೇಲುತ್ತಿದ್ದ ಅಂಜುಗೆ ಹೆತ್ತವರಿಗೆ ಕೊಟ್ಟ ಭಾಷೆ ಪ್ರಮಾಣ, ಅಣ್ಣನ ನಂಬಿಗೆ ಇವೆಲ್ಲ ಹುಸಿ ಎನಿಸುತ್ತಿತ್ತು.

ಒಂದು ವರ್ಷ ಹೀಗೆ ಕಳೆದು ಬಿಟ್ಟಳು ನಮ್ ಅಂಜು. ಅದರೆ ಇದು ಯಾವುದರ ಬಗ್ಗೆ ಅರಿವೇ ಇರದಿದ್ದ ಮನೆಯವರು ಅಂಜು ಮುಂದೊಂದು ದಿನ ತಮ್ಮ ಮನೆಗೆ ಹಾಗೇ ಊರಿಗೆ ಒಳ್ಳೆಯ ಹೆಸರು ತಂದೇ ತರುತ್ತಾಳೆ ಅನ್ನೋ ಭ್ರಮೆಯಲ್ಲಿ ಬದುಕು ಕಳೆಯುತ್ತಿರುತ್ತಾರೆ. ಮಗಳು ತಮ್ಮೆಲ್ಲಾ ಆಸೆ ಆಕಾಂಕ್ಷೆಯನ್ನು ಬದಿಗಟ್ಟಿದ್ದಾಳೆ ಅನ್ನೋ ಕಹಿ ಸತ್ಯ ತಿಳಿದೆ ಇರುವುದಿಲ್ಲ.

ಕನಸಿನ ಮೂಟೆಯನ್ನು ಹೊತ್ತು ಕಾಲೇಜಿಗೆ ಕಾಲಿಟ್ಟ ಅಂಜು ದ್ವಿತೀಯ ವರ್ಷದಲ್ಲದರೂ ಎಚ್ಚೆತ್ತು ಕೊಂಡು ನನಸಿನ ಕಡೆಗೆ ಸಾಗಬಹುದಿತ್ತು ಆದರೆ ಆಕೆಗೆ ಅದು ಯಾವುದರ ಬಗ್ಗೆನೂ ಆಸಕ್ತಿ ಇರಲಿಲ್ಲ. ಆಕೆ ಅದೇ ಹಳೆ ಚಾಲಿಯನ್ನು ಮುಂದುವರೆಸಿದಳು. ಪ್ರತಿ ಸೆಮಿಸ್ಟರ್ ಎಕ್ಸಾಮ್‌ಗಳಲ್ಲೂ ಆಕೆಯ ಎರಡು ಅಥವ ಮೂರು ವಿಷಯದಲ್ಲಿ ಬಾಕ್ ಇರುತ್ತಿತ್ತು. ಆದರೂ ಆಕೆಗೆ ಅಂದು ಆ ಎಲ್ಲ ಬಾಕ್ ಸಬ್‌ಜೆಕ್ಟ್ಗಳನ್ನು ಕಂಪ್ಲೀಟ್ ಮಾಡುವ ಉದ್ದೇಶವೂ ಅವಳಲ್ಲಿ ಇರಲಿಲ್ಲ.

ಇತ್ತ ಆಕೆಯ ಜೊತೆ ಸುತ್ತಾಡುತ್ತಿದ್ದ ಗೆಳೆಯ ಗೆಳತಿಯರು ಹೊರಗಿನ ಸುತ್ತಾಟದ ಜೊತೆ ಎಲ್ಲಾ ಸೆಮಿಸ್ಟರ್ ಎಕ್ಸಾಮ್ಸ್ಗಳಲ್ಲೂ ಕಂಪ್ಲೀಟ್ ಮಡಿಕೊಂಡು ಕಾಲೇಜು ಲೈಫ್ ಕೊನೆಗೊಂಡಂತೆ ಒಳ್ಳೆ ಜಾಬ್‌ಗಳನ್ನೂ ಗಿಟ್ಟಿಸಿಕೊಂಡರು. ಆದರೆ ಅಂಜು ಇಂದು ವ್ಯಥೆ ಪಡುವಂತಾಗಿದೆ. ಇನ್ನೊಂದೆಡೆ ಹೆತ್ತವರ ಮತ್ತು ತನ್ನ ಅಣ್ಣನ ಕನಸನ್ನು ನುಚ್ಚುನೂರು ಮಾಡಿದೆ ಎಂದು ಕೊರಗುವಂತ್ತಾಗಿದೆ. ಜೀವನ ಅಂದರೆ ಕೇವಲ ಜ್ವಾಲಿ ಅಲ್ಲ ಎಂದು ಇಂದು ಅರಿವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Gayathri Gowda

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!