News Kannada
Wednesday, February 01 2023

ಲೇಖನ

ಹೈ ಹೀಲ್ಡ್ ಚಪ್ಪಲಿ ಧರಿಸುದರಿಂದ ಬೆನ್ನು ನೋವು ಬರಬಹುದು!

Photo Credit :

ಇತ್ತೀಚೆಗಿನ ದಿನಗಳಲ್ಲಿ ಹೆಣ್ಮಕ್ಕಳು ತನ್ನ ಬಳಿಯೊಂದು ಹೈಹೀಲ್ಡ್ ಚಪ್ಪಲಿ ಇರಲೆಂದು ಬಯಸುವುದು ಸಹಜವೇ. ಕೆಲವರಂತು ಹೆಚ್ಚಾಗಿ ಹೈಹೀಲ್ಡ್ ಚಪ್ಪಲಿಯನ್ನೇ ಬಳಸುತ್ತಾರೆ.

ಆದರೆ ಹೈಹೀಲ್ಡ್ ಚಪ್ಪಲಿ ಧರಿಸುವವರು ಸ್ವಲ್ಪ ಎಚ್ಚರ ವಹಿಸುವುದು ಅಗತ್ಯ. ಏಕೆಂದರೆ ಹೈಹೀಲ್ಡ್ ಚಪ್ಪಲಿ ಧರಿಸಿ ಓಡಾಡುವುದನ್ನು ಹೆಚ್ಚಾಗಿ ಮಾಡಿದರೆ ಬೆನ್ನು ನೋವು ಬರಬಹುದು ಎಂದು ಹೇಳಲಾಗಿದೆ.

ಹಾಗೆಂದು ಹೈಹೀಲ್ಡ್ ಚಪ್ಪಲಿ ಧರಿಸಲೇ ಬೇಡಿ ಎಂದರೆ ತಪ್ಪಾಗುತ್ತದೆ. ಆದರೆ ಬಳಕೆಯಲ್ಲಿ ಒಂದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ನಮ್ಮ ಎಚ್ಚರಿಕೆಯಲ್ಲಿ ನಾವು ಇರುವುದು ಒಳಿತು. ಇಷ್ಟಕ್ಕೂ ಹೈಹೀಲ್ಡ್ ಚಪ್ಪಲಿಯನ್ನೇಕೆ ಹೆಚ್ಚು ಧರಿಸಬಾರದು ಎಂಬ ಪ್ರಶ್ನೆಗೆ ಮೊದಲು ಉತ್ತರ ಹೇಳಲೇ ಬೇಕಾಗುತ್ತದೆ. ಹೈಹೀಲ್ಡ್ ಚಪ್ಪಲಿ ಧರಿಸಿ ಹೆಚ್ಚು ಓಡಾಟ ಮಾಡಿದರೆ ಬೆನ್ನು ನೋವು ಕಾಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆಯಂತೆ.

ಕಾಲಿಗೆ ಧರಿಸುವ ಚಪ್ಪಲಿಗೂ ಬೆನ್ನಿಗೆ ಎಲ್ಲಿಂದೆಲ್ಲಿಯ ಸಂಬಂಧ? ಬೆನ್ನು ನೋವು ಏಕೆ ಬರುತ್ತದೆ? ಹೈಹೀಲ್ಡ್ ಧರಿಸಿ ಕೆಲಸಕ್ಕೆ ಹೋಗುವ ಯುವತಿಯರು, ಮಹಿಳೆಯರು ಮಾಮೂಲಿ ಚಪ್ಪಲಿ ಧರಿಸಿ ನಡೆದಾಡಿದಂತೆ ನಡೆಯಲು ಸಾಧ್ಯವಿಲ್ಲ. ನಮ್ಮ ಗಮನ ಚಪ್ಪಲಿ ಮೇಲೆಯೇ ಇರುತ್ತದೆ. ಜತೆಗೆ ಕೆಲವೊಮ್ಮೆ ಕಾಲಿನ ಸಮತೋಲನ ತಪ್ಪಿ ಕಾಲು ಉಳುಕುವ ಸಾಧ್ಯತೆಯೂ ಇರುತ್ತದೆ. ಹೈಹೀಲ್ಡ್ ಧರಿಸಿ ನಡೆಯುವಾಗ ಬೆರಳಿನ ಮೇಲೆ ಹೆಚ್ಚಿನ ಶಕ್ತಿ ಕೊಡಬೇಕಾಗುತ್ತದೆ. ಕೆಲವೊಮ್ಮೆ ಸಮತೋಲನ ತಪ್ಪಿ ಕಾಲುಗಳಿಗೆ ತೊಂದರೆಗಳು ಆಗುವುದು ಸಹಜ. ಹೈಹೀಲ್ಡ್ ಚಪ್ಪಲಿಗಳು ದೇಹದ ಸಮತೋಲನವನ್ನು ಪಲ್ಲಟಗೊಳಿಸಿ ಭಾರ ಬೀಳುವ ಅಕ್ಷರೇಖೆಯನ್ನು ಬದಲಿಸುತ್ತವೆಯಂತೆ.

ಈ ಅಕ್ಷರೇಖೆಯು ತನ್ಮೂಲಕ ದೇಹದ ಭಾರವನ್ನು ಭೂಮಿಗೆ ಸ್ಥಳಾಂತರಿಸುವ ಒಂದು ಕಾಲ್ಪನಿಕ ರೇಖೆಯಂತಿದ್ದು, ಇದು ಬೆನ್ನು ಹುರಿಯ ಸ್ಯಾಕ್ರಲ್ ಭಾಗದ ಎದುರುಗಡೆ ಹಾದು ಹೋಗುತ್ತದೆಯಂತೆ. ಹೀಗಾಗಿ ಹೈಹೀಲ್ಡ್ ಧರಿಸಿದಾಗ ಆ ರೇಖೆಯು ಅಸ್ತವ್ಯಸ್ತಗೊಂಡು ಹೆಚ್ಚಿನ ಭಾರವು ಬೆನ್ನು ಹುರಿಯ ಲಂಬಾರ್ ಭಾಗದ ಮೇಲೆ ಬಿದ್ದು ಬೆನ್ನು ನೋವು ಕಾಣಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಇನ್ನು ಗರ್ಭಿಣಿ ಮಹಿಳೆಯರು ಹೈಹೀಲ್ಡ್ ಚಪ್ಪಲಿ ಧರಿಸಿ ನಡೆದಾಡುವುದು ಸೂಕ್ತವಲ್ಲ. ಹೈ ಹೀಲ್ಡ್ ಹಾಕಿದ್ದೇ ಆದರೆ ಗರ್ಭಾವಸ್ಥೆಯ ಕೊನೆಯ ದಿನಗಳಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಇರುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಬೆನ್ನು ನೋವು ಸಾಮಾನ್ಯವಾಗಿ ಎಲ್ಲ ವಯಸ್ಸಿನವರಲ್ಲಿಯೂ ಒಂದೊಂದು ಕಾರಣಕ್ಕೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಅತಿಯಾದ ತೂಕವೂ ಬೆನ್ನು ನೋವನ್ನು ತರಬಹುದು. ವಯಸ್ಸಾದಂತೆ ಮೂಳೆಗಳ ಸವೆತವೂ ಬೆನ್ನು ನೋವಿಗೆ ಕಾರಣವಾಗಬಹುದು. ಆದರೆ ಸದಾ ಹೈಹೀಲ್ಡ್ ಚಪ್ಪಲಿ ಧರಿಸಿ ಓಡಾಡುವ ಮಹಿಳೆಯರಲ್ಲಿ ಬೆನ್ನು ನೋವು ಕಾಣಿಸಿಕೊಂಡರೆ ಅದು ಚಪ್ಪಲಿಯಿಂದಲೇ ಬಂದಿರಬಹುದಾ ಎಂಬುದನ್ನು ಪರೀಕ್ಷಿಸಿ ನೋಡಿಕೊಂಡರೆ ಉತ್ತಮ.

See also  ಪ್ರೇಮಿಗಳ ದಿನದ ಆಚರಣೆಗೆ ಕಾರಣನಾದ ವ್ಯಾಲೆಂಟೈನ್ ನೆನಪಾಗುತ್ತಿದ್ದಾನೆ....
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು