News Kannada
Saturday, September 23 2023
ಆರೋಗ್ಯ

ಗರ್ಭಿಣಿ ಮಹಿಳೆಯರೇ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ!

Davanagere: Concession for lactating, pregnant women in NREGA
Photo Credit : Pixabay

ಸಾಮಾನ್ಯವಾಗಿ ಎಲ್ಲ ಗರ್ಭಿಣಿ ಮಹಿಳೆಯರು ಮಾಡುವ ಅದೊಂದು ತಪ್ಪು ಏನೆಂದರೆ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು. ಅದೊಂದು ತಪ್ಪನ್ನು ಮಾಡದೇ ಇದ್ದರೆ ಆರೋಗ್ಯವನ್ನು ಕಾಪಾಡಿಕೊಂಡು ಆರೋಗ್ಯಕರ ಮಗುವಿಗೆ ಜನ್ಮ ನೀಡಲು ಸಾಧ್ಯವಾಗುತ್ತದೆ.

ಗರ್ಭಿಣಿ ಮಹಿಳೆಯರು ಆರೋಗ್ಯದ ಕುರಿತು ಎಷ್ಟು ಕಾಳಜಿ ವಹಿಸುತ್ತಾರೆಯೋ ಅಷ್ಟೇ ಒಳ್ಳೆಯದು. ಏಕೆಂದರೆ ಅವರು ಮಾಡುವ ಎಡವಟ್ಟು ಕೇವಲ ಅವರ ಆರೋಗ್ಯದ ಮೇಲೆ ಮಾತ್ರವಲ್ಲದೆ, ಮುಂದೆ ಹುಟ್ಟಲಿರುವ ಮಗುವಿನ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ಎಚ್ಚರಿಕೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾಗುತ್ತದೆ.

ಇತ್ತೀಚೆಗೆ ಪಾರ್ಟಿ ಹೆಸರಲ್ಲಿ ಧೂಮಪಾನ, ಮದ್ಯಪಾನ ಮಾಡುವ ಚಟಗಳು ಹೆಚ್ಚಾಗಿವೆ. ಐಟಿ, ಬಿಟಿಯಲ್ಲಿ ಕೆಲಸ ಮಾಡುವ ಕೆಲವು ಹೆಣ್ಣು ಮಕ್ಕಳು ಇಂತಹ ಚಟಕ್ಕೆ ಬಲಿಯಾಗುತ್ತಿರುತ್ತಾರೆ. ಸಿಗರೇಟ್, ಮದ್ಯ ಸೇವಿಸುವುದು ಸೇರಿದಂತೆ ಕೆಲವು ವಿದೇಶಿಗರ ದುಶ್ಚಟಗಳು ನಮ್ಮವರ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಎಂಜಾಯ್ ಹೆಸರಲ್ಲಿ ಮಾಡುವ ಎಡವಟ್ಟುಗಳು ಭಾರೀ ಪರಿಣಾಮ ಬೀರುತ್ತಿವೆ. ಒಂದು ವೇಳೆ ಗರ್ಭಿಣಿಯಾಗುವ ಮುನ್ನ ಇಂತಹ ದುಶ್ಚಟಗಳನ್ನು ಹೊಂದಿದ್ದರೆ, ಅವುಗಳನ್ನು ಬಿಡುವುದು ಒಳ್ಳೆಯದು. ಏಕೆಂದರೆ ಇದು ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರಲಿದ್ದು, ಮಗುವಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ತಂಬಾಕು ಅಗೆಯುವುದು ಅಥವಾ ಬಾಯಲ್ಲಿಟ್ಟುಕೊಳ್ಳುವುದು, ನಶ್ಯೆ ಸೇವಿಸುವುದು ಸಾಮಾನ್ಯವಾಗಿ ಗ್ರಾಮೀಣ ಮಹಿಳೆಯರಲ್ಲಿ ಕಂಡು ಬರುತ್ತದೆ. ಇದು ಮಾರಕವಾಗಿದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ಇದನ್ನೆಲ್ಲ ತ್ಯಜಿಸಲೇ ಬೇಕಾಗುತ್ತದೆ. ಏಕೆಂದರೆ ಇದರಿಂದ ಮಗುವಿಗೆ ಅಪಾಯವಾಗುವುದಲ್ಲದೆ, ಗರ್ಭಪಾತ, ಅವಧಿಗೆ ಮೊದಲೇ ಹೆರಿಗೆ, ಮಗುವಿನ ತೂಕ ಕಡಿಮೆಯಾಗುವುದು ಹೀಗೆ ಹಲವು ತೊಂದರೆ ಕಾಣಿಸಿಕೊಳ್ಳುತ್ತದೆ. ಆರೋಗ್ಯಕ್ಕೆ ಯಾವುದು ಮಾರಕ ಎಂದೆನಿಸುತ್ತದೋ ಅದನ್ನು ತ್ಯಜಿಸುವುದೇ ಉತ್ತಮ. ಇದರಿಂದ ಆಕೆಯ ಆರೋಗ್ಯವಲ್ಲದೆ, ಮುಂದೆ ಹುಟ್ಟಲಿರುವ ಮಗು ಕೂಡ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.

ಇನ್ನು ಮಹಿಳೆಯರು ತಾವು ಸೇವಿಸುವ ಆಹಾರದ ಬಗ್ಗೆಯೂ ಎಚ್ಚರವಹಿಸಬೇಕು. ಏಕೆಂದರೆ ಆಹಾರದಲ್ಲಿರುವ ಕೆಲವು ಸೂಕ್ಷಾಣು ಜೀವಿಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಈ ಸಂದರ್ಭದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಅತ್ಯಗತ್ಯ.

ಅತಿಯಾಗಿ ಸಕ್ಕರೆ ಸೇವನೆ, ಆಗಾಗ್ಗೆ ಟೀ, ಕಾಫಿ ಸೇವಿಸುವುದು, ಚಾಕಲೆಟ್ ತಿನ್ನುವುದು ಒಳ್ಳೆಯದಲ್ಲ. ಇದರಲ್ಲಿರುವ ಕೆಫೀನ್ ಅಂಶ ಆಹಾರದಲ್ಲಿ ದೊರೆಯುವ ಕಬ್ಬಿಣದ ಅಂಶವನ್ನು ತಡೆಯುವ ಶಕ್ತಿ ಹೊಂದಿರುವುದರಿಂದ ಆರೋಗ್ಯದ ಮೇಲೆ ಪ್ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಇನ್ನು ಚಿಕ್ಕ ಪುಟ್ಟ (ಶೀತ, ತಲೆನೋವು ಹೀಗೆ) ತೊಂದರೆ ಕಾಣಿಸಿಕೊಂಡಾಗ ಮಾತ್ರೆ ಸೇವಿಸುವುದನ್ನು ನಿಲ್ಲಿಸಬೇಕು. ಯಾವುದೇ ಮಾತ್ರೆ ಸೇವಿಸುವ ಮೊದಲು ವೈದ್ಯರ ಸಲಹೆ ಅಗತ್ಯವಾಗಿ ಪಡೆಯಬೇಕು. ಇಲ್ಲದಿದ್ದರೆ ಸೇವಿಸುವ ತಾಯಿಗೂ ಹೊಟ್ಟೆಯಲ್ಲಿರುವ ಮಗುವಿಗೂ ಅಪಾಯ ತಂದೊಡ್ಡಬಹುದು.

See also  ಕೆಮ್ಮು-ಸೀನಿಂದಲೂ ಹೆಚ್1ಎನ್1 ಹರಡಬಹುದು ಎಚ್ಚರ!

ಮೂಢನಂಬಿಕೆಗೆ ಮಾರು ಹೋಗದೆ, ಹೆಚ್ಚಿನ ಪಥ್ಯವೂ ಮಾಡದೆ ಉತ್ತಮ ಆರೋಗ್ಯಕರ ತರಕಾರಿ, ಮೊಟ್ಟೆ, ಹಾಲು ಮುಂತಾದ ಆಹಾರವನ್ನು ಸೇವಿಸುವುದು ಒಳ್ಳೆಯದು. ವ್ಯಾಯಾಮ, ವಾಯುವಿಹಾರ ಮುಂದುವರೆಸಿ ಆದರೆ ತೂಕ ಕಡಿಮೆ ಮಾಡುವ ಇನ್ನಿತರ ಚಟುವಟಿಕೆಯಿಂದ ದೂರವಿರಿ.

ವೈದ್ಯರ ಸಲಹೆ ಪಡೆದು ಗರ್ಭ ಧರಿಸಿದ 14ರಿಂದ 16 ವಾರಗಳ ಬಳಿಕ ಆರೋಗ್ಯ ವೃದ್ಧಿಸುವ ಮಾತ್ರೆಗಳಾದ ಐರನ್, ಪೋಲೆಟ್(ವಿಟಮಿನ್ ಬಿ9) ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸುವುದು ಒಳ್ಳೆಯದು. ಗರ್ಭಿಣಿ ಮಹಿಳೆಯರು ಔಷಧಿ ಸೇವಿಸುವುದು ಇರಬಹುದು ಅಥವಾ ಇನ್ನಿತರ ಯಾವುದೇ ಚಟುವಟಿಕೆ ನಡೆಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರೋ ಅಷ್ಟೇ ಅನುಕೂಲವನ್ನು ಪಡೆಯಬಹುದು ಎಂಬುವುದನ್ನು ಮರೆಯಬಾರದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು