ದತ್ತರನ್ನು ಕುರಿತು ಪುರಾಣ, ಜನಪದ ಹಾಗೂ ಭಾಗವತಗಳಲ್ಲಿ ವಿಶೇಷ ಕಥಾನಕಗಳಿವೆ. ದತ್ತಾತ್ರೇಯ ವಿಷ್ಣುವಿನ ಅವತಾರವಾಗಿದ್ದು, ಅತ್ರಿಋಷಿಯತ ಪಸ್ಸಿಗೆ ಮೆಚ್ಚಿ ವಿಷ್ಣು ಅವರ ಮಗನಾಗಿ ಜನಿಸಿದನೆಂದು ಮಹಾಭಾರತದಲ್ಲಿ ಹೇಳಲಾಗಿದೆ.
ಅತ್ರಿಮಹರ್ಷಿಯ ಮಹಾ ಪತಿವ್ರತಾ ಪತ್ನಿ ಅನುಸೂಯಾಗೆ ವಿಷ್ಣು ದತ್ತನಾದುದರಿಂದ ದತ್ತ-ಆತ್ರೇಯ ದತ್ತಾತ್ರೇಯ ಎನಿಸಿದನೆಂದು ಹೇಳಲಾಗಿದೆ. ಮಾರ್ಕಂಡೇಯ ಪುರಾಣದ ಪ್ರಕಾರ ಋಷಿ ಮಾಂಡವ್ಯ ತೊನ್ನು ರೋಗ ಪೀಡಿತ ಕೌಶಿಕನೆಂಬ ಬ್ರಾಹ್ಮಣನಿಗೆ ‘ಸೂರ್ಯೋದಯ ಆಗುವುದರೊಳಗೆ ನೀನು ಸತ್ತು ಹೋಗು’ ಎಂದು ಶಾಪ ಕೊಟ್ಟ, ಇದನ್ನು ಕೇಳಿದ ಬ್ರಾಹ್ಮಣ ಕೌಶಿಕನ ಪತಿವ್ರತಾ ಪತ್ನಿಗೆ ಆಘಾತವಾಯಿತು. ಅವಳು ತನ್ನ ಗಂಡನನ್ನು ಉಳಿಸಿಕೊಳ್ಳಲುಮುಂದಾದಳು, ತನ್ನ ಪಾತಿವ್ರತ್ಯದ ಮಹಿಮೆಯಿಂದ ಸೂರ್ಯೋದಯ ಆಗುವುದನ್ನೇ ತಡೆದಳು. ಆಗ ಕಾಲಚಕ್ರಕ್ಕೆದಿಗ್ನಂಧನ ಹಾಕಿದ ಕೌಶಿಕನ ಪತ್ನಿಯ ಪತಿವ್ರತಾಮಹಿಮೆಗೆ ಹೆದರಿದ ದೇವತೆಗಳು ಅವಳ ಕೋಪವನ್ನು ತಣಿಸಲುಅತ್ರಿಮಹರ್ಷಿಯ ಪತ್ನಿ ಅನಸೂಯೆಯನ್ನು ಪ್ರಾರ್ಥಿಸುತ್ತಾರೆ.
ಅನಸೂಯಾ ಕೌಶಿಕನ ರೋಗವನ್ನು ಹೋಗಲಾಡಿಸಿ ಅವಳ ಕೋಪವನ್ನು ತಣಿಸುತ್ತಾಳೆ, ಕೌಶಿಕನ ಸತಿಯ ಪಾತಿವ್ರತ್ಯಕ್ಕೆ ಮೆಚ್ಚಿದ ವಿಷ್ಣುವು ಆಕೆಯ ಆಸೆಯಂತೆ ದತ್ತಾತ್ರೇಯನಾಗಿ ಜನಿಸಿದ ಎನ್ನಲಾಗಿದೆ. ದತ್ತಾತ್ರೇಯನ ಜನನಕ್ಕೆ ಸಂಬಂಧಿಸಿದ ಇನ್ನೊಂದು ಹೆಚ್ಚು ಪೌರಾಣಿಕ ಕಥಾನಕವಿದೆ. ಒಮ್ಮೆ ನಾರದರು ತ್ರಿಮೂರ್ತಿಗಳ ಪತ್ನಿಯರಾದ ಪಾರ್ವತಿ, ಲಕ್ಷ್ಮೀ, ಸರಸ್ವತಿಯರ ಎದುರು ಆತ್ರಿಋಷಿಗಳ ಪತ್ನಿ ಅನಸೂಯಾಳ ಪಾತಿವ್ರತ್ಯದ ಮಹಾತೆಯನ್ನು ಎಷ್ಟೊಂದು ಹೊಗಳಿದರೆಂದರೆ ಅವರಿಗೆ ಅನಸೂಯಾಳ ಮೇಲೆ ಅಸೂಯೆ ಆರಂಭವಾಯಿತು. ಆಗ ಅವರು ತಂತಮ್ಮ ಪತಿಗಳಿಗೆ ಅಂದರೆ ಅನಸೂಯಾಳನ್ನು ಪರೀಕ್ಷಿಸಬೇಕೆಂದು ದುಂಬಾಲು ಬಿದ್ದರು.
ಅನಸೂಯಾಳ ಪಾತಿವ್ರತ್ಯದ ಮಹಿಮೆಯನ್ನು ಮೊದಲೇ ಅರಿತಿದ್ದ ಅವರು ‘ಇದು ನಿಮ್ಮ ಮತ್ಸರದ ಮೊಂಡಾಟ, ದೇವಲೋಕದಲ್ಲಿರುವ ನೀವು ಭೂಲೋಕದಲ್ಲಿರುವ ಸುದ್ದಿಯ ಮೇಲೆ ಅಸೂಯೆ ಪಡುವುದು ಭೂಷಣವಲ್ಲ. ಇದರ ಪರಿಣಾಮ ಸರಿ ಆಗುವುದಿಲ್ಲ.” ಎಂದು ಬುದ್ದಿ ಹೇಳಿದರೂ ಹೆಂಡಂದಿರು ಒಪ್ಪುವುದಿಲ್ಲ. ಬೇರೆ ದಾರಿಯಿಲ್ಲದೇ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಬ್ರಾಹ್ಮಣ ವೇಷ ಧರಿಸಿ, ಅನಸೂಯಾಳ ಮನೆಗೆ ಬರುತ್ತಾರೆ. ಅದು ಅತ್ತಿ ಋಷಿಗಳು ಯಜ್ಞಕ್ಕೆ ಹೋದ ಸಮಯ, ಅತಿಥಿ ಸತ್ಕಾರ ಸಂಪನ್ನಳಾದ ಅನಸೂಯಾ ಆ ಬ್ರಾಹ್ಮಣ ಅತಿಥಿಗಳನ್ನು ಸ್ವಾಗತಿಸುತ್ತಾಳೆ. ಅವರ ಭೋಜನಕ್ಕೆ ವ್ಯವಸ್ಥೆ ಮಾಡಿ ಊಟಕ್ಕೆ ಕರೆಯುತ್ತಾಳೆ.
ಆಗ ಬ್ರಾಹ್ಮಣ ವೇಷದ ತ್ರಿಮೂರ್ತಿಗಳು ಒಂದು ವಿಚಿತ್ರ ಬೇಡಿಕೆಯನ್ನುಮುಂದಿಡುತ್ತಾರೆ-ನೀವು ಬೆತ್ತಲೆಯಾಗಿ ಬಡಿಸಿದರೆ ಮಾತ್ರ ಆಹಾರ ಸ್ವೀಕರಿಸುತ್ತೇವೆ’. ಆಗ ಮುಗುಲ್ನಕ್ಕ ಪತಿವ್ರತಾ ಶೀರೋಮಣಿ ಅಲ್ಲಿಯೇ ಇದ್ದ ತನ್ನ ಪತಿಯ ಪಾದೋಕವನ್ನು ಅವರ ಮೇಲೆ ಸಿಂಪಡಿಸುತ್ತಾಳೆ. ಆಗ ವಿಸ್ಮಯ ಕಾರಕ ಆವಿಷ್ಕಾರವೊಂದು ಆವಿರ್ಭವಿಸಿತು-ತ್ರಿಮೂರ್ತಿಗಳು ಒಂದೇ ಆಕಾರದ ಮೂರು ಹಸುಗೂಸುಗಳಾಗಿ ಅಳತೊಡಗುತ್ತಾರೆ. ಆಗ ಅನಸೂಯೆ ತಾಯಿಯಂತೆ ಅವರನ್ನು ಎತ್ತಿ ಮುದ್ದಾಡಿಮೊಲೆಯುಡಿಸಿ ತೊಟ್ಟಿಲಲ್ಲಿ ಹಾಕಿ ತೂಗುತ್ತಾಳೆ. ಪತಿ ಅತ್ರಿ ಮಹರ್ಷಿಗಳು ಮನೆಗೆ ಬಂದಾಗ ನಡೆದ ಸಂಗತಿ ತಿಳಿಯುತ್ತಾರೆ. ಹೆಂಡಂದಿರ ಮಾತನ್ನು ಕೇಳಿ ತ್ರಿಮೂರ್ತಿಗಳು ಹಸುಗೂಸುಗಳಾದುದನ್ನು ತಿಳಿದು ಅವರಿಗೆ ನಗು ಬರುತ್ತದೆ.
ಅತ್ತ ದಿನಗಳುರುಳಿದರೂ ತಮ್ಮ ಪತಿರಾಯರು ಬಾರದೇ ಇದ್ದುದರಿಂದ ತ್ರಿಮೂರ್ತಿಗಳ ಪತ್ನಿಯರು ಗಾಬರಿಗೊಳ್ಳುತ್ತಾರೆ. ಆಗ ನಾರದರಿಂದ ಅವರ ಗಂಡಂದಿರು ಅನಸೂಯಾಳ ಆಶ್ರಮದಲ್ಲಿ ಕೂಸುಗಳಾಗಿ ಆಡುತ್ತಿರುವುದು ತಿಳಿಯಿತು. ಆಗ ಆ ಮೂವರೂ ಅತ್ತಿ ಋಷಿಗಳ ಆಶ್ರಮಕ್ಕೆ ದೌಡಾಯಿಸುತ್ತಾರೆ. ಋಷಿದಂಪತಿಗಳಲ್ಲಿ ಕ್ಷಮೆ ಕೋರಿ ಬೇಡುತ್ತಾರೆ. ಆಗ ಆ ಪತ್ನಿಯರಲ್ಲಿ ಪತಿವ್ರತಾ ಶಿರೋಮಣಿ ಕರುಣೆ ತೋರುತ್ತಾಳೆ. ಮೇಲಾಗಿ ಲೋಕದ ಸ್ಥಿತಿ- ಗತಿಗಳ ನಿರ್ವಾಹಕರಾದ ತ್ರಿಮೂತಿಗಳ ಆವಶ್ಯಕತೆಯ ಅರಿವೂ ಆ ಋಷಿದಂಪತಿಗಳಿಗೆ ಇರುತ್ತದೆ. ಕಾರಣ ಅನಸೂಯಾ ಮತ್ತೆ ತನ್ನ ಪತಿಯ ಪಾದೋದಕವನ್ನು ಅವರ ಮೇಲೆ ಸಿಂಪಡಿಸಿ ಅವರನ್ನು ಮೊದಲಿನಂತೆಯೇ ಪರಿವರ್ತಿಸುತ್ತಾಳೆ. ಆದರೆ ತ್ರಿಮೂರ್ತಿಗಳನ್ನುಮಕ್ಕಳಾಗಿಸಿ, ಎದೆ ಹಾಲನ್ನು ಕುಡಿಸಿಮುದ್ದಾಡಿದ ಅವಳ ತಾಯ್ತನ ಜಾಗೃತವಾಗುತ್ತದೆ.
ಆಗ ತ್ರಿಮೂರ್ತಿಗಳ ಅಂಶಗಳನ್ನೇ ಸಂಗಮಿಸಿ, ಲೋಕ ಕಲ್ಯಾಣಕ್ಕಾಗಿ ಮೂರು ತಲೆ, ಆರು ಕೈಗಳು ಆದರೆ ಒಂದೇ ದೇಹವುಳ್ಳ ದತ್ತಾತ್ರೇಯ ಮೂರ್ತಿಯನ್ನು ಸೃಷ್ಟಿಸಿ ಜೀವ ತುಂಬುತ್ತಾಳೆ. ‘ಪರಮ ಆದೈತದ ಸಾಕಾರ ರೂಪವೇ ದತ್ತಾತ್ರೇಯ’ ಎಂದು ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರಒಡೆಯರ್ ಅವರ ಕೃತಿ ‘ದತ್ತಾತ್ರೇಯ’ ಹೇಳುತ್ತದೆ. ಸ್ವತಃ ದತ್ತಾತ್ರೇಯನೇ ವಿರಚಿತ ಎಂದು ಹೇಳಲಾಗುವ ‘ಜೀವನಮುಕ್ತ ಗೀತ’ ಹಾಗೂ ಅವಧೂತ ಗೀತೆಗಳು’ ಎಂಬುವುಗಳವ್ಯಾಖ್ಯಾನಗಳೂ ದತ್ತಾತ್ರೇಯ ಗ್ರಂಥದಲ್ಲಿವೆ.
ದತ್ತಾತ್ರೇಯ ಶೀಲ, ಸಚ್ಚಾರಿತ್ರ್ಯ, ನಡತೆ, ಪಾತಿವ್ರತ್ಯಗಳ ಪ್ರತೀಕ, ಈ ದೇವನಲ್ಲಿ ‘ನಾನು’ ಎಂಬ ಅಹಂಕಾರವಿಲ್ಲ. ಎಲ್ಲರೂ ಕೂಡಿ ಆರಾಧಿಸುವ ಈ ದೇವನಲ್ಲಿ ಮೇಲು- ಕೀಳು ಭಾವನೆ ಇಲ್ಲ. ಎಲ್ಲ ದೇವರುಗಳು ಒಂದೇ ಎಂಬ ಭಾವವೇ ಇಲ್ಲಿ ಪ್ರಧಾನ. ಜ್ಞಾನ-ವೈರಾಗ್ಯಗಳಮಹಾಮೇಳವೇ ಇಲ್ಲಿದೆ. ಇಂತಹ ಮಹಿಮಾತೀತ ದೇವ ದತ್ತನಜಯಂತಿಯನ್ನು ಬಹುತೇಕ ಭಾರತದಲ್ಲೆಲ್ಲ ಮಾರ್ಗಶಿರ ಹುಣ್ಣಿಮೆ ದಿನ ಆಚರಿಸುತ್ತಾರೆ. ಈ ದಿನ ‘ಗುರು ಚರಿತೆ ಪಾರಾಯಣ’, ‘ಔದುಂಬರ ವೃಕ್ಷ’ ಹಾಗೂ ‘ದತ್ತಾತ್ರೇಯ ಮೂರ್ತಿ’ಗಳ ಪೂಜೆ ನಡೆಯುತ್ತದೆ. ದತ್ತ ಜಯಂತಿಯನ್ನು ಮಾರ್ಗಶಿರ ಹುಣ್ಣಿಮೆಗೆಅರ್ಪಿಸಲಾಗಿದೆ.
ಮಾರ್ಗಶಿರ ಶುದ್ಧ ಹುಣ್ಣಿಮೆಯಂದು ಆಚರಿಸುವ ಭಕ್ತಿಪೂರ್ವಕ ‘ದತ್ತಾತ್ರೇಯ ಜಯಂತಿ’ ಭಗವಾನ್ ದತ್ತಾತ್ರೇಯರು ಅವತರಿಸಿದ ಪುಣ್ಯದಿನ. ಆದರೆ ದತ್ತ ಜಯಂತಿಯನ್ನು ಮಾರ್ಗಶಿರ ಹುಣ್ಣಿಮೆಯಂದೇ ಆಚರಿಸುತ್ತಾರೆ.
-ಮಣಿಕಂಠತ್ರಿಶಂಕರ್, ಮೈಸೂರು.