News Kannada
Monday, February 26 2024
ವಿಶೇಷ

ನವರಾತ್ರಿಯ 2ನೇ ದಿನ “ಬ್ರಹ್ಮಚಾರಿಣಿ” ಪೂಜಾ ಮಹತ್ವದ ಮಾಹಿತಿ ಇಲ್ಲಿದೆ

Photo Credit : News Kannada

ನವರಾತ್ರಿಯ ಎರಡನೆಯ ದಿನ ನವ ದುರ್ಗೆಯ ಎರಡನೇ ರೂಪವಾದ ಬ್ರಹ್ಮಚಾರಿಣಿ ಪೂಜೆಯನ್ನು ಮಾಡುತ್ತೇವೆ. ಬ್ರಹ್ಮಚಾರಿಣಿ ಎಂದರೆ ಅವಿವಾಹಿತರು ಎಂಬ ಅರ್ಥವಲ್ಲ. ಇದರ ಅರ್ಥ ಕಠಿಣವಾದ ತಪಸ್ಸನ್ನು ಅಚರಿಸಿದವರು ಎಂದಾಗುತ್ತದೆ. ಹೆಸರೇ ಸೂಚಿಸುವಂತೆ ಬಿಳಿ ವಸ್ತ್ರವನ್ನು ಧರಿಸಿರುವ ಈಕೆಯ ಒಂದು ಕೈಯಲ್ಲಿ ಜಪಸರ ಇದ್ದರೆ ಮತ್ತೊಂದು ಕೈಯಲ್ಲಿ ಕಮಂಡಲವಿದೆ. ಪೂರ್ವಜನ್ಮದಲ್ಲಿ ನಾರದರ ಉಪದೇಶದಿಂದ ಶಿವನನ್ನೇ ಪತಿಯನ್ನಾಗಿ ಪಡೆಯಲು ಘೋರ ತಪಸ್ಸನ್ನು ಮಾಡುತ್ತಾಳೆ. ಆದ್ದರಿಂದಲೇ ಈಕೆಗೆ ಬ್ರಹ್ಮಚಾರಿ ಎಂಬ ಹೆಸರು ಬರುತ್ತದೆ. ಉಮಾ ಎಂಬುವುದು ಈಕೆಯ ಮತ್ತೊಂದು ಹೆಸರು. ಈಕೆಯ ತಪಸ್ಸನ್ನು ಕಂಡ ಮೂರು ಲೋಕಗಳು ಬೆಚ್ಚಿ ಬೀಳುತ್ತವೆ.  ಬ್ರಹ್ಮನು ಸ್ವತಃ ಆಕಾಶವಾಣಿಯಿಂದ ದೇವಿ ಎಂದು ಕರೆಯುತ್ತಾನೆ. ಈ ತಪಸ್ಸಿನಿಂದ ಶಿವನು ನಿನ್ನ ಪತಿಯಾಗುತ್ತಾನೆ. ಅಷ್ಟೇ ಅಲ್ಲದೆ ನಿನ್ನ ಮನದಲ್ಲಿ ಇರುವ ಎಲ್ಲಾ ಆಸೆ ಆಕಾಂಕ್ಷೆಗಳು ಪೂರ್ಣಗೊಳ್ಳುತ್ತವೆ ಎಂದು ಹೇಳುತ್ತಾನೆ. ಇದನ್ನು ಒಪ್ಪುವ ಬ್ರಹ್ಮಚಾರಿಣಿ ತಪಸ್ಸನ್ನು ಪೂರ್ಣಗೊಳಿಸಿ ವಿಚಲಿತಳಾಗುತ್ತಾಳೆ.

​ಬ್ರಹ್ಮಚಾರಿಣಿ ಪೂಜೆ ವಿಧಾನ​:
ಈ ದಿನ ಬೆಳಿಗ್ಗೆ ಮೊದಲು ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮತ್ತು ಶುಭ್ರವಾದ ಬಟ್ಟೆಗಳನ್ನು ಧರಿಸಿ. ತಾಯಿಗೆ ಪಂಚಾಮೃತ ಅಭಿಷೇಕ ಮಾಡಿ. ಇದರ ನಂತರ ಅಕ್ಷತೆ, ಚಂದನ ಮತ್ತು ಕುಂಕುಮವನ್ನು ತಾಯಿ ದುರ್ಗೆಗೆ ಅರ್ಪಿಸಿ. ತಾಯಿ ಬ್ರಹ್ಮಚಾರಿಣಿ ಕಮಲ ಮತ್ತು ದಾಸವಾಳದ ಹೂವುಗಳನ್ನು ತುಂಬಾ ಇಷ್ಟಪಡುತ್ತಾಳೆ, ಆದ್ದರಿಂದ ಖಂಡಿತವಾಗಿಯೂ ಈ ಹೂವುಗಳನ್ನು ಅರ್ಪಿಸಿ. ಕಲಶ ಮತ್ತು ದೇವತೆಯನ್ನು ವಿಧಿ – ವಿಧಾನಗಳ ಪ್ರಕಾರ ಪೂಜಿಸಿ.ತುಪ್ಪ ಮತ್ತು ಕರ್ಪೂರದಿಂದ ಮಾಡಿದ ದೀಪದಿಂದ ಕಡ್ಡಾಯವಾಗಿ ದೇವಿಗೆ ಆರತಿಯನ್ನು ಮಾಡಬೇಕು.

ಇನ್ನು ತಾಯಿ ಬ್ರಹ್ಮಚಾರಿಣಿಗೆ ಹಳದಿ ಬಣ್ಣದ ಸಿಹಿ ತಿಂಡಿಯನ್ನು ಅರ್ಪಿಸಲು ಮರೆಯದಿರಿ. ಇದರಿಂದ ತಾಯಿ ಬ್ರಹ್ಮಚಾರಿಣಿ ಬಹಳ ಸಂತೋಷಪಡುತ್ತಾಳೆ ಮತ್ತು ಆಕೆಯು ಆಶೀರ್ವಾದವನ್ನು ಕರುಣಿಸುತ್ತಾಳೆ. ದೇವಿಗೆ ತಪ್ಪದೇ ಮಲ್ಲಿಗೆ ಹೂವನ್ನು ಅರ್ಪಿಸುವುದು ತುಂಬಾ ಉತ್ತಮ. ಜೊತೆಗೆ ತುಪ್ಪದ ದೀಪ ಬೆಳಗಿಸಿ.

​ಬ್ರಹ್ಮಚಾರಿಣಿ ದೇವಿಯ ಶಕ್ತಿಯುತ ಮಂತ್ರ​:
ಯಾ ದೇವಿ ಸರ್ವ ಭೂತೇಷು ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ|
– ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ
– ದಧನಾಕರ ಪದ್ಮಭಯಂ ಅಕ್ಷಮಾಲಾ ಕಮಂಡಲಂ,
ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ.

ಎರಡನೇ ದಿನದ ಪೂಜಾ ಮಹತ್ವ:
ಈ ದಿನ ಬ್ರಹ್ಮಚಾರಿಣಿ ಮಂತ್ರವನ್ನು ಓದಬೇಕು, ಆಗ ದೇವಿ ಸಂತುಷ್ಟಳಾಗಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ ಎರಡನೇ ದಿನ ದೇವಿಗೆ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ನೈವೇದ್ಯವನ್ನು ಅರ್ಪಿಸಿ ಆರತಿ ಮಾಡುವುದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಅದರಲ್ಲಿಯೂ ನಿಷ್ಕಲ್ಮಷ ಮನಸ್ಸಿನಿಂದ ನವರಾತ್ರಿಯಲ್ಲಿ ಇವಳನ್ನು ಪೂಜಿಸುವುದರಿಂದ ಬೇಡಿದ ವರಗಳನ್ನು ಕರುಣಿಸ್ತಾಳೆ. ಜೊತೆಗೆ ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ ಎಂಬ ಪ್ರತೀತಿ ಇದೆ. ಭಕ್ತರಲ್ಲಿರುವ ದುರ್ಗುಣಗಳು ಕಳೆದು ಉದಾತ್ತತೆ, ಸದ್ಗುಣಗಳು ಬೆಳೆಯುತ್ತದೆ. ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುವುದು ಎಂಬ ನಂಬಿಕೆ ಇದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು