ಮಡಿಕೇರಿ: ಈಗ ಮನುಷ್ಯನಿಗಿಂತಲೂ ಸಾಕು ಪ್ರಾಣಿಗಳ ಬಗ್ಗೆ ವ್ಯಾಮೋಹ ಜನರಿಗೆ ಜಾಸ್ತಿಯಾಗಿದೆ. ಹಿಂದೆ ತಮ್ಮ ರಕ್ಷಣೆಗಾಗಿ ಮನೆಯಲ್ಲಿ ನಾಯಿ ಬೆಕ್ಕನ್ನು ಸಾಕುತ್ತಿದ್ದರು. ಬದಲಾದ ಕಾಲದಲ್ಲಿ ಫ್ಯಾಷನ್ಗಾಗಿ ಸಾಕುತ್ತಿದ್ದಾರೆ. ಬೆಕ್ಕುಗಳನ್ನು ಇಲಿ ಹಿಡಿಯಲು ಸಾಕುತ್ತಿದ್ದ ಕಾಲವಿತ್ತು. ಆದರೆ ಈಗ ಅವುಗಳ ಅಂದ ಚೆಂದವನ್ನು ನೋಡಿ ಮನೆಯಲ್ಲಿ ಸಾಕುವುದರಿಂದ ಮತ್ತು ಅವುಗಳಿಗೆ ಸರಿ ಹೊಂದುವಂತಹ ಆಹಾರಗಳನ್ನೇ ನೀಡುವುದರಿಂದ ದಷ್ಟಪುಷ್ಟವಾಗಿ ಬೆಳೆಯುವ ಅವು ಮನೆಗೊಂದು ಶೋಭೆ ಎಂಬಂತೆ ಬಿಂಬಿತವಾಗುತ್ತಿವೆ.
ನಾಯಿಗಳಲ್ಲೂ ವಿದೇಶಿ ತಳಿಗಳಿರುವಂತೆ ಬೆಕ್ಕುಗಳನ್ನು ಕೂಡ ತರಲಾಗುತ್ತಿದೆ. ಇದಕ್ಕೊಂದು ಸಾಕ್ಷಿ ಕೊಡಗಿನ ಬಿರುನಾಣಿಯವರಾದ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ನೆಲ್ಲಿರ ರೋಷನ್ ಬೋಪಯ್ಯ ಹಾಗೂ ರಶ್ಮಿರೋಷನ್ ಮನೆಯಲ್ಲಿರುವ ಪರ್ಷಿಯನ್ ಬೆಕ್ಕು.
ಈ ಪರ್ಷಿಯನ್ ಅವರ ಮನೆಗೆ ಅಲಂಕರಿಸುವಂತೆ ಮಾಡಿದ್ದು ರಶ್ಮಿ ಅವರ ಸ್ನೇಹಿತೆಯಂತೆ. ಆಕೆ ಅದನ್ನು ಉಡುಗೊರೆಯಾಗಿ ನೀಡಿದ್ದರಂತೆ.
ಪಷರ್ಿಯನ್ ಬೆಕ್ಕು ಎಂದ ಮೇಲೆ ಸಾಮಾನ್ಯ ಬೆಕ್ಕಿನಂತೆ ಸಾಕಲಾಗುವುದಿಲ್ಲ. ಹೀಗಾಗಿ ಇಂಟರ್ನೆಟ್ನಲ್ಲಿ ಸಚರ್್ ಮಾಡಿ ಒಂದಷ್ಟು ಮಾಹಿತಿ ಕಲೆ ಹಾಕಿ ಅದನ್ನು ಹೇಗೆ ಸಾಕಬೇಕು? ಎಂತಹ ಆಹಾರ ನೀಡ ಬೇಕು ಹೀಗೆ ಎಲ್ಲವನ್ನೂ ತಿಳಿದುಕೊಂಡು ಅದರಂತೆ ಸಾಕತೊಡಗಿದರು. ಬೆಳೆಯುತ್ತಾ ಬಂದಂತೆ ಇದು ಸಿಂಹದ ಮರಿಯಂತೆ ಕಾಣಿಸತೊಡಗಿತು. ಕುತ್ತಿಗೆ ಸುತ್ತ ರೋಮಗಳು ದಟ್ಟವಾಗಿ ಬೆಳೆದಿತ್ತು. ಹೀಗಿರುವಾಗ ಕುತ್ತಿಗೆ ಸುತ್ತ ಬಿಟ್ಟು ಉಳಿದ ಕೂದಲನ್ನು 1000 ರೂ. ನೀಡಿ ಟ್ರಿಮ್ ಮಾಡಿಸಿದರು. ಹೀಗೆ ಮಾಡಿಸಿದ ಲಯನ್ ಕಟ್ ಈಗ ಎಲ್ಲರ ಗಮನಸೆಳೆಯುತ್ತಿದೆ.